Breaking News

Monthly Archives: ಸೆಪ್ಟೆಂಬರ್ 2026

ಆಸ್ತಿ ವಿವಾದಕ್ಕೆ ತಾಯಿ, ಮಗನ ಬರ್ಬರ ಹತ್ಯೆ – ಕೊಲೆ ಬಳಿಕ ಶವಗಳ ಮುಂದೆಯೇ ಕುಳಿತು ಊಟ ಮಾಡಿದ ಆರೋಪಿಗಳು!

ಹಾವೇರಿ: ಮನೆ ಖಾಲಿ ಮಾಡಿಸಲು ಬಂದ ತಾಯಿ – ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾನಗಲ್  ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ. ಪ್ರೇಮಾ ಬಡಿಗೇರ್‌ (55) ಹಾಗೂ ಅವಿನಾಶ್ ಬಡಿಗೇರ್‌ (35) ಕೊಲೆಯಾದ ದುರ್ದೈವಿಗಳು. ತಿರಕಯ್ಯ ಹೀರೆಮಠ ಹಾಗೂ ಬಸವರಾಜ್ ಹೊಸಮಠ ಕೊಲೆ ಆರೋಪಿಗಳಾಗಿದ್ದಾರೆ. ಈ ಎರಡೂ ಕುಟುಂಬದ ನಡುವೆ ಆಸ್ತಿ ವಿಚಾರಕ್ಕೆ ಬರೋಬ್ಬರಿ 20 ವರ್ಷಗಳಿಂದ ವ್ಯಾಜ್ಯ ಇತ್ತು. ಈ ಬಗ್ಗೆ ಕೋರ್ಟ್‌ನಲ್ಲಿ  ತಮ್ಮ ಪರ ತೀರ್ಪು …

Read More »

ಭಯೋತ್ಪಾದನೆಗೆ ಪಿತೂರಿ ಪ್ರಕರಣ – ಚಿಕ್ಕಬಳ್ಳಾಪುರ ಪೊಲೀಸರಿಂದ ಮತ್ತೋರ್ವನ ಬಂಧನ

ಚಿಕ್ಕಬಳ್ಳಾಪುರ: ಭಯೋತ್ಪಾದನೆಗೆ  ಪಿತೂರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಚಿಕ್ಕಬಳ್ಳಾಪುರ  ಪೊಲೀಸರು ಹಾಸನದ  ಅರಕಲಗೂಡಿನಲ್ಲಿ ಬಂಧಿಸಿದ್ದಾರೆ. ಬಿಹಾರ  ಮೂಲದ ಸಲಾಮಿನ್‌ (25) ಬಂಧಿತ ಆರೋಪಿ. ಈತ ಹಾವೇರಿಯಲ್ಲಿ ಅಣ್ಣನೊಂದಿಗೆ ರಸ್ತೆ ನಿರ್ಮಾಣ ಕೆಲಸ ಮಾಡುತ್ತಿದ್ದ. ಹಾವೇರಿಯಲ್ಲಿ ಕೆಲಸ ಮುಗಿದಿದ್ದು, ಅರಕಲಗೂಡಿಗೆ ಕೆಲಸಕ್ಕೆ ತೆರಳುವಂತೆ ಗುತ್ತಿಗೆದಾರ ಹೇಳಿದ್ದ. ಸೆ.24 ರಂದು ಅರಕಲಗೂಡಿಗೆ ಬಂದು ತಂಗಿದ್ದ. ಶಬ್ಬೀರ್ ನೀಡಿದ ಮಾಹಿತಿ ಆಧಾರದ ಮೇಲೆ ಸಲಾಮಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಅರಕಲಗೂಡು …

Read More »

