Breaking News

Daily Archives: ಆಗಷ್ಟ್ 14, 2026

ಕಾರಾಗೃಹ ವ್ಯವಸ್ಥೆಯ ಲೋಪದಲ್ಲಿ ಯಾರೇ ಇದ್ದರೂ ಅವರ ಮೇಲೆ ಕ್ರಮ: ಪ್ರಿಯಾಂಕ್ ಖರ್ಗೆ

ಬೆಂಗಳೂರು : ಕಾರಾಗೃಹ ವ್ಯವಸ್ಥೆ ಲೋಪದಲ್ಲಿ ಎಷ್ಟೇ ದೊಡ್ಡ ಅಧಿಕಾರಿಗಳು ಇದ್ದರು ಅವರ ವಿರುದ್ದ ಕ್ರಮ ಆಗುತ್ತದೆ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ  ತಿಳಿಸಿದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮೊಬೈಲ್ ಪತ್ತೆ ಆಗಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾರಾಗೃಹದಲ್ಲಿ ಆಗಬಾರದ ಚಟುವಟಿಕೆಗಳು ನಡೆದಿದ್ದರೆ ಕ್ರಮ ಆಗಲೇಬೇಕು. ಈ ವಿಚಾರಕ್ಕೆ ಸಂಬಂಧಿಸಿದ ವಿಡಿಯೋ ಸ್ವಲ್ಪ ಹಳೆಯದು. ಯಾರು ಮೊಬೈಲ್ ಕೊಟ್ಟರು, ಹೇಗೆ ಒಳಗೆ ಬಂತು ಎಂಬ ಬಗ್ಗೆ ತನಿಖೆ …

Read More »

ಪೊಲೀಸ್‌ ಜೀಪ್‌ ಬೆನ್ನಟ್ಟಿದ ಪುಂಡಾನೆ – ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳಾ ಪಿಎಸ್‌ಐ

ಹಾಸನ: ಕಾಡಾನೆ  ಸೆರೆ ಕಾರ್ಯಾಚರಣೆ ವೇಳೆ ಪೊಲೀಸ್  ಜೀಪನ್ನು ಒಂಟಿ ಸಲಗ ಅಟ್ಟಾಡಿಸಿದ ಘಟನೆ ಬೇಲೂರು ತಾಲೂಕಿನ ಕೋಗೋಡು ಗ್ರಾಮದ ಬೇಡಿ ಎಸ್ಟೇಟ್‌ ಬಳಿ ನಡೆದಿದೆ. ಜೀಪಿನಲ್ಲಿದ್ದ ಪಿಎಸ್‌ಐ ಶೋಭಾ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಾರ್ಯಾಚರಣೆಯ ಭದ್ರತೆಗಾಗಿ ಅರೆಹಳ್ಳಿ ಪಿಎಸ್‌ಐ ಶೋಭಾ ಅವರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ, ಕಾಡಾನೆ ರಸ್ತೆ ದಾಟುವಾಗ ಅಲ್ಲಿದ್ದ ಪಿಎಸ್‌ಐ ಜೀಪ್‌ನ್ನು ಅಟ್ಟಾಡಿಸಿದೆ. ಬಳಿಕ ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ …

Read More »

ಮೇಕೆದಾಟು ಯೋಜನೆಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

ಬೆಂಗಳೂರು: ನೂತನವಾಗಿ ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಎನ್.ಚಲುವರಾಯಸ್ವಾಮಿ  ಅವರು ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಕುಡಿಯುವ ನೀರಿನ ಯೋಜನೆ ಕುರಿತು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ, ಯೋಜನೆಯ ಪ್ರಸ್ತುತ ಸ್ಥಿತಿಗತಿ, ಎದುರಾಗಿರುವ ಸವಾಲುಗಳು ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಭವಿಷ್ಯದಲ್ಲಿ ಸಮರ್ಪಕ ಹಾಗೂ ಶಾಶ್ವತ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ಮೇಕೆದಾಟು ಯೋಜನೆ …

Read More »

