Breaking News

Monthly Archives: ಸೆಪ್ಟೆಂಬರ್ 2026

ನಟ ಅನಂತ್ ನಾಗ್‌ಗೆ ವಿಧಾನ ಪರಿಷತ್‌ನಲ್ಲಿ ಗೌರವ ಸಲ್ಲಿಕೆ

ಬೆಂಗಳೂರು: ದಾದಾ ಸಾಹೇಬ್ ಫಾಲ್ಕೆ  ಪ್ರಶಸ್ತಿ ಪುರಸ್ಕೃತರು ನಟ ಅನಂತ್ ನಾಗ್‌ಗೆ  ವಿಧಾನ ಪರಿಷತ್‌ನಲ್ಲಿ ಅಭಿನಂದನೆ ಸಲ್ಲಿಸಲಾಯ್ತು. ಕಲಾಪ ಪ್ರಾರಂಭ ಆದ ಕೂಡಲೇ ಸಭಾಪತಿಗಳು ಅಭಿನಂದನೆ ನಿರ್ಣಯ ಮಂಡಿಸಿದರು. ಈ ವೇಳೆ ಮಾತಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ , ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರೋದು ಕನ್ನಡ ರಾಜ್ಯಕ್ಕೆ ಗೌರವ ತಂದಿದೆ. ಪ್ರಶಸ್ತಿ ಕೊಟ್ಟ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅನಂತ್ ನಾಗ್ ಸಹಜ ನಟರು, …

Read More »

ಕೇಂದ್ರದಿಂದ 50,000 ರೂ. ಬರ ಪರಿಹಾರ ಕೊಡಬೇಕು – ಎಂಎಲ್‌ಸಿ ಶಿವಕುಮಾರ್‌ ಆಗ್ರಹ

ಬೆಂಗಳೂರು: ಬರದಿಂದ ಕೃಷಿ, ಕೂಲಿ ಮಾಡೋರಿಗೆ ಸಮಸ್ಯೆ ಆಗಿದೆ. ಕಬ್ಬು ಬೆಳೆ ಇಳುವರಿ ಕಡಿಮೆ ಆಗಿದ್ದು, ಅದಕ್ಕೆ ಪರಿಹಾರ ಕೊಡಬೇಕು. ಎನ್‌ಡಿಆರ್‌ಎಫ್‌ ನಿಯಮದಲ್ಲಿ ಬದಲಾವಣೆ ಮಾಡಬೇಕು. ಕೇಂದ್ರ ಸರ್ಕಾರದಿಂದ 50 ಸಾವಿರ ರೂ. ಬರ ಪರಿಹಾರ ಕೊಡಬೇಕು ಎಂದು ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ಶಿವಕುಮಾರ್‌ ಒತ್ತಾಯಿಸಿದರು. ವಿಧಾನ ಪರಿಷತ್‌ನಲ್ಲಿ ಇಂದು ಚರ್ಚೆ ನಡೆಸಿದ ಕಾಂಗ್ರೆಸ್‌ ಸದಸ್ಯ ಶಿವಕುಮಾರ್, ಬರ ಪರಿಸ್ಥಿತಿ ವೇಳೆ ರಾ‌ಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ …

Read More »

ಸಿಎಂಗೆ ಶಾಸನದ ಗಂಧಗಾಳಿ ಗೊತ್ತಿಲ್ಲ – KPSC ಮುಚ್ಚುವೆ ಎಂದ ಮುಖ್ಯಮಂತ್ರಿಗೆ ಹೆಚ್‌ಡಿಕೆ ತರಾಟೆ

ನವದೆಹಲಿ: ಕೆಪಿಎಸ್‌ಸಿಯನ್ನು ಮುಚ್ಚಲು ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗೆ ಶಾಸನದ ಮಹತ್ವವೇ ಗೊತ್ತಿಲ್ಲದಂತಿದೆ ಎಂದು ಟೀಕಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ಲೋಕಸೇವಾ ಆಯೋಗವನ್ನು ಶಾಸನಬದ್ಧವಾಗಿ ಮುಚ್ಚುತ್ತೇವೆ ಎನ್ನುವ ಮುಖ್ಯಮಂತ್ರಿ ಹೇಳಿಕೆ ಕೇವಲ ಹತಾಶೆಯಿಂದಷ್ಟೇ ಕೂಡಿಲ್ಲ, ಅದು ಬುದ್ಧಿಗೇಡಿತನ, ಹೊಣೆಗೇಡಿತನ ಮತ್ತು ಅಜ್ಞಾನದ ಪರಮಾವಧಿ. ಇವರ …