ಗವಿಸಿದ್ದೇಶ್ವರ ಶ್ರೀಗಳ ದರ್ಶನ ಪಡೆದ ಬಸವರಾಜ್ ರಾಯರೆಡ್ಡಿ

ಕೊಪ್ಪಳ: ಗವಿಸಿದ್ದೇಶ್ವರ ಸ್ವಾಮೀಜಿಗಳು ಈ ಬಾರಿ ಮೈಸೂರು ದಸರಾ  ಉದ್ಘಾಟಿಸುತ್ತಿರುವ ಹಿನ್ನೆಲೆ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಅವರು ಗವಿಮಠಕ್ಕೆ ಭೇಟಿ ನೀಡಿದ್ದಾರೆ. ಗವಿಸಿದ್ದೇಶ್ವರ ಶ್ರೀಗಳ ಮೌನವೃತದ ನಡುವೆಯೂ ಸಚಿವರು ಕೊಪ್ಪಳ ಗವಿಮಠಕ್ಕೆ ಭೇಟಿ ನೀಡಿ, ಶ್ರೀಗಳ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗವಿಸಿದ್ದೇಶ್ವರ ಸ್ವಾಮೀಜಿಗಳು ದಸರಾ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ. ಮುಖ್ಯಮಂತ್ರಿಗಳು ಶ್ರೀಗಳ ಜೊತೆ ಮಾತನಾಡಿ, ಈ ವರ್ಷದ ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಗವಿಮಠದ …

Read More »

ಡೆಮು ರೈಲು ಡಿಕ್ಕಿ – 8 ಎಮ್ಮೆಗಳು ದುರ್ಮರಣ

ಬಳ್ಳಾರಿ: ವೇಗವಾಗಿ ಬಂದ ಡೆಮು ರೈಲೊಂದು ಹಳಿಗೆ ಅಡ್ಡ ಬಂದ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಎಂಟು ಎಮ್ಮೆಗಳು ಛಿದ್ರ ಛಿದ್ರವಾಗಿ ಸಾವನ್ನಪ್ಪಿರುವ ಧಾರುಣ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪ ನಡೆದಿದೆ. ಮರಿಯಮ್ಮನಹಳ್ಳಿ ಪಟ್ಟಣದ ನಿವಾಸಿ ಕಾಳಪ್ಪ ಎಂಬುವವರು ಎಂದಿನಂತೆ ತಮ್ಮ ಎಮ್ಮೆಗಳನ್ನು ಮೇಯಿಸಲು ಕರೆದೊಯ್ದಿದ್ದರು. ಈ ವೇಳೆ ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಡೆಮು ಎಂಜಿನ್ ರೈಲು ಅಪ್ಪಳಿಸಿದೆ. ಡಿಕ್ಕಿಯ …

Read More »

ಜನತೆಗೆ ಬೆಲೆ ಏರಿಕೆಯ ಬಿಸಿ: ನಂದಿನಿ ಹಾಲಿನ ದರ ಲೀಟರ್‌ಗೆ 4 ರಿಂದ 5 ರೂ. ಹೆಚ್ಚಳ?

ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದ್ದು, ನಂದಿನಿ ಹಾಲಿನ ದರ ಏರಿಕೆ ಬಹುತೇಕ ನಿಶ್ಚಿತವಾಗಿದೆ. ಪ್ರತಿ ಲೀಟರ್ ಹಾಲಿನ ಬೆಲೆ 4 ರಿಂದ 5 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಬೆಂಗಳೂರಿನ ಕರ್ನಾಟಕ ಹಾಲು ಮಹಾಮಂಡಳ  ಕಚೇರಿಯಲ್ಲಿ ಇಂದು ಮಹತ್ವದ ಸರ್ವಸದಸ್ಯರ ಸಭೆ ಜರುಗಿತು. ಸಭೆಯಲ್ಲಿ ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಪ್ರಮುಖರು ಭಾಗವಹಿಸಿದ್ದು, ಹೈನುಗಾರರ ಹಿತದೃಷ್ಟಿಯಿಂದ ಪ್ರತಿ ಲೀಟರ್ ಹಾಲಿಗೆ ಕನಿಷ್ಠ …

Read More »

