Breaking News

Daily Archives: ಅಕ್ಟೋಬರ್ 24, 2026

ಸೌದಿಯಲ್ಲಿ ಸಿಲುಕಿದ ಸಾವಿರಾರು ಕನ್ನಡಿಗರು – ರಕ್ಷಣೆಗಾಗಿ ಚಿಕ್ಕಮಗಳೂರು ಮೂಲದ ವ್ಯಕ್ತಿಯಿಂದ ಸರ್ಕಾರಕ್ಕೆ ಮನವಿ

ಚಿಕ್ಕಮಗಳೂರು: ಸೌದಿ ಅರೇಬಿಯಾದ  ರಿಯಾದ್ ಏರ್‌ಪೋರ್ಟ್‌ ಮೇಲೆ ಹೌತಿಗಳು ದಾಳಿ ನಡೆಸಿದ ಬಳಿಕ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸುಮಾರು 4,000 ಕನ್ನಡಿಗರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ  ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಶೇಷ ವಿಮಾನದ ವ್ಯವಸ್ಥೆ ಮಾಡಬೇಕು ಎಂದು ಚಿಕ್ಕಮಗಳೂರು  ಮೂಲದ ಅಪ್ಸರ್ ಹಿಂದೂಸ್ಥಾನಿ ಮನವಿ ಮಾಡಿದ್ದಾರೆ. ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮಧ್ಯಮ ವರ್ಗ ಹಾಗೂ ಕೆಳ ವರ್ಗದ ಜನರಿಗೆ ಸರ್ಕಾರ …

Read More »

ಮೇಲ್ಮನೆ ಚುನಾವಣೆ ಮುಗಿದ ಬೆನ್ನಲ್ಲೇ ಹಾಲಿನ ದರ ಏರಿಕೆ

ಮಂಡ್ಯ: ರಾಜ್ಯದ ಜನತೆಗೆ ಶೀಘ್ರದಲ್ಲೇ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ. ವಿಧಾನ ಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ಅಕ್ಟೋಬರ್ 27ರಂದು ಹಾಲಿನ ಪರಿಷ್ಕೃತ ದರ ಪ್ರಕಟವಾಗಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ. ದರ ನಿಗದಿ ಮಾಡಬೇಕೆಂದು ಆಗ್ರಹಿಸಿ ನೂರಾರು ರೈತರು ಮೈಸೂರು–ಬೆಂಗಳೂರು ದಶಪಥ ಹೆದ್ದಾರಿಯ ಗಣಂಗೂರು ಟೋಲ್ ಬಳಿ ಹೆದ್ದಾರಿ ತಡೆದು ಇಂದು ಬೃಹತ್ ಪ್ರತಿಭಟನೆ ನಡೆಸಿದರು. …

Read More »

2011ರ ಘಟನೆ ಇಟ್ಕೊಂಡು 2023ರಲ್ಲಿ ಸಿದ್ದರಾಮಯ್ಯ ಸ್ಟಿಂಗ್‌ ಆಪರೇಷನ್‌; ಕೃಪಾ ಆಳ್ವಾ ವಿರುದ್ಧ ಹೆಚ್‌ಡಿಕೆ ಮತ್ತೊಂದು ಬಾಂಬ್‌

ಬೆಂಗಳೂರು: 2011ರಲ್ಲಿ ನಡೆದ ಘಟನೆ ಇಟ್ಕೊಂಡು 2023ರಲ್ಲಿ ಕೃಪಾ ಆಳ್ವಾ ಅವರಿಂದ ಸ್ಟಿಂಗ್‌ ಆಪರೇಷನ್‌ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ  ಮತ್ತೊಂದು ಬಾಂಬ್‌ ಸಿಡಿಸಿದರು. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವು ವಿಚಾರಗಳನ್ನ ಪ್ರಸ್ತಾಪಿಸಿದರು. ಕೆಪಿಎಸ್‌ಸಿ, ನೈಸ್, ಬಿಡದಿ, ಸ್ಟಿಂಗ್ ವಿಚಾರ ಯಾವುದನ್ನು ನಾನು ಬಿಡಲ್ಲ. ಡಿಕೆ ಶಿವಕುಮಾರ್‌ ಅವರಿಂದ ಸಿದ್ದರಾಮಯ್ಯ ಅವರ ವರ್ಚಸ್ಸು ಹಾಳಾಗಿದೆ. ಯತೀಂದ್ರ ಹೇಳಿದ್ದು ಸತ್ಯ, ನಿಮಗೆ ಸ್ವಲ್ಪ ಕ್ರಿಯೆ ಇದ್ದರೆ …

