ಬೆಂಗಳೂರು: ದೇಶದಲ್ಲೇ ಹಾವು ಕಡಿತ ಪ್ರಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕಳೆದ 10 ತಿಂಗಳಲ್ಲಿ 191 ಮಂದಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಭಾರತದಲ್ಲಿ ಈ ವರ್ಷ ಜನವರಿ 1ರಿಂದ ಇಲ್ಲಿಯವರೆಗೆ 16,229 ಮಂದಿಗೆ ಹಾವು ಕಚ್ಚಿದ್ದು, ಇವರಲ್ಲಿ 191 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮುಂದಿನ 3 ತಿಂಗಳಲ್ಲಿ ಸಾವಿನ ಪ್ರಮಾಣವು 220ರ ಗಡಿ ದಾಟುವ ಆತಂಕ ಎದುರಾಗಿದೆ. ಕಳೆದ 3 ವರ್ಷಗಳಲ್ಲಿ ಒಟ್ಟು 49,965 ಮಂದಿಗೆ ಹಾವು ಕಚ್ಚಿದ್ದು, ಈ ಪೈಕಿ …
Read More »Daily Archives: ಅಕ್ಟೋಬರ್ 13, 2026
ವಸಂತನಗರದ ಹೋಟೆಲ್‌ನಲ್ಲಿ ಸ್ಟಿಂಗ್ ಆಪರೇಷನ್ ವ್ಯಕ್ತಿಯನ್ನ ಸಿಎಂ ಭೇಟಿ ಮಾಡಿದ್ರು – ಡಿಕೆಶಿ ವಿರುದ್ಧ ಹೆಚ್‌ಡಿಕೆ ಬಾಂಬ್
ಬೆಂಗಳೂರು: ವಸಂತನಗರದ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಒಬ್ಬರನ್ನ ಭೇಟಿ ಮಾಡಿದ್ದರು. ಆ ವ್ಯಕ್ತಿಯೇ ಸ್ಟಿಂಗ್ ಆಪರೇಷನ್ ವ್ಯಕ್ತಿ. ಆ ವ್ಯಕ್ತಿ ಯಾರು ಎಂಬುದನ್ನ ಸಿಎಂ ಹೇಳಬೇಕು. ಆ ವ್ಯಕ್ತಿಯೇ ಸ್ಟಿಂಗ್ ಆಪರೇಷನ್ ವರದಿ ಕೊಟ್ಟರಾ? ಎಂದು ರಾಜ್ಯದ ಸಿಎಂ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದರು. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಡಿಕೆ ಶಿವಕುಮಾರ್ ಅವರ ಸ್ಟಿಂಗ್ ಆಪರೇಷನ್ ಹೇಳಿಕೆಗೆ ತಿರುಗೇಟು ನೀಡಿದರು. ವಸಂತ …
Read More »ಹಾಸನದಲ್ಲಿ ಅಕ್ರಮ ಪಬ್‌ಗಳ ಮೇಲೆ ಖಾಕಿ ದಾಳಿ: ಅಪ್ರಾಪ್ತರಿಗೆ ಮದ್ಯ ಸರಬರಾಜು ಪತ್ತೆ
ಹಾಸನ: ನಗರದಲ್ಲಿ ನಿಯಮ ಉಲ್ಲಂಘಿಸಿ ನಡೆಸುತ್ತಿದ್ದ ಪಬ್ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರು ನಿನ್ನೆ ರಾತ್ರಿ ದಾಳಿ ನಡೆಸಿದ್ದಾರೆ. ಹಾಸನ ನಗರದಲ್ಲಿರುವ ಪ್ರತಿಷ್ಠಿತ ಪಬ್‌ಗಳ ಮೇಲೆ ಎಎಸ್‌ಪಿ, ಡಿವೈಎಸ್‌ಪಿ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪಬ್‌ನ ಲೈಸನ್ಸ್ ಹಾಗೂ ಇನ್ನಿತರೆ ದಾಖಲೆಗಳನ್ನು ತೋರಿಸುವಂತೆ ಪಬ್‌ನ ಮ್ಯಾನೇಜರ್‌ಗೆ ಪ್ರಶ್ನಿಸಿದ್ದು ಸರಿಯಾದ ದಾಖಲೆಗಳನ್ನು ನೀಡಲು ಮ್ಯಾನೇಜರ್ ಪರದಾಡಿದ್ದಾರೆ. ತಪಾಸಣೆ ವೇಳೆ ಇಬ್ಬರು ಅಪ್ರಾಪ್ತರಿಗೆ ಪಬ್ ಒಳಗೆ ಎಂಟ್ರಿ ಕೊಟ್ಟಿರುವುದಲ್ಲದೇ …
Read More »ಬೆಳಗಾವಿಯಲ್ಲಿ ಖಾಕಿ ಘರ್ಜನೆ: 40ಕ್ಕೂ ಹೆಚ್ಚು ಕ್ಲಬ್, ಪಬ್, ಹೋಟೆಲ್‌ಗಳ ಮೇಲೆ ಏಕಕಾಲಕ್ಕೆ ರೇಡ್!
ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಎಗ್ಗಿಲ್ಲದೆ ನಡೆಯುತ್ತಿದ್ದ ನೈಟ್‌ಲೈಫ್ ಚಟುವಟಿಕೆಗಳಿಗೆ ಬೆಳಗಾವಿ ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರ ಖಡಕ್ ನೇತೃತ್ವದಲ್ಲಿ ನಗರದ ಬರೋಬ್ಬರಿ 40ಕ್ಕೂ ಹೆಚ್ಚು ಕ್ಲಬ್, ಪಬ್, ಪ್ರತಿಷ್ಠಿತ ಹೋಟೆಲ್‌ಗಳು ಹಾಗೂ ಡಾಬಾಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಶಾಕ್ ನೀಡಲಾಗಿದೆ. ಶನಿವಾರ ತಡರಾತ್ರಿ ನಗರದಾದ್ಯಂತ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಹಲವು ಅಡ್ಡಾಗಳನ್ನು ಸ್ಥಳದಲ್ಲೇ …
Read More »ಡೀಸೆಲ್ ಬಳಿಕ ಟಿಕೆಟ್ ರೋಲ್ ಕೊರತೆ; 3-4 ಜನರಿಗೆ ಸೇರಿ ಒಂದೇ ಟಿಕೆಟ್ ವಿತರಣೆ
ಬೀದರ್: ನಾರಿ ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಡಿಸೇಲ್ ಕೊರತೆ ಬಳಿಕ ಈಗಾ ಪ್ರಯಾಣಿಕರಿಗೆ ಟಿಕೆಟ್ ನೀಡುವ ರೋಲ್ ಕೊರತೆಯಾಗಿದೆ. ಪ್ರತಿಯೊಬ್ಬರಿಗೆ ನೀಡಬೇಕಿದ್ದ ಟಿಕೆಟ್‌ಗಳನ್ನು ಸಾರಿಗೆ ಸಿಬ್ಬಂದಿ ಮೂರು ನಾಲ್ಕು ಜನಕ್ಕೆ ಸೇರಿಸಿ ಒಂದೇ ಟಿಕೆಟ್ ನೀಡುತ್ತಿದ್ದು, ಬೀದರ್ ಟು ಕಲಬುರಗಿ ಸೇರಿದಂತೆ ವಿವಿಧ ಕಡೆ ಹೋಗುವ ಬಸ್‌ಗಳಲ್ಲಿ ಎರಡು ಮೂರು ಪ್ರಯಾಣಿಕರಿಗೆ ಒಂದೇ ಟಿಕೆಟ್ ನೀಡಲಾಗುತ್ತಿದೆ. ಒಂದೇ ಟಿಕೆಟ್ ನೀಡಿ ಟಿಕೆಟ್ ರೋಲ್ ಕೊರತೆಯನ್ನು …
Read More »ಭೂಮಿಕಾ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಡ್ರೈವರ್ ಜೊತೆಗೆ ಮಾತನಾಡಿದ್ದ ಸ್ಫೋಟಕ ಆಡಿಯೋ ವೈರಲ್!
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಇದು ಕೇವಲ ರಸ್ತೆ ಅಪಘಾತವಲ್ಲ, ಇದರ ಹಿಂದೆ ಕೊಲೆ ಸಂಚು ಇದೆ ಎಂದು ಮೃತ ಯುವತಿ ಭೂಮಿಕಾ ಪೋಷಕರು ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಸ್ಫೋಟಕ ಆಡಿಯೋವೊಂದು ಬೆಳಕಿಗೆ ಬಂದಿದೆ. ಹೌದು. ಮೃತ ಭೂಮಿಕಾ ಅಪಘಾತಕ್ಕೂ ಮುನ್ನ ಕಾರು ಚಾಲಕ ಕಿಶೋರ್ ಜೊತೆ ಮಾತನಾಡಿದ್ದ ಆಡಿಯೋ ಇದೀಗ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಕಾರು ಚಾಲಕ …
Read More »ಗ್ರಾ.ಪಂ ಸಿಬ್ಬಂದಿಯ ಪ್ಯಾಂಟ್ ಬಿಚ್ಚಿಸಿ ಸರ್ವೆ – ವಿಮಾ ಕಂಪನಿ ಸಿಬ್ಬಂದಿಯಿಂದ ಅಮಾನವೀಯ ವರ್ತನೆ
ಹಾವೇರಿ: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ಸರ್ವೆಗೆ ಬಂದಿದ್ದ ವಿಮಾ ಕಂಪನಿ ಸಿಬ್ಬಂದಿ ಗ್ರಾಮ ಪಂಚಾಯತಿ ಸಿಬ್ಬಂದಿಯ ಪ್ಯಾಂಟ್ ಬಿಚ್ಚಿಸಿ ಸರ್ವೆ ಮಾಡಿಸಿ ಅಮಾನವೀಯ ವರ್ತನೆ ತೋರಿದ್ದಾರೆ. ಹಾವೇರಿಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಪಕ್ಕೀರಪ್ಪ ಯತ್ನಳ್ಳಿ ಪ್ಯಾಂಟ್ ಬಿಚ್ಚಿಸಿ ಸರ್ವೆ ಮಾಡಿಸಿದ್ದಾರೆ. ಜಮೀನಿನಲ್ಲಿ ನೀರು ತುಂಬಿದ್ದರಿಂದ, ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಆದರೂ, ಗ್ರಾಮ ಪಂಚಾಯತಿ …