Read More »

ರೌಡಿ ಶೀಟರ್‌ಗಳ ಜೊತೆ ಎಣ್ಣೆ ಪಾರ್ಟಿ – ಎಎಸ್‌ಐ ಅಮಾನತು

ಚಿಕ್ಕಮಗಳೂರು: ರೌಡಿ ಶೀಟರ್‌ಗಳ ಜೊತೆ ಎಣ್ಣೆ ಪಾರ್ಟಿ  ಮಾಡಿದ್ದ ಎಎಸ್‌ಐ  ಅಮಾನತು ಮಾಡಿ ಆದೇಶ ಹೊರಡಿಸಿರುವ ಘಟನೆ ಚಿಕ್ಕಮಗಳೂರು  ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆಯ ಎಎಸ್‌ಐ ವೀರೇಂದ್ರ ಅವರನ್ನು ಸಸ್ಪೆಂಡ್ ಮಾಡಿ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಆದೇಶ ಹೊರಡಿಸಿದ್ದಾರೆ. ಎಎಸ್‌ಐ ವೀರೇಂದ್ರ ಬಾರ್‌ನಲ್ಲಿ ಪಾರ್ಟಿ ಆಯೋಜನೆ ಮಾಡಿ ಇಡೀ ರಾತ್ರಿ ಜೋರಾಗಿ ಹಾಡು ಹಾಕಿದ್ದರು. ಈ ಹಿನ್ನೆಲೆ ಗ್ರಾಮಸ್ಥರು ಬಾರ್ ಮುಂದೆ ರಾತ್ರೋರಾತ್ರಿ …

Read More »

ನವವಿವಾಹಿತೆ ನಿಗೂಢ ಕಣ್ಮರೆ – ನಾಲ್ಕನೇ ದಿನ ಮುಂದುವರಿದ ಶೋಧ

ಹಾಸನ: ಜಿಲ್ಲೆಯಲ್ಲಿ ನವವಿವಾಹಿತೆ ನಿಗೂಢವಾಗಿ ಕಣ್ಮರೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಾವತಿ ನಾಲೆಯಲ್ಲಿ ಸತತ ನಾಲ್ಕು ದಿನದಿಂದ ಶೋಧ ಕಾರ್ಯ ನಡೆಯುತ್ತಿದ್ದು, ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಹಾಸನ  ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕುರುವಂಕ ಗ್ರಾಮದ ನವವಿವಾಹಿತೆ ಪ್ರಿಯಾಂಕಾ (24) ಕಣ್ಮರೆಯಾಗಿದ್ದಾರೆ. ಸೆ.19ರ ರಾತ್ರಿ ಸುಮಾರು 9 ಗಂಟೆಗೆ ಪ್ರಿಯಾಂಕಾ ಕಾಲುವೆಗೆ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಬಳಿಕ ಚನ್ನರಾಯಪಟ್ಟಣ ನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಚಿಕ್ಕನಾಯಕನಹಳ್ಳಿ ಬಳಿಯ ಹೇಮಾವತಿ ನಾಲೆಯಲ್ಲಿ …

Read More »

PSI ನೇಮಕಾತಿಯಲ್ಲಿ ಅಕ್ರಮ – ಆರ್‌ಡಿ ಪಾಟೀಲ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ

ಬೆಂಗಳೂರು: ಪಿಎಸ್‌ಐ  ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್, ಆರ್‌ಡಿ ಪಾಟೀಲ್ ವಿರುದ್ಧದ ಇತರೆ ಪ್ರಕರಣಗಳ ಮಾಹಿತಿ ಕೇಳಿದೆ. ಅದಕ್ಕೆ ನಮ್ಮ ವಿರುದ್ಧ 22 ಪ್ರಕರಣಗಳಿವೆ, ಅದರ ಮಾಹಿತಿ ನಮ್ಮಲ್ಲಿ ಇದೆ ಎಂದು ಆರ್‌ಡಿ ಪಾಟೀಲ್  ಪರ ವಕೀಲರು ವಾದಿಸಿದರು. ಈ ವೇಳೆ ಆರ್‌ಡಿ ಪಾಟೀಲ್ ವಿರುದ್ಧ 24 …

Read More »