Read More »

ಇಡ್ಲಿಯಲ್ಲಿ ದತ್ತೂರ ಬೀಜದ ಪುಡಿ ಬೆರೆಸಿ ಪತಿ ಕೊಲೆ: ಪತ್ನಿ, ಪ್ರಿಯಕರ ಅರೆಸ್ಟ್

ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮೈಸೂರು ಜಿಲ್ಲಾ ಪೊಲೀಸರು  ಬಂಧಿಸಿದ್ದಾರೆ. ಮೈಸೂರಿನ ಹುಣಸೂರು ತಾಲೂಕಿನ ವಿನೋಬ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 35 ವರ್ಷದ ರಾಮಪ್ರಸಾದ್ ಕೊಲೆಯಾದ ದುರ್ದೈವಿ. ಮೈಸೂರಿನ ಕೆಸರೆಯ ಪವಿತ್ರಾಳನ್ನು ರಾಮಪ್ರಸಾದ್ ಮದುವೆಯಾಗಿದ್ದ. ದಂಪತಿಗೆ 11 ವರ್ಷದ ಗಂಡು ಮಗು ಹಾಗೂ 9 ವರ್ಷದ ಹೆಣ್ಣು ಮಗು …

Read More »

ಆಸ್ತಿ ವಿವಾದ – ಮಗಳ ಕಣ್ಣೆದುರೇ ಅತ್ತಿಗೆಯ ಮೇಲೆ ಬೊಲೆರೋ ಹರಿಸಿದ ಮೈದುನ

ಬಾಗಲಕೋಟೆ: ಎರಡು ಎಕರೆ ಆಸ್ತಿ ವಿವಾದಕ್ಕೆ  ಸಂಬಂಧಿಸಿದಂತೆ ಮೈದುನನೇ ಅತ್ತಿಗೆಯ ಮೇಲೆ ಬೊಲೆರೋ ವಾಹನ ಹಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬಾಗಲಕೋಟೆ  ಜಿಲ್ಲೆಯ ಕಂದಗಲ್ ಗ್ರಾಮದಲ್ಲಿ ನೆಡೆದಿದೆ. ಮಂಗಳಾ ದೇವಿ ಹಾಗೂ ಚನ್ನಪ್ಪಗೌಡ ನಾಡಗೌಡರ್ ಎಂಬವರ ಮಧ್ಯೆ ಸುಮಾರು ವರ್ಷಗಳಿಂದ ಆರು ಎಕರೆ ಆಸ್ತಿ ವಿವಾದ ನಡೆದಿತ್ತು. ಚನ್ನಪ್ಪಗೌಡ ಮಂಗಾಳಾದೇವಿಯವರ ಎರಡು ಎಕರೆ ಹೊಲ ಅತಿಕ್ರಮಣ ಮಾಡಿದ್ದಾನೆ ಎಂಬ ಆರೋಪ ಇತ್ತು. ಹೀಗಾಗಿ ಮಂಗಾಳಾದೇವಿಯವರು ಸರ್ವೇಯರ್ ಮೂಲಕ ಹೊಲ …

Read More »

ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ; ಕೋಟೆ ಆವರಣದಲ್ಲಿ ಸಂಭ್ರಮ

ಬೆಳಗಾವಿ: ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯದ ಸ್ಮರಣಾರ್ಥ ನಡೆಯುವ ಮೂರು ದಿನಗಳ ಕಿತ್ತೂರು ಉತ್ಸವಕ್ಕೆ ಶುಕ್ರವಾರ (ಅ.23) ಐತಿಹಾಸಿಕ ಕಿತ್ತೂರಿನಲ್ಲಿ ಅದ್ಧೂರಿ ಚಾಲನೆ ದೊರೆಯಿತು. ರಾಜ್ಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಸ್ವಾಗತಿಸಿ, ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಶಾಸಕ ಬಾಬಾಸಾಹೇಬ ಪಾಟೀಲ ಉತ್ಸವಕ್ಕೆ ಚಾಲನೆ ನೀಡಿದರು. ಚನ್ನಮ್ಮ ವೃತ್ತದಲ್ಲಿ ನಡೆದ ಕಾರ್ಯಕ್ರಮದ ಬಳಿಕ ವೀರರಾಣಿ ಕಿತ್ತೂರು ಚನ್ನಮ್ಮ ಸೇರಿದಂತೆ ಮಹನೀಯರ ಪುತ್ಥಳಿಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕಲ್ಮಠದ …