ಆ.16ಕ್ಕೆ ಕೊಡಗು ಜಿಲ್ಲೆಗೆ ಡಿಕೆಶಿ ಭೇಟಿ – ಭಾಗಮಂಡಲ, ತಲಕಾವೇರಿಯಲ್ಲಿ ವಿಶೇಷ ಪೂಜೆ

ಮಡಿಕೇರಿ: ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ ಶಿವಕುಮಾರ್  ಅವರು ಕೊಡಗು  ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಆಗಸ್ಟ್ 16ಕ್ಕೆ ಜಿಲ್ಲೆಗೆ ಆಗಮಿಸಲಿರುವ ಡಿಕೆ ಶಿವಕುಮಾರ್ ಅವರು ಭಾಗಮಂಡಲ  ಮತ್ತು ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಪ್ರವಾಸವನ್ನು ಆರಂಭಿಸಲಿದ್ದಾರೆ. ಆಗಸ್ಟ್ 16ರಂದು ಬೆಳಗ್ಗೆ 11 ಗಂಟೆಗೆ ಭಾಗಮಂಡಲ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ತಲಕಾವೇರಿಗೆ ತೆರಳಿ ಕಾವೇರಿ ತಾಯಿಗೆ …

Read More »

ಮೊಬೈಲ್ ಬಳಸಬೇಡ ಎಂದು ತಾಯಿ ಬುದ್ಧಿವಾದ – ವಿದ್ಯಾರ್ಥಿನಿ ಆತ್ಮಹತ್ಯೆ

ಧಾರವಾಡ: ಹೆಚ್ಚು ಮೊಬೈಲ್  ಬಳಕೆ ಮಾಡಬೇಡ, ಹೆಚ್ಚು ರೀಲ್ಸ್ ನೋಡಬೇಡ ಎಂದು ತಾಯಿ ಬೈದು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ನಡೆದಿದೆ. ಕೊಟಬಾಗಿ ಗ್ರಾಮದ ಮೇಘಾ ಗುಬ್ಬಣ್ಣವರ್ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮೇಘಾ ಧಾರವಾಡದ ಖಾಸಗಿ ಕಾಲೇಜೊಂದರಲ್ಲಿ ಡಿ.ಇಡಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆ ಹೆಚ್ಚು ಮೊಬೈಲ್ ಬಳಕೆ ಮಾಡುತ್ತಾಳೆ, ರೀಲ್ಸ್ ನೋಡುತ್ತಾಳೆ ಎಂದು ಆಕೆಯ ತಾಯಿ ಮೇಘಾಳಿಗೆ …

Read More »

ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ-ಮಗ

ಬೆಂಗಳೂರು: ಸಾವಿನ ದವಡೆಯಿಂದ ತಾಯಿ ಹಾಗೂ ಮಗ ಅದೃಷ್ಟವಶಾತ್ ಪಾರಾಗಿರುವ ಎದೆ ಝಲ್ಲೆನಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಾಯಿ ಹಾಗೂ ಬಾಲಕ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಹಿಂದಿನಿಂದ ಪಿಕಪ್ ವಾಹನವೊಂದು ಬರುತ್ತಿತ್ತು. ಏಕಾಏಕಿ ಎರಡು ವಾಹನಗಳು ಸೈಡ್‌ನಿಂದ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ತಾಯಿ, ಮಗ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಇಬ್ಬರೂ ವಾಹನದ ಹಿಂಬದಿಯ ಟೈರ್ ಪಕ್ಕ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೂದಲೆಳೆ ಅಂತರದಲ್ಲಿ ಸಾವಿನಿಂದ …

Read More »

ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಟ್ವಿಸ್ಟ್ – ಗೆಳೆಯನಿಂದಲೇ ನಟಿಗೆ ಬಿಗ್ ಶಾಕ್

ಬೆಂಗಳೂರು: ನಟಿ ರನ್ಯಾ ರಾವ್  ಅವರ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಗೆಳೆಯನೇ ನಟಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ, ಡಿಆರ್‌ಐ ಅಧಿಕಾರಿಗಳ ಶೋಕಾಸ್ ನೋಟಿಸ್‌ಗೆ ಬೆದರಿದ ಸ್ಮಗ್ಲರ್ ಕೋರ್ಟ್ ಮುಂದೆ ತಪ್ಪೊಪ್ಪಿಗೆ ನೆಪದಲ್ಲಿ ಅವಾಂತರ ಸೃಷ್ಟಿಸಿದ್ದಾನೆ. ಈ ಮೂಲಕ ರನ್ಯಾ ರಾವ್‌ಗೆ ಗೆಳೆಯನಿಂದಲೇ ಬಿಗ್ ಶಾಕ್ ಎದುರಾಗಿದೆ. ನಾನು ರನ್ಯಾ ರಾವ್‌ಗೆ ಚಿನ್ನದ ಬಿಸ್ಕೆಟ್ ನೀಡಿದ್ದು ನಿಜ. ಆದರೆ ನಾನು ಚಿನ್ನದ ಬಿಸ್ಕೆಟ್ ನೀಡಿದ್ದು …

Read More »

ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದೇ ಮೋದಿ ವಿದೇಶಾಂಗ ನೀತಿ: ಕಾಂಗ್ರೆಸ್‌ ನಾಯಕನ ತಬ್ಬಿಕೊಂಡು ರಾಗಾ ವ್ಯಂಗ್ಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದೇ ಪ್ರಧಾನಿಯವರ ರಾಜತಾಂತ್ರಿಕತೆ ಎನ್ನುವಂತಾಗಿದೆ ಎಂದು ಟಾಂಗ್‌ ಕೊಟ್ಟಿದ್ದಾರೆ. ರಚನಾತ್ಮಕ ಕಾಂಗ್ರೆಸ್ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಅವರಿಗೆ ಈ ಐಡಿಯಾ ಎಲ್ಲಿಂದ ಬಂತು ಅಂತ ನನಗೆ ಗೊತ್ತಿಲ್ಲ. ವಿಚಿತ್ರ ಐಡಿಯಾಗಳು ಜನರ ತಲೆಗೆ ಹೋಗುತ್ತವೆ. ಇದು ವಿದೇಶಾಂಗ ನೀತಿ ಅಂತ ಅವರು ಭಾವಿಸುತ್ತಾರೆ ಎಂದು ಹೇಳಿ …

Read More »

ತಮಿಳುನಾಡಿಗೆ ನೀರು ಬಿಟ್ರೆ ಮತ್ತೆ ಕರ್ನಾಟಕ ಬಂದ್ – ಸರ್ಕಾರಕ್ಕೆ ವಾಟಾಳ್ ಎಚ್ಚರಿಕೆ

ಬೆಂಗಳೂರು: ತಮಿಳುನಾಡಿಗೆ ನೀರು ಬಿಟ್ಟರೆ ಮತ್ತೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಸರ್ಕಾರಕ್ಕೆ ವಾಟಾಳ್ ನಾಗರಾಜ್  ಎಚ್ಚರಿಕೆ ನೀಡಿದ್ದಾರೆ. ಕಾವೇರಿ, ಕಳಸಬಂಡೂರಿ, ಮಹಾದಾಯಿ, ಮೇಕೆದಾಟು, ಉತ್ತರ ಕನ್ನಡ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಖಂಡ ಕರ್ನಾಟಕ ಬಂದ್ ಇಡೀ ರಾಜ್ಯಾದ್ಯಂತ ಚೆನ್ನಾಗಿ ಶಬ್ದ ಮಾಡಿದೆ. ಒಂದಿಲ್ಲೊಂದು ಪ್ರತಿಭಟನೆಯಾಗಿದೆ. ದೇಶ ಹಾಗೂ ರಾಜ್ಯದ ಗಮನ ಸೆಳೆದಿದೆ. ಇದಕ್ಕೆ ಜನರಿಗೆ ಅಭಿನಂದನೆ …

Read More »

ರಾಜ್ಯದ ಇತರೆಡೆ ‘ಬಿ’ ಖಾತಾ ನಿವೇಶನಕ್ಕೆ ಎ ಖಾತೆ: ಸರ್ಕಾರ ಬಿ ಖಾತಾ ಆಸ್ತಿ ತೆರಿಗೆ ಪಾವತಿ ಕಡ್ಡಾಯ

ಬೆಂಗಳೂರು: ರಾಜ್ಯಾದ್ಯಂತ ನಗರ ಪ್ರದೇಶಗಳ ವ್ಯಾಪ್ತಿಗಳಲ್ಲಿನ ನಿವೇಶನಗಳಿಗೂ ‘ಬಿ’ ಖಾತಾದಿಂದ  ‘ಎ’ ಖಾತೆ ನೀಡಲು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ, ಅನಧಿಕೃತ ನಿವೇಶನಗಳಿಗೆ ಖಾತೆ ನೀಡುವುದನ್ನು ನಿಯಂತ್ರಸಲು ಯಾವುದೇ ಖಾತೆ ಹೊಂದಿರದ ನಿವೇಶನಗಳಿಗೆ ಹೊಸದಾಗಿ ಎ-ಖಾತಾ ನೀಡದಿರಲು ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಬಿ ಖಾತೆಗೆ ಎ ಖಾತೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದೇ ರೀತಿಯಲ್ಲಿ ರಾಜ್ಯಾದ್ಯಂತ ನಗರ ಪ್ರದೇಶಗಳಲ್ಲಿನ ಸ್ಥಳೀಯ ಯೋಜನಾ ಪ್ರದೇಶಗಳ ಒಳಗೆ ಅಥವಾ …

Read More »