Breaking News

Monthly Archives: ಸೆಪ್ಟೆಂಬರ್ 2026

ಕಕ್ಷೆ ತಲುಪಿ ಇತಿಹಾಸ ಬರೆದ ಬೆನ್ನಲ್ಲೇ ದುರಂತ: ಪೆಸಿಫಿಕ್ ಸಾಗರದಲ್ಲಿ ಸ್ಫೋಟಗೊಂಡ ಸ್ಟಾರ್‌ಶಿಪ್

ಟೆಕ್ಸಾಸ್‌: ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್  ಸಂಸ್ಥೆಯ ಸ್ಟಾರ್‌ಶಿಪ್  ಮೆಗಾ ರಾಕೆಟ್‌ನ 14ನೇ ಪರೀಕ್ಷಾರ್ಥ ಉಡಾವಣೆ  ಸೆಪ್ಟೆಂಬರ್ 28 ರಂದು ನಡೆದಿದ್ದು, ಉಡಾವಣೆಯ ಬಳಿಕ ರಾಕೆಟ್‌ನ ಬೂಸ್ಟರ್ ಭಾಗವು ಸಮುದ್ರಕ್ಕೆ ಅಪ್ಪಳಿಸಿದಾಗ ಭೀಕರವಾಗಿ ಸ್ಫೋಟಗೊಂಡಿದೆ. ಸ್ಫೋಟಗೊಂಡರೂ ಈ ಮಿಷನ್ ಅನ್ನು ಸಂಪೂರ್ಣ ವೈಫಲ್ಯ ಎಂದು ಕರೆಯಲು ಸಾಧ್ಯವಿಲ್ಲ. ಸ್ಟಾರ್‌ಶಿಪ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರಾಕೆಟ್ ಭೂಮಿಯ ಕಕ್ಷೆಯನ್ನು  ತಲುಪುವಲ್ಲಿ ಯಶಸ್ವಿಯಾಗಿದೆ. ಟೆಕ್ಸಾಸ್‌ನಲ್ಲಿರುವ ಸ್ಪೇಸ್‌ಎಕ್ಸ್‌ನ ‘ಸ್ಟಾರ್‌ಬೇಸ್’ ಉಡಾವಣಾ ಕೇಂದ್ರದಿಂದ 124 …

Read More »

ಯುವ ದಸರಾ 2026: ಅ.17ರಂದು ʻಧುರಂದರ್ 2ʼ ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ರಸದೌತಣ

ಮೈಸೂರು: ಮೈಸೂರಿನಲ್ಲಿ ನಡೆಯಲಿರುವ ಯುವ ದಸರಾ-2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅ.17ರಂದು ದುರಂಧರ್‌ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಅಕ್ಟೋಬರ್ 13ರಿಂದ 17ರವರೆಗೆ ಐದು ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಪ್ರತಿದಿನವೂ ಖ್ಯಾತ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಬಾರಿಯ ಯುವ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಹಲವು ಖ್ಯಾತ ಗಾಯಕರು ಮತ್ತು ಕಲಾವಿದರು ಭಾಗವಹಿಸಲಿದ್ದಾರೆ. ಅಕ್ಟೋಬರ್ 13ರಂದು ಬಿ. ಅಜನೀಶ್ ಲೋಕನಾಥ್ …

Read More »

ʻನನಗೆ ನ್ಯಾಯ ಬೇಕುʼ ಎಂದು ಹೈ ವೋಲ್ಟೇಜ್ ವಿದ್ಯುತ್ ಕಂಬ ಏರಿದ ಕುಡುಕ; 4 ಗಂಟೆ ಬಳಿಕ ರಕ್ಷಣೆ

ವಿಜಯಪುರ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೈ ವೋಲ್ಟೇಜ್  ವಿದ್ಯುತ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ಬಳಿ ನಡೆದಿದೆ. ವಿಜಯಪುರ ತಾಲೂಕಿನ ಕೌಜಲಗಿ ತಾಂಡಾ ನಿವಾಸಿ ರವಿ ರಾಠೋಡ ಎಂಬಾತ ಮದ್ಯ ಸೇವಿಸಿ ಅಮಲಿನಲ್ಲಿ 110 ಕೆವಿ ಸಾಮರ್ಥ್ಯದ ವಿದ್ಯುತ್ ಟವರ್ ಏರಿದ್ದಾನೆ. ಶಿವಗಿರಿಯ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿಜಯಪುರ ನಗರಕ್ಕೆ ಸರಬರಾಜಾಗುವ 110 ಕೆವಿ ವಿದ್ಯುತ್ ಲೈನ್‌ನ ಟವರ್ ಇದಾಗಿದೆ. …

Read More »

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ – 8 ಸೆಕೆಂಡಲ್ಲಿ ಕುಸಿದ ಪರ್ವತ; ವಿವಿಧೆಡೆ 21 ಮಂದಿ ಸಾವು

