Breaking News

Daily Archives: ಅಕ್ಟೋಬರ್ 17, 2026

ಬರ ನಿರ್ವಹಣೆಗೆ ಬೆಳಗಾವಿಯ ಕೃಷಿ ವಿಜ್ಞಾನಿಗಳ ಮಾಸ್ಟರ್ ಪ್ಲ್ಯಾನ್

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಆರಂಭವಾಗಿದ್ದು, ಮಳೆಯ ವಿಳಂಬದಿಂದ ಬಿತ್ತನೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವುದು, ಪರ್ಯಾಯ ಬೆಳೆಗಳ ಆಯ್ಕೆ ಹಾಗೂ ವೈಜ್ಞಾನಿಕ ಕೃಷಿ ಪದ್ಧತಿಗಳ ಮೂಲಕ ಉತ್ತಮ ಇಳುವರಿ ಪಡೆಯುವ ಕುರಿತು ಕೃಷಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಜಂಟಿಯಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಅಕ್ಟೋಬರ್ 13ರಂದು ಕೆವಿಕೆ ಮತ್ತಿಕೊಪ್ಪದ ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳ …

Read More »

ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವ ನಕಲಿ ಪತ್ರಕರ್ತರ ವಿರುದ್ಧ ಸಂಘಟಿತ ಹೋರಾಟ: ಯಳ್ಳೂರ ಇಬ್ಬರ ವಿರುದ್ಧ FIR

ಬೆಳಗಾವಿ: “ತಾವು ಪತ್ರಕರ್ತರೆಂದು ಹೇಳಿಕೊಂಡು ತಹಸೀಲ್ದಾರ್, ಪಿಡಿಒ, ಕಂದಾಯ ನಿರೀಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಬಹಳಷ್ಟು ದೂರುಗಳು ಬರುತ್ತಿದ್ದು, ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವ ನಕಲಿ ಮತ್ತು ಸ್ವಯಂಘೋಷಿತ ಪತ್ರಕರ್ತರ ವಿರುದ್ಧ ನಮ್ಮ ಸಂಘದಿಂದ ಸಂಘಟಿತ ಹೋರಾಟ ನಡೆಸಲಾಗುತ್ತದೆ” ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಯಳ್ಳೂರ ಮಾಹಿತಿ ನೀಡಿದರು. ಪಟ್ಟಣದ ತಹಸೀಲ್ದಾರ್ ಕಚೇರಿ …

Read More »

42 ರಾಷ್ಟ್ರೀಯ ಪದಕಗಳ ಸಾಧನೆಗೆ ಈಗ ಅಂತಾರಾಷ್ಟ್ರೀಯ ವೇದಿಕೆಯ ಗೌರವ

ಬೆಳಗಾವಿ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 5ನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಬೆಳಗಾವಿ ಜಿಲ್ಲೆಯ ಮುತ್ತಗಾ ಗ್ರಾಮದ ಪ್ರತಿಭಾವಂತ ಪ್ಯಾರಾ ಈಜುಪಟು ಸ್ವಾತಿಕ್ ನಾರಾಯಣ ಪಾಟೀಲ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಸತತ ಅಭ್ಯಾಸ, ಕಠಿಣ ಪರಿಶ್ರಮ ಹಾಗೂ ಅಚಲ ಸಂಕಲ್ಪದ ಮೂಲಕ ಈ ಮಹತ್ವದ ಸಾಧನೆ ಮಾಡಿರುವ ಅವರು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸುವ ಉತ್ಸಾಹದಲ್ಲಿದ್ದಾರೆ. ಎರಡು ಸ್ಪರ್ಧೆಗಳಲ್ಲಿ ಸ್ವಾತಿಕ್ ಕಣಕ್ಕೆ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಸ್ವಾತಿಕ್ ಎರಡು ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. …

Read More »