ಕಸ್ತೂರಿ ರಂಗನ್ ವರದಿ; ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಅಭಿಪ್ರಾಯ ಮಂಡಿಸಲು ಹಿರಿಯ ವಕೀಲರ ನೇಮಕ: ಡಿಕೆಶಿ

ಬೆಂಗಳೂರು: ಕಸ್ತೂರಿ ರಂಗನ್ ವರದಿಗೆ  ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ  ರಾಜ್ಯದ ಸ್ಪಷ್ಟ ಅಭಿಪ್ರಾಯ ಮಂಡಿಸಲು ಹಿರಿಯ ವಕೀಲರನ್ನು ನೇಮಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್  ತಿಳಿಸಿದರು. ಮಂಗಳವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಸಿಎಂ ಉತ್ತರಿಸಿದರು. ನನಗಿರುವ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ಕಸ್ತೂರಿ ರಂಗನ್ ವರದಿ …

Read More »

ವಿಧಾನಸೌಧದಲ್ಲೇ ಕೈ ಶಾಸಕರ ಮಧ್ಯೆ ಜಟಾಪಟಿ – ನಾರಾಯಣಸ್ವಾಮಿ ವಿರುದ್ಧ ರೂಪಾ ಶಶಿಧರ್‌ ಆಕ್ರೋಶ

ಬೆಂಗಳೂರು: ರಾಜ್ಯ ವಿಧಾನಸಭೆಯ ಕಲಾಪದ ವೇಳೆ ಆಡಳಿತಾರೂಢ ಕಾಂಗ್ರೆಸ್  ಪಕ್ಷದ ಶಾಸಕರ ನಡುವಿನ ಆಂತರಿಕ ಅಸಮಾಧಾನ ಮತ್ತು ಬಣ ರಾಜಕೀಯ ಸದನದಲ್ಲೇ ಬಹಿರಂಗವಾಗಿ ಸ್ಫೋಟಗೊಂಡಿದೆ. ಭೋಜನ ವಿರಾಮದ ಬಳಿಕ ಕಲಾಪ ಮುಂದೂಡಿಕೆಯಾಗುತ್ತಿದ್ದಂತೆ, ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಶಾಸಕಿ ರೂಪಾ ಶಶಿಧರ್ ತಮ್ಮದೇ ಪಕ್ಷದ ಶಾಸಕರ ಎದುರು ಮೇಜು ಕುಟ್ಟಿ ಸಿಟ್ಟು ಹೊರಹಾಕಿದ ಪ್ರಸಂಗ ನಡೆದಿದೆ. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಕಲಾಪ …

Read More »

ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ ಕೇಸ್‌ – ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಸುತ್ತಿರುವ ಸಿಸಿಟಿವಿ ದೃಶ್ಯ ಔಟ್‌

ಮುಂಬೈ: ಪ್ರತಿಷ್ಠಿತ ಐಐಟಿ ಬಾಂಬೆಯ  ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿವೆ. ಸೆಪ್ಟೆಂಬರ್ 18ರಂದು ಪರೀಕ್ಷಾ ಕೊಠಡಿಯಲ್ಲಿ ಸಾಹಿಲ್ ಮೊಬೈಲ್ ಫೋನ್ ಬಳಸುತ್ತಿರುವ ಹಾಗೂ ಇನ್ವಿಜಿಲೇಟರ್ ಆಗಿದ್ದ ಪ್ರಾಧ್ಯಾಪಕರು ಆತನನ್ನು ವಿಚಾರಿಸಿ ಕೊಠಡಿಯಿಂದ ಹೊರಗೆ ಕಳುಹಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿರುವ ಮುಂಬೈ ಪೊಲೀಸರ ಕ್ರೈಂ ಬ್ರಾಂಚ್ ತನಿಖಾ …

Read More »

ರಾಜ್ಯದಲ್ಲಿ ಭೀಕರ ಬರ|ಶೇ.50ರಷ್ಟು ಮೊತ್ತವನ್ನು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡಿ – ಮೋದಿಗೆ ಡಿಕೆಶಿ ಪತ್ರ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು ತುರ್ತಾಗಿ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿ ಎಂದು ಸಿಎಂ ಡಿಕೆ ಶಿವಕುಮಾರ್‌  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 76 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಒಟ್ಟು ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ನಷ್ಟದ ಸಮಗ್ರ ಮೌಲ್ಯಮಾಪನ ಪೂರ್ಣಗೊಳ್ಳುವ ಮೊದಲೇ ತುರ್ತಾಗಿ …

Read More »