Breaking News

ಬೀದರ್‌ನಲ್ಲಿ ಕೃಷ್ಣಮೃಗ ಬೇಟೆಯಾಡಿದ 6 ಬೇಟೆಗಾರರು ಅಂದರ್

Spread the love

ಬೀದರ್: ಜಿಲ್ಲೆಯಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಒಟ್ಟು ಆರು ಜನರ ಪೈಕಿ ಪರಾರಿಯಾಗಿದ್ದ ಮೂವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿಯ ಸೋಹೆಬ್ ಮಲ್ಲಿಕ್, ಹೈದ್ರಾಬಾದ್  ಮೂಲದ ಅಬ್ದುಲ್ ಸಾಹಿದ್ & ಹಮೀದ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಹೈದ್ರಾಬಾದ್ ಮೂಲದ ನಾಸೀರ್, ಆರೀಫ್ ಖಾನ್ ಮತ್ತು ಮಹ್ಮದ್ ಹಜ್ಜಿ ಮೂವರನ್ನು ಬಂಧಿಸಿದ್ದು, ಒಟ್ಟು ಆರು ಜನರನ್ನು ಬಂಧಿಸದಂತಾಗಿದೆ. 

ಬೀದರ್ ತಾಲೂಕಿನ ಚೊಂಡಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇಟೆಯಾಡುತ್ತಿದ್ದ ಬೇಟೆಗಾರರನ್ನು ನೋಡಿ ಈ ಬಗ್ಗೆ ಜನವಾಡ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಗ್ರಾಮಸ್ಥರ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಮೂವರು ಬೇಟೆಗಾರರು ಕಾಲ್ಕಿತ್ತಿದ್ದರು. ಈ ವೇಳೆ ಮೂವರು ಸಿಕ್ಕಿಬಿದ್ದಿದ್ದು, ಮೂವರು ಪರಾರಿಯಾಗಿದ್ರು.

ಅರೆಸ್ಟ್ ವೇಳೆ ಬೇಟೆಗೆ ಬಳಸಿದ ಬಂದೂಕು ಹಾಗೂ ವಾಹನ ಪತ್ತೆಯಾಗಿದ್ದು, ಸದ್ಯ ಜನವಾಡ ಪೊಲೀಸರು, ಆರು ಜನ ಆರೋಪಿಗಳನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