Breaking News

ಬೆಳಗಾವಿಗೆ ಬಂತು ಹೈಟೆಕ್ ‘ಮೊಬೈಲ್ ಫೋರೆನ್ಸಿಕ್ ವ್ಯಾನ್’: ತನಿಖೆಗೆ ವೈಜ್ಞಾನಿಕ ಸ್ಪರ್ಶ!

Spread the love

ಬೆಳಗಾವಿಗೆ ಬಂತು ಹೈಟೆಕ್ ‘ಮೊಬೈಲ್ ಫೋರೆನ್ಸಿಕ್ ವ್ಯಾನ್’: ತನಿಖೆಗೆ ವೈಜ್ಞಾನಿಕ ಸ್ಪರ್ಶ!
ಅಪರಾಧ ಪ್ರಕರಣಗಳ ತನಿಖೆಯನ್ನು ಮತ್ತಷ್ಟು ವೈಜ್ಞಾನಿಕ ಹಾಗೂ ಪರಿಣಾಮಕಾರಿಗೊಳಿಸಲು ಪೊಲೀಸ್ ಇಲಾಖೆ ಬಿಗ್ ಸ್ಟೆಪ್ ಇಟ್ಟಿದೆ. ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯದ ಸಹಯೋಗದೊಂದಿಗೆ ಬೆಳಗಾವಿ ನಗರಕ್ಕೂ ಅತ್ಯಾಧುನಿಕ ‘ಮೊಬೈಲ್ ಫೋರೆನ್ಸಿಕ್ ವ್ಯಾನ್’ ಸೇವೆ ಲಭ್ಯವಾಗಿದೆ. ಘಟನಾ ಸ್ಥಳದಲ್ಲೇ ಸಾಕ್ಷ್ಯ ಸಂಗ್ರಹಿಸಲು ಈ ವಾಹನದ ನೆರವಾಗಲಿದೆ.
ಅಪರಾಧ ನಡೆದ ಸ್ಥಳದಲ್ಲೇ ವೈಜ್ಞಾನಿಕ ಸಾಕ್ಷ್ಯಗಳನ್ನು ಪತ್ತೆಹಚ್ಚಿ, ಸಂಗ್ರಹಿಸಿ, ಸಂರಕ್ಷಿಸುವ ಉದ್ದೇಶದಿಂದ ಈ ಹೈಟೆಕ್ ವಾಹನವನ್ನು ವಿನ್ಯಾಸಗೊಳಿಸಲಾಗಿದೆ.
ಈ ಫೋರೆನ್ಸಿಕ್ ವ್ಯಾನ್‌ನಲ್ಲಿ ಒಟ್ಟು 16 ವಿವಿಧ ಮಾದರಿಯ ಕಿಟ್‌ಗಳಿದ್ದು, ಕ್ರೈಂ ಸೀನ್ ಪ್ರೊಟೆಕ್ಷನ್, ಡಿಎನ್‌ಎ, ಲೈಂಗಿಕ ದೌರ್ಜನ್ಯ ಸಾಕ್ಷ್ಯ ಸಂಗ್ರಹ ಹಾಗೂ ಮಾದಕ ವಸ್ತು ತಪಾಸಣೆ ಕಿಟ್‌ಗಳು ಸೇರಿವೆ. ಜೊತೆಗೆ ಬೆರಳಚ್ಚು, ಹೆಜ್ಜೆ ಗುರುತು, ಶಸ್ತ್ರಾಸ್ತ್ರ-ಸ್ಫೋಟಕ ಪತ್ತೆ ಮತ್ತು ಡಿಜಿಟಲ್ ಸಾಕ್ಷ್ಯ ಸಂಗ್ರಹಕ್ಕೆ ಬೇಕಾದ ಸ್ಟೀರಿಯೊ ಮೈಕ್ರೋಸ್ಕೋಪ್ ಹಾಗೂ ಹೈ ಇಂಟೆನ್ಸಿಟಿ ಲೈಟ್ ಸೋರ್ಸ್‌ಗಳಂತಹ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ.
ಇಷ್ಟೇ ಅಲ್ಲದೆ, ಸಾಕ್ಷ್ಯಗಳು ಹಾಳಾಗದಂತೆ ಕಾಯ್ದಿರಿಸಲು ರೆಫ್ರಿಜರೇಟರ್, ಜಿಪಿಎಸ್ ಆಧಾರಿತ ಬಾಡಿ ವೋರ್ನ್ ಕ್ಯಾಮೆರಾ, ಜನರೇಟರ್, ಫ್ಲಡ್ ಲೈಟ್ ಹಾಗೂ ಹೈ-ರೆಸಲ್ಯೂಷನ್ ಕ್ಯಾಮೆರಾಗಳು ಈ ವ್ಯಾನ್‌ನಲ್ಲಿವೆ.
ಘಟನೆ ನಡೆದ ತಕ್ಷಣ ಕ್ರೈಂ ಸೀನ್ ಆಫೀಸರ್ಸ್ ಸ್ಥಳಕ್ಕೆ ಧಾವಿಸಿ, ಸಾಕ್ಷ್ಯಗಳು ಕಲುಷಿತಗೊಳ್ಳದಂತೆ ವೈಜ್ಞಾನಿಕವಾಗಿ ಸಂಗ್ರಹಿಸಲು ಇದು ನೆರವಾಗಲಿದೆ. ಇದರಿಂದ ತನಿಖೆಯ ಗುಣಮಟ್ಟ ಹೆಚ್ಚುವುದಲ್ಲದೆ, ನ್ಯಾಯಾಲಯದಲ್ಲಿ ಬಲವಾದ ಸಾಕ್ಷ್ಯ ಮಂಡಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದ್ದಾರೆ

Spread the love

About Laxminews 24x7

Check Also

ಗೋವಾ ಚುನಾವಣೆಗೆ ಕಾಂಗ್ರೆಸ್‌ನಿಂದ ಬಿಗ್ ಪ್ಲಾನ್: ಮೈತ್ರಿ ಸಮಿತಿಗೆ ಡಾ. ಅಂಜಲಿ ನಿಂಬಾಳ್ಕರ್ ನೇಮಕ!

Spread the love ಗೋವಾ ಚುನಾವಣೆಗೆ ಕಾಂಗ್ರೆಸ್‌ನಿಂದ ಬಿಗ್ ಪ್ಲಾನ್: ಮೈತ್ರಿ ಸಮಿತಿಗೆ ಡಾ. ಅಂಜಲಿ ನಿಂಬಾಳ್ಕರ್ ನೇಮಕ! ಗೋವಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