ಜಿಲ್ಲಾ ಮಟ್ಟದ ದಸರಾ ಕಬಡ್ಡಿ ಗೆದ್ದ ಮಹಾವಿದ್ಯಾಲಯದ ಮಹಿಳಾ ತಂಡ

ಬಾಗಲಕೋಟೆ, 26: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಮಹಿಳೆಯರ ಕಬಡ್ಡಿ ಕ್ರೀಡಾಕೂಟದಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಮಹಿಳಾ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಂದು ತಂಡದಂತೆ ಒಟ್ಟು 10 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ರೋಚಕವಾಗಿ ನಡೆದ ಅಂತಿಮ ಪಂದ್ಯದಲ್ಲಿ ಬೀಳಗಿ ತಾಲೂಕಿನ ತೊಳಮಟ್ಟಿ ಗ್ರಾಮದ ತಂಡವನ್ನು 28-12 ಅಂತರದಿಂದ ಸೋಲಿಸುವ ಮೂಲಕ ಬಸವೇಶ್ವರ ಕಲಾ ಮಹಾವಿದ್ಯಾಲಯದ …

Read More »

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ – ಮಂತ್ರಾಲಯದಲ್ಲಿ ನದಿ ತೀರಕ್ಕೆ ತೆರಳದಂತೆ ಸೂಚನೆ

ರಾಯಚೂರು: ತುಂಗಭದ್ರಾ ನದಿಯಲ್ಲಿ  ನೀರಿನ ಹರಿವು ಹೆಚ್ಚಳವಾಗಿದ್ದು, ಪರಿಣಾಮ ಮಂತ್ರಾಲಯದಲ್ಲಿ  ನದಿ ತೀರಕ್ಕೆ ತೆರಳದಂತೆ ಮಠದ ಆಡಳಿತ ಮಂಡಳಿ ಭಕ್ತರಿಗೆ ಸೂಚನೆ ನೀಡಲಾಗಿದೆ. ತುಂಗಭದ್ರಾ ಜಲಾಶಯದಿಂದ  ನದಿಗೆ 2,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಜೊತೆಗೆ ಮಳೆ ಬರುತ್ತಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಮಂತ್ರಾಲಯದಲ್ಲಿ ಭಕ್ತರ ಸುರಕ್ಷತೆಗೆ ಹೆಚ್ಚುವರಿ ಭದ್ರತೆಗಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮಠದ ಆಡಳಿತ ಮಂಡಳಿ ಹಾಗೂ ಮಂತ್ರಾಲಯ ಪೊಲೀಸರಿಂದ …

Read More »

650 ವರ್ಷಗಳ ಹಿಂದಿನ ಶಿವಲಿಂಗ ಪತ್ತೆ; ಕಾಡುಪಾಲಾಗಿದ್ದ ಮಹದೇವ ದೇಗುಲ ಪುನರುಜ್ಜೀವನಕ್ಕೆ ಗ್ರಾಮಸ್ಥರ ಸಂಕಲ್ಪ

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ಹೊರವಲಯದ ಐಮಂಗಲ ಗ್ರಾಮದಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ. ಸುಮಾರು 650 ವರ್ಷಗಳ ಹಿಂದಿನ ಮಹದೇವ ದೇವಾಲಯ ಇಲ್ಲಿ ಇತ್ತು ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮೂಡಿದ್ದು, ಕಾಡುಪಾಲಾಗಿದ್ದ ದೇವಾಲಯವನ್ನು ಪುನರುಜ್ಜೀವನಗೊಳಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಐಮಂಗಲ ಗ್ರಾಮದಿಂದ ಚೆಂಬೆಬೆಳ್ಳೂರು ರಸ್ತೆಯಲ್ಲಿ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಕಾಡಿನ ಪ್ರದೇಶದಲ್ಲಿ ಶಿವಲಿಂಗ, ಬಸವ ಮೂರ್ತಿ, ಗರ್ಭಗುಡಿಯ ಕುರುಹು, ತೀರ್ಥಕುಂಡ ಸೇರಿದಂತೆ ಹಲವು ಅವಶೇಷಗಳು ಪತ್ತೆಯಾಗಿವೆ. ಚಳಿ, ಮಳೆ, ಗಾಳಿ, …

Read More »

ತಾಯಿಯ ಸಾವಿನಲ್ಲೂ ಸಾರ್ಥಕತೆ ಮೆರೆದ ಮಕ್ಕಳು; 7-8 ಜನರ ಬಾಳಿಗೆ ಬೆಳಕಾದ ಕುಸುಮಾ!

