Breaking News

Daily Archives: ಅಕ್ಟೋಬರ್ 17, 2026

ಬಾಡಿಗೆ ಮನೆಯಲ್ಲಿ ಟೆಕ್ಕಿ ಅನುಮಾನಾಸ್ಪದ ಸಾವು; 6 ತಿಂಗಳ ಬಳಿಕ ತನಿಖೆಯಲ್ಲಿ ಸತ್ಯ ರಿವೀಲ್‌

ಬೆಂಗಳೂರು: ಬೆಂಗಳೂರಿನಲ್ಲಿ  ಒಂಟಿಯಾಗಿ ವಾಸಿಸುತ್ತಿದ್ದ ಟೆಕ್ಕಿಯೊಬ್ಬರು ತಮ್ಮ ಮನೆಯಲ್ಲೇ ಬೆತ್ತಲೆಯಾಗಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಆರು ತಿಂಗಳ ಬಳಿಕ ಮಹತ್ವದ ತಿರುವು ಸಿಕ್ಕಿದೆ. ಜಾರ್ಖಂಡ್ ಮೂಲದ 34 ವರ್ಷದ ಪೂಜಾ ದತ್ತಾ ಸಾವಿನ ಸುತ್ತ ಕೇಳಿಬಂದಿದ್ದ ಕೊಲೆ ಶಂಕೆಗೆ ಇದೀಗ ತನಿಖಾ ವರದಿಯಲ್ಲಿ ಉತ್ತರ ಸಿಕ್ಕಿದೆ. ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಏಪ್ರಿಲ್ 27, 2026ರಂದು ಪೂಜಾ ದತ್ತಾ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ …

Read More »

ಕ್ಷಣಾರ್ಧದ ಮಳೆಗೆ ಪಣತ್ತೂರು ಅಂಡರ್‌ಪಾಸ್ ಜಲಾವೃತ- ನೀರಿನಲ್ಲಿ ತೇಲಾಡಿದ ಕಾರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪೂರ್ವ ಭಾಗದಲ್ಲಿ ಸುರಿದ ದಿಢೀರ್ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪಣತ್ತೂರು ರೈಲ್ವೆ ಅಂಡರ್‌ಪಾಸ್ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಅಂಡರ್‌ಪಾಸ್‌ನಲ್ಲಿ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ ಕಾರೊಂದು ನೀರಿನಲ್ಲಿ ತೇಲಾಡಿದ ಆತಂಕಕಾರಿ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವೇ ಗಂಟೆಗಳ ಕಾಲ ಅಬ್ಬರಿಸಿದ ಮಳೆಗೆ ಅಂಡರ್‌ಪಾಸ್ ಕೆರೆಯಂತಾಗಿ ಮಾರ್ಪಟ್ಟಿದೆ. ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ಸಮರ್ಪಕ ವ್ಯವಸ್ಥೆ …

Read More »

CNG ಟ್ರಕ್‌ಗೆ ಕಾರು ಡಿಕ್ಕಿ – ಬಾಲಕ ಸ್ಥಳದಲ್ಲೇ ಸಾವು, ಮೂವರು ಅಪ್ರಾಪ್ತರಿಗೆ ಗಂಭೀರ ಗಾಯ

ದಾವಣಗೆರೆ: ಸಿಎನ್‌ಜಿ ಸಿಲಿಂಡರ್ ತುಂಬಿದ್ದ‌ ಟ್ರಕ್‌ಗೆ ಕಾರು ಡಿಕ್ಕಿಯಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆಯ ಬಾಡ ಕ್ರಾಸ್ ಬಳಿ ನಡೆದಿದೆ. ಸೃಜನ್ (16) ಅಪಘಾತದಲ್ಲಿ ಸಾವನ್ನಪ್ಪಿದ ಬಾಲಕ, ಈತ ಕಾರು ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ರಾಮ್ ತೇಜ್ ರೆಡ್ಡಿ (17), ಅಧಿತ್ಯ (16) ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳು. ಇವರೆಲ್ಲ ದಾವಣಗೆರೆಯ ಶಕ್ತಿ ನಗರ ಹಾಗೂ ಜೆಹೆಚ್ ಪಟೇಲ್ ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿದೆ. ಅಜಾಗರೂಕತೆಯಿಂದ ಕಾರು ಚಾಲನೆ …