Read More »

ನಟ ಧನ್ವೀರ್ ವಿರುದ್ಧ ದರ್ಶನ್ ಪಿಎ ನಾಗರಾಜ್ ದೂರು: ಆರ್‌ಆರ್ ನಗರ ಪೊಲೀಸರಿಂದ ಎನ್‌ಸಿಆರ್ ದಾಖಲು!

 ನಟ ಧನ್ವೀರ್ ವಿರುದ್ಧ ನಟ ದರ್ಶನ್ ಅವರ ಆಪ್ತ ಸಹಾಯಕ ನಾಗರಾಜ್ ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಗರಾಜ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಧನ್ವೀರ್ ವಿರುದ್ಧ ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ನಾಗರಾಜ್ ನೀಡಿರುವ ದೂರಿನ ಆಧಾರದ ಮೇಲೆ ಆರ್.ಆರ್. ನಗರ ಪೊಲೀಸರು ಪ್ರಕರಣದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ನಟ ಧನ್ವೀರ್ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಮುಂದಿನ ಕ್ರಮ …

Read More »

ಕೆಕೆ ಕೊಪ್ಪದಲ್ಲಿ ₹30 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನ ನಿರ್ಮಾಣ

ಕೆಕೆ ಕೊಪ್ಪ: ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸುಮಾರು ₹30 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ಕಾಮಗಾರಿಗೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಗ್ರಾಮದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕವಾಗಿ ರೂಪುಗೊಳ್ಳುತ್ತಿರುವ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದ ನಿರ್ಮಾಣ ಕಾರ್ಯವು …

Read More »

ಮೈಸೂರಿನಿಂದ ಬೆಳಗಾವಿ ಮೂಲಕ ವಿಶೇಷ ರೈಲು ಸಂಚಾರ

ಬೆಳಗಾವಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈರುತ್ಯ ರೈಲ್ವೆಯು ಮೈಸೂರು ಮತ್ತು ಬಿಹಾರದ ದರ್ಭಾಂಗಾ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಎರಡೂ ಮಾರ್ಗಗಳಲ್ಲಿ ತಲಾ ಐದು ಟ್ರಿಪ್‌ಗಳಂತೆ ಈ ರೈಲುಗಳು ಸಂಚರಿಸಲಿದ್ದು, ಬೆಳಗಾವಿ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ. ರೈಲು ಸಂಖ್ಯೆ 06211 ಮೈಸೂರು–ದರ್ಭಾಂಗಾ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 27ರಿಂದ ನವೆಂಬರ್ 24ರವರೆಗೆ ಪ್ರತಿ ಮಂಗಳವಾರ ರಾತ್ರಿ 8.05ಕ್ಕೆ ಮೈಸೂರಿನಿಂದ ಹೊರಟು, …

Read More »

ಚೆನ್ನಮ್ಮನ ಆದರ್ಶದಂತೆ ಮಕ್ಕಳನ್ನು ಬೆಳೆಸಿ: ಸಚಿವ ಸತೀಶ್ ಜಾರಕಿಹೊಳಿ ಕರೆ

ಬೆಳಗಾವಿ: ರಾಣಿ ಕಿತ್ತೂರು ಚೆನ್ನಮ್ಮನ ಶೌರ್ಯ, ಧೈರ್ಯ ಮತ್ತು ಸ್ವಾಭಿಮಾನದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯ. ತಂದೆ-ತಾಯಿಗಳು ತಮ್ಮ ಮಕ್ಕಳನ್ನು ರಾಣಿ ಚೆನ್ನಮ್ಮನ ಆದರ್ಶಗಳಂತೆ ಬೆಳೆಸಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಕರೆ ನೀಡಿದರು. ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಶುಕ್ರವಾರ (ಅ. 23) ನಡೆದ 202ನೇ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಣಿ ಚೆನ್ನಮ್ಮನ ಹೋರಾಟ ಮತ್ತು ನಾಯಕತ್ವ …

Read More »