ಕಠ್ಮಂಡು: ಕಳೆದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭೀಕರ ಹಠಾತ್ ಪ್ರವಾಹ  ಹಾಗೂ ಭೂಕುಸಿತ 1,450ಕ್ಕೂ ಹೆಚ್ಚು ಜನರ ಪ್ರಾಣ ಬಲಿ ಪಡೆದುಕೊಂಡಿತ್ತು. 5,800ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಇನ್ನೂ ಹುಡುಕಾಟ ನಡೆಯುತ್ತಿದೆ. ಈ ಘಟನೆ ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೊಂದು ಪ್ರವಾಹ ಉಂಟಾಗಿದೆ. ನೇಪಾಳದಲ್ಲಿ ಕಳೆದ ಕೆಲ ದಿನಗಳಿಂದ ಮತ್ತೆ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಧಾರಾಕಾರ ಮಳೆಯಿಂದ ದೇಶದ ಹಲವೆಡೆ ವ್ಯಾಪಕ ಪ್ರವಾಹ …

Read More »

ಶಿಕಾರಿಪುರದಲ್ಲಿ ಸೆ.30 ರಂದು ಭಾರತ್ ಜೋಡೋ ನೆನಪಿನಯಾತ್ರೆ: ಮಧು ಬಂಗಾರಪ್ಪ

ಶಿವಮೊಗ್ಗ: ಶಿಕಾರಿಪುರದಲ್ಲಿ  ಸೆ.30 ರಂದು ಭಾರತ್ ಜೋಡೋ ನೆನಪಿನಯಾತ್ರೆ (ಭಾರತ್‌ ಜೋಡೋ 2.0) ನಡೆಯಲಿದೆ ಎಂದು ಸಚಿವ ಮಧು ಬಂಗಾರಪ್ಪ  ತಿಳಿಸಿದ್ದಾರೆ. ಶಿಕಾರಿಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 4 ವರ್ಷದ ಹಿಂದೆ ದೇಶವನ್ನು ಒಗ್ಗೂಡಿಸಲು ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದ್ದರು. ಸೆ.30 ರಂದು ರಾಜ್ಯದ ಗುಂಡ್ಲುಪೇಟೆಗೆ ಪಾದಯಾತ್ರೆ ಆಗಮಿಸಿತ್ತು. ಅದರ ನೆನಪಿಗೆ ಭಾರತ್ ಜೋಡೋ ನೆನಪಿನಯಾತ್ರೆ ನಡೆಯಲಿದೆ ಎಂದು ಮಾಹಿತಿ ನೀಡಿದರು. …

Read More »

16 ಲಕ್ಷ ಫಾಲೋವರ್ಸ್ ಹೊಂದಿದ್ದ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ ಆತ್ಮಹತ್ಯೆ

ಭೋಪಾಲ್: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬರೋಬ್ಬರಿ 16 ಲಕ್ಷ ಫಾಲೋವರ್ಸ್ ಹೊಂದಿದ್ದ ಫೇಮಸ್ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ನಿಧಿ ತಿವಾರಿ (30) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ. ನಿಧಿ ಅವರಿಗೆ ಫೇಸ್‌ಬುಕ್‌ನಲ್ಲಿ ಸುಮಾರು 9 ಲಕ್ಷ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 7 ಲಕ್ಷ ಫಾಲೋವರ್ಸ್ ಇದ್ದರು. ಅವರ ರೀಲ್ಸ್ ಮತ್ತು ಪೋಸ್ಟ್‌ಗಳಿಗೆ ಸಾವಿರಾರು ಪ್ರತಿಕ್ರಿಯೆಗಳು ಬರುತ್ತಿದ್ದವು. ಹಲವು ವಿಡಿಯೋಗಳು ಲಕ್ಷಾಂತರ ವೀವ್ಸ್ ಪಡೆದುಕೊಂಡಿದ್ದವು. ಸಿಂಗ್ರೌಲಿಯ ಭೂಸಾ …

Read More »

ಲವ್ವರ್‌ ಮದುವೆಯಾಗಲು 21 ವಯಸ್ಸಾಗುವವರೆಗೆ ಕಾಯುವಂತೆ ಹೇಳಿದ ತಂದೆಯನ್ನೇ ಗುಂಡಿಕ್ಕಿ ಕೊಂದ 18 ವರ್ಷದ ಪುತ್ರ

ಚಂಡೀಗಢ: ನಿನಗಿನ್ನೂ 18 ವರ್ಷ. ನಿನ್ನ ಲವ್ವರ್‌ನ ಮದುವೆ ಆಗೋಕೆ 21 ವಯಸ್ಸಾಗುವವರೆಗೆ ಕಾಯಿ ಎಂದು ಬುದ್ದಿಮಾತು ಹೇಳಿದ ತಂದೆಯನ್ನೇ ಮಗ ಹತ್ಯೆ ಮಾಡಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ. ಚಂಡೀಗಢ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ನನ್ನು ಅವರ ಹದಿಹರೆಯದ ಮಗನೇ ಮನೆಯೊಳಗೆ ಗುಂಡಿಕ್ಕಿ ಕೊಂದಿದ್ದಾನೆ. ತನ್ನ ಲವ್ವರ್‌ ಮದುವೆಯಾಗಲು 21 ವರ್ಷ ವಯಸ್ಸಾಗುವವರೆಗೆ ಕಾಯುವಂತೆ ಪುತ್ರನಿಗೆ ತಂದೆ ಬುದ್ದಿಮಾತು ಹೇಳಿದ್ದರು. ಪೊಲೀಸ್ ಪ್ರಧಾನ ಕಚೇರಿಯ ಲೆಕ್ಕಪತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿತಿನ್ ಸಿಂಗ್, …