ಆನೇಕಲ್: ತಾಯಿಯ ಸಾವಿನ ನೋವಿನ ನಡುವೆಯೂ ಇಬ್ಬರು ಪುಟ್ಟ ಮಕ್ಕಳು ಹಾಗೂ ಪತಿ ಕೈಗೊಂಡ ಮಹತ್ವದ ನಿರ್ಧಾರ ಹಲವರ ಬದುಕಿಗೆ ಹೊಸ ಆಶಾಕಿರಣವಾಗಿದೆ. ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬ ಸಾರ್ಥಕತೆ ಮೆರೆದಿದೆ. ಜಿಗಣಿ  ಸಮೀಪದ ಹಾರಗದ್ದೆಯ ದ್ಯಾವಸಂದ್ರ ಗ್ರಾಮದ ನಿವಾಸಿ ಕುಸುಮಾ (39) ಅಂಗಾಂಗ ದಾನ ಮಾಡಿದ ಮಹಿಳೆ. ಖಾಸಗಿ ಕಂಪನಿಯೊಂದನ್ನ ನಡೆಸುತ್ತಿದ್ದ ಕುಸುಮಾ ಅವರ ಪತಿ ಜಯಶಂಕರ್. ದಂಪತಿಗೆ ಓರ್ವ ಹೆಣ್ಣು ಹಾಗೂ …

Read More »

ಸರ್ಕಾರದಿಂದ ಬಾರದ ಕೋಟ್ಯಂತರ ರೂಪಾಯಿ ಅನುದಾನ – ಪತ್ರ ಬರೆದು ಕೆಆರ್‌ಐಡಿಎಲ್ ಎಇಇ ನಾಪತ್ತೆ!

ಗದಗ: ರಾಜ್ಯ ಸರ್ಕಾರದ ಅನುದಾನ ಬಾರದಕ್ಕೆ ಪತ್ರ ಬರೆದು KRIDL ಎಇಇ (ಸಹಾಯಕ ಕಾರ್ಯಪಾಲಕ ಎಂಜಿನಿಯರ್) ಅಧಿಕಾರಿ ನಾಪತ್ತೆಯಾದ ಘಟನೆ ಗದಗನಲ್ಲಿ ನಡೆದಿದೆ. ರಾಜ್ಯ ಸರ್ಕಾರದಿಂದ ಅನುದಾನ  ಬಿಡುಗಡೆಯಾಗದೇ ಉಂಟಾದ ಆರ್ಥಿಕ ಸಂಕಷ್ಟವೇ ಅಧಿಕಾರಿಯ ನಾಪತ್ತೆಗೆ ಕಾರಣ ಎನ್ನುವ ಪ್ರಶ್ನೆ ಇದೀಗ ಕಾಡುತ್ತಿದೆ. ಬೆಂಗಳೂರಿನ  ಕೆಆರ್‌ಐಡಿಎಲ್‌ನ ಇಇ ಅವರಿಗೆ ಪತ್ರ ಬರೆದು ಫರ್ವೀಜ್ ನಾಪತ್ತೆಯಾಗಿದ್ದಾರೆ. ಪತ್ರದಲ್ಲಿ ಅನುದಾನ ಬಿಡುಗಡೆಯಾಗದಿರುವ ಕುರಿತು ಉಲ್ಲೇಖಿಸಲಾಗಿದೆ. ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗದ ಕಾರಣ ತಾವು …

Read More »