Read More »

ಹಾಸ್ಟೆಲ್‌ನ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಬೆಂಗಳೂರು: ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಸಮೀಪ ನಡೆದಿದೆ. ಆಂಧ್ರಪ್ರದೇಶದ ಗುಂತಕಲ್ ಮೂಲದ ವರ್ಷಿತಾ (20) ಮೃತ ವಿದ್ಯಾರ್ಥಿನಿ. ಈಕೆ ಗೀತಂ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಬಿಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ತಂದೆ-ತಾಯಿಗೆ ಕೊನೆಯ ಸಂದೇಶ ವಿದ್ಯಾರ್ಥಿನಿ ಸಾವಿಗೂ ಮುನ್ನ ತನ್ನ ತಂದೆ ಹಾಗೂ ತಾಯಿಗೆ ಪೋನ್‌ನಲ್ಲಿ ಸಂದೇಶ ಕಳುಹಿಸಿರುವ …

Read More »

ಸರ್ಕಾರಿ ಕೆಲಸದ ಅವಧಿಯನ್ನ 10-15 ವರ್ಷಕ್ಕೆ ಲಿಮಿಟ್‌ ಮಾಡಿದ್ರೆ ಹೇಗೆ? – ವಿದ್ಯಾರ್ಥಿಗಳ ಅಭಿಪ್ರಾಯ ಕೇಳಿದ ಹೆಚ್‌ಡಿಕೆ

ಬೆಂಗಳೂರು: ಸರ್ಕಾರಿ ಉದ್ಯೋಗದ ಅವಧಿಯನ್ನ 10 ರಿಂದ 15 ವರ್ಷಗಳಿಗೆ ಸೀಮಿತಗೊಳಿಸುವ ಚಿಂತನೆ ಇದೆ. ಹೀಗೆ ಮಾಡಿದ್ರೆ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕಲ್ಪಿಸಲು ಸಾಧ್ಯವೇ? ಎಲ್ಲರೂ ಬದುಕಲು ಸಾಧ್ಯವಾಗುತ್ತದೆಯೇ? ಈ ಯೋಜನೆ ಪ್ರಾಯೋಗಿಕವಾಗಿ ಸಾಧ್ಯವೇ? ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ  ವಿದ್ಯಾರ್ಥಿಗಳ ಬಳಿ ಅಭಿಪ್ರಾಯ ಕೇಳಿದರು. ವಿದ್ಯಾರ್ಥಿಗಳು, ಯುವ ಜನರು, ಕೆಪಿಎಸ್ಸಿ ಆಯ್ಕೆಯಲ್ಲಿ ಮೋಸ ಹೋದವರು, ಭವಿಷ್ಯದ ಕನಸು ಹೊತ್ತವರು, ಉದ್ಯೋಗ ವಂಚಿತರ ಜೊತೆ ಬೆಂಗಳೂರಿನ  ವಿಜಯನಗರದ …

Read More »

ಕೆಮ್ಮಣ್ಣುಗುಂಡಿ ಬಳಿ ಹುಲಿ ಪ್ರತ್ಯಕ್ಷ – ಪ್ರವಾಸಿಗರಿಗೆ ಅರಣ್ಯ ಇಲಾಖೆ ಎಚ್ಚರಿಕೆ

ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿ ಬಳಿ ಹುಲಿಯೊಂದು ಕಾಣಿಸಿಕೊಂಡಿದೆ. ಹುಲಿಯ ಓಡಾಟದ ದೃಶ್ಯಗಳು ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಈ ಭಾಗಕ್ಕೆ ತೆರಳುವ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿ, ಹೆಬ್ಬೆ ಫಾಲ್ಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಭಾಗದಲ್ಲಿ ಹುಲಿ ಓಡಾಟ ಕಂಡು ಬಂದಿದೆ. ರಸ್ತೆ ಬದಿಯಲ್ಲೇ ಹುಲಿಯನ್ನು ಕಂಡು ಪ್ರವಾಸಿಗರಲ್ಲಿ ಆತಂಕ ಸೃಷ್ಟಿಯಾಗಿದೆ. ಹುಲಿಯ ಓಡಾಟದಿಂದ ಸ್ಥಳೀಯರು ಹಾಗೂ ಪ್ರವಾಸಿಗರು …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಮೋಟಾರ್ ಪಂಪ್‌ಸೆಟ್ ವಿತರಿಸಿದ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮೋಟಾರ್ ಪಂಪ್‌ಸೆಟ್‌ಗಳನ್ನು ಅಧಿಕೃತವಾಗಿ ವಿತರಿಸಿದರು. ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಅರ್ಹ ಫಲಾನುಭವಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ …

Read More »

ರಾಜೀವ ಗಾಂಧಿ ಆವಾಸ ಯೋಜನೆಗೆ ವೇಗ ನೀಡಲು ಶಾಸಕ ಆಸೀಫ್ ಸೇಠ್ ಸೂಚನೆ

ಬೆಳಗಾವಿ: ರಾಜೀವ ಗಾಂಧಿ ಆವಾಸ ಯೋಜನೆಯ ಅನುಷ್ಠಾನ ಹಾಗೂ ಪ್ರಗತಿ ಕುರಿತು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಪರಿಶೀಲನಾ ಸಭೆ ನಡೆಯಿತು. ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯೋಜನೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಈವರೆಗೆ ಕೈಗೊಂಡಿರುವ ಕಾರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಯೋಜನೆಯ ಪ್ರಗತಿಯ ವಿವರಗಳನ್ನು ಸಭೆಗೆ ತಿಳಿಸಿದರು. ಮಾಹಿತಿ …

Read More »

ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯಲ್ಲಿ ವಿಶ್ವ ಅರಿವಳಿಕೆ ದಿನಾಚರಣೆ

ಬೆಳಗಾವಿ: ಶಸ್ತ್ರಚಿಕಿತ್ಸೆಯನ್ನು ಸುರಕ್ಷಿತವಾಗಿ ನಡೆಸುವಲ್ಲಿ ಅರಿವಳಿಕೆ ತಜ್ಞರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ರೋಗಿಗಳ ಸುರಕ್ಷತೆ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಖಚಿತಪಡಿಸುವಲ್ಲಿ ಅವರ ಸೇವೆ ಪ್ರಮುಖವಾಗಿದೆ ಎಂದು ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ್ ಕಂಬಾರ್ ಹೇಳಿದರು. ನಗರದ ಯಳ್ಳೂರು ರಸ್ತೆಯಲ್ಲಿರುವ ಕೆಎಲ್‌ಇ ಸೆಂಟಿನರಿ ಚಾರಿಟೇಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಅರಿವಳಿಕೆ ದಿನದ ಅಂಗವಾಗಿ ಅರಿವಳಿಕೆ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. …

Read More »

ಬೆಳಗಾವಿಯಲ್ಲಿ ನ. 2 ಮತ್ತು 3ರಂದು ಡಿಎಸ್‌ಸಿ ನೇಮಕಾತಿ ರ‍್ಯಾಲಿ

ಬೆಳಗಾವಿ: ಮಾಜಿ ಸೈನಿಕರಿಗಾಗಿ ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ನವೆಂಬರ್ 2 ಮತ್ತು 3ರಂದು ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್ (ಡಿಎಸ್‌ಸಿ) ನೇಮಕಾತಿ ರ‍್ಯಾಲಿ ಆಯೋಜಿಸಲಾಗಿದೆ. ನಿಯಮಿತ ಸೇನೆ ಹಾಗೂ ಪ್ರಾದೇಶಿಕ ಸೇನೆಯಲ್ಲಿ (ಟಿಎ) ಸೇವೆ ಸಲ್ಲಿಸಿ ನಿವೃತ್ತರಾದ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ಗೆ ಸೇರಿದ ಮಾಜಿ ಸೈನಿಕರು ಮಾತ್ರ ಈ ರ‍್ಯಾಲಿಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಸೈನಿಕ ಸಾಮಾನ್ಯ ಕರ್ತವ್ಯ  ಮತ್ತು ಸೈನಿಕ ಕ್ಲರ್ಕ್  ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. …

Read More »