Read More »ಭಾರತಕ್ಕೆ ಒಳನುಸುಳಲು ಯತ್ನ; ಪಿಒಕೆಯಲ್ಲಿ ಸ್ಫೋಟಕ್ಕೆ ನಾಲ್ವರು ಪಾಕಿಸ್ತಾನಿ ಉಗ್ರರು ಬಲಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿರುವ ನಿಯಂತ್ರಣ ರೇಖೆಯ ಕೆಜಿ ವಲಯದ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದಾಗ, ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್ ಸೇರಿದಂತೆ ನಾಲ್ವರು ಪಾಕಿಸ್ತಾನಿ ಉಗ್ರರು ನೆಲಬಾಂಬ್ ಸ್ಫೋಟದಲ್ಲಿ ಹತರಾಗಿದ್ದಾರೆ. ಪೂಂಚ್ ಜಿಲ್ಲೆಯ ಕೃಷ್ಣಾ ಘಾಟಿ ವಲಯದಲ್ಲಿರುವ ನಿಯಂತ್ರಣ ರೇಖೆಯ ಸಮೀಪದ ಗ್ರಾಮವೊಂದು, ಸೋಮವಾರ ಸುಧಾರಿತ ಸ್ಫೋಟಕ ಸಾಧನವೊಂದರಿಂದ ಸಂಭವಿಸಿದ ಪ್ರಬಲ ಸ್ಫೋಟದಿಂದಾಗಿ ನಡುಗಿತು. ಈ ಭಯೋತ್ಪಾದಕರನ್ನು ಪೂಂಚ್ ಜಿಲ್ಲೆಯ (ಪಿಒಜೆಕೆ) ಹಜಿರಾ ತಹಸಿಲ್‌ನ ಮಂಡ್ಲಾ ಮತ್ತು …
Read More »ಜ್ಞಾನೇಶ್ ಕುಮಾರ್ ವಿರುದ್ಧ 2 ಕಿ.ಮೀ ಪಾದಯಾತ್ರೆ ನಡೆಸಿ ಹೈಡ್ರಾಮಾ; ತಳ್ಳಾಟ-ನೂಕಾಟದಲ್ಲಿ ಸಿಎಂ ಡಿಕೆಶಿ ಹೈರಾಣು
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ, ಎಸ್‌ಐಆರ್ ವಿರುದ್ಧ ಇಂಡಿ ಒಕ್ಕೂಟ ಕೈಗೊಂಡಿರೋ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಜ್ಞಾನೇಶ್‌ಕುಮಾರ್ ಪದಚ್ಯುತಿಗೆ ಬಿಗಿಪಟ್ಟು ಹಿಡಿದಿರೋ ಇಂಡಿ ಕೂಟ, ಇವತ್ತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮೂಲಕ ಕಾನೂನು ಸಮರಕ್ಕೆ ಮುಂದಾಗಿದೆ. ‘ಚಲೋ ದೆಹಲಿ – ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ’ ಎಂಬ ಹೆಸರಿನಲ್ಲಿ ಬರಾಖಂಬಾ ರಸ್ತೆ ಜಂಕ್ಷನ್‌ನಿಂದ ತಿಲಕ್‌ಮಾರ್ಗದಲ್ಲಿರೋ ಸುಪ್ರೀಂ ಕೋರ್ಟ್‌ವರೆಗೆ ಪಾದಯಾತ್ರೆ ನಡೆಸಿದರು. ಈ ವೇಳೆ, ತಳ್ಳಾಟ-ನೂಕಾಟದಲ್ಲಿ ಸಿಎಂ …
Read More »ಅವಹೇಳನಕಾರಿ ಪೋಸ್ಟ್‌ಗಳ ವಿರುದ್ಧ ಕೋರ್ಟ್ ಮೊರೆ ಹೋದ ಸಿದ್ದರಾಮಯ್ಯ
ಬೆಂಗಳೂರು: ತಮ್ಮ ವಿರುದ್ಧ ಮಾನಹಾನಿಕರ ಹಾಗೂ ಅವಹೇಳನಕಾರಿ ಪೋಸ್ಟ್‌ಗಳು ಮತ್ತು ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಸಂಬಂಧ ಇಂದು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಸಿದ್ದರಾಮಯ್ಯ ಪರವಾಗಿ ವಕೀಲ ಪ್ರವೀಣ್ ಕಾಮತ್ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಿರುದ್ಧದ ಆಕ್ಷೇಪಾರ್ಹ ವಿಡಿಯೋಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಹಲವು ಮಾಧ್ಯಮಗಳು ಹಾಗೂ ಸಾಮಾಜಿಕ …
Read More »
Laxmi News 24×7