Read More »

ಮಹಿಳಾ ಮೀಸಲಾತಿ ಸನ್ನಿಹಿತ – ತುಮಕೂರಿನಲ್ಲಿ ಪುತ್ರಿಯರನ್ನು ರಾಜಕೀಯ ಅಖಾಡಕ್ಕೆ ಅಣಿಗೊಳಿಸುತ್ತಿರುವ ನಾಯಕರು

ತುಮಕೂರು: ಕೇಂದ್ರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆ ಕಾನೂನಾಗುವ ಎಲ್ಲಾ ಲಕ್ಷಣ ಇದೆ ಎಂಬ ಸುಳಿವು ಸಿಕ್ಕಿದೆ. ಇದರಿಂದ ಅಲರ್ಟ್ ಆದ ತುಮಕೂರು ಜಿಲ್ಲೆಯ ರಾಜಕೀಯ ನಾಯಕರುಗಳು ತಮ್ಮ ಪುತ್ರಿಯರನ್ನು ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯಗೊಳಿಸುತಿದ್ದಾರೆ. ವಿಪಕ್ಷಗಳ ಅಸಹಕಾರದಿಂದ ಮೊದಲ ಪ್ರಯತ್ನದಲ್ಲಿ ಕೇಂದ್ರದ ಮಹಿಳಾ ರಾಜಕೀಯ ಮೀಸಲಾತಿ ಮಸೂದೆ ಸೋತಿರಬಹುದು. ಆದರೂ ಮೋದಿ ಮತ್ತು ಅಮಿತ್ ಶಾ ಟೀಂ ಈ ಕಾನೂನನ್ನೂ ರೂಪಿಸಿಯೇ ತಿರುತ್ತಾರೆ ಎಂಬ ಅಚಲ ವಿಶ್ವಾಸ ಬಿಜೆಪಿಗಿಂತ ಕಾಂಗ್ರೆಸ್ …

Read More »

ತೆರಿಗೆ ವಂಚನೆ ಆರೋಪ – ನಟಿ ರಕುಲ್ ಪ್ರೀತ್ ಸಿಂಗ್‌ಗೆ ಐಟಿ ಶಾಕ್‌

ಸಿನಿಮಾ ಯೋಜನೆಗಳ ಹೆಸರಿನಲ್ಲಿ ವಿದೇಶಕ್ಕೆ ಅಕ್ರಮವಾಗಿ ಹಣ ರವಾನಿಸಲಾಗಿದೆ ಎಂಬ ಆರೋಪದ ಮೇಲೆ ನಟಿ ರಕುಲ್ ಪ್ರೀತ್ ಸಿಂಗ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಚಲನಚಿತ್ರ ಯೋಜನೆಗಳ ಹೆಸರಿನಲ್ಲಿ ವಿದೇಶಕ್ಕೆ ಹಣವನ್ನು ರವಾನಿಸಲಾಗಿದೆ ಎಂಬ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆಯು ಚಲನಚಿತ್ರೋದ್ಯಮದ ಹಲವು ಗಣ್ಯರು ಮತ್ತು ಅವರ ಕಂಪನಿಗಳಿಗೆ ಸಂಬಂಧಿಸಿದ ಸುಮಾರು 12 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ನಟಿ ರಕುಲ್ ಪ್ರೀತ್ ಸಿಂಗ್, ನಿರ್ಮಾಪಕ …

Read More »

ಆಸ್ತಿಗಾಗಿ ತಮ್ಮನನ್ನೇ ಚಾಕು ಇರಿದು ಹತ್ಯೆಗೈದ ಅಣ್ಣ

ಹಾಸನ: ಸಹೋದರರ ನಡುವೆ ಜಮೀನಿಗಾಗಿ ನಡೆದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದ ಘಟನೆ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಘು (44) ಅಣ್ಣನಿಂದಲೇ ಕೊಲೆಯಾದ ವ್ಯಕ್ತಿ. ದೇವರಾಜ್ (46) ಕೊಲೆಗೈದಆರೋಪಿಯಾಗಿದ್ದಾನೆ. ಸೆ.24 ರಂದು ಜಮೀನು ವಿವಾದ ಹಾಗೂ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತಂದ ವಿಚಾರಕ್ಕೆ ಸಹೋದರರ ನಡುವೆ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿ ತಮ್ಮ ರಘುಗೆ ಅಣ್ಣ ದೇವರಾಜ್ ಚಾಕುವಿನಿಂದ ಇರಿದಿದ್ದ. ತೀವ್ರವಾಗಿ ಗಾಯಗೊಂಡಿದ್ದ ರಘು …

Read More »