ಚಿಕ್ಕಬಳ್ಳಾಪುರ: ಹೆಣ್ಣೆಂದು ಸ್ವಂತ ಮಗುವನ್ನೇ ಸಂಪ್‌ಗೆ ಹಾಕಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಶಾಂತಿನಗರದಲ್ಲಿ ನಡೆದಿದೆ. ತಂದೆ ಇಮ್ರಾನ್ ಹಾಗೂ ತಾಯಿ ಮುಸ್ಕಾನ್‌ಗೆ 13 ದಿನಗಳ ಹಿಂದೆ ಹೆಣ್ಣು ಜನಿಸಿತ್ತು. ಬುಧವಾರ ರಾತ್ರಿ (ಜು.22) ಆರೋಪಿ ಇಮ್ರಾನ್ ಮಲಗಿದ್ದ ಮಗುವನ್ನು ಎತ್ತಿಕೊಂಡು ಸಂಪ್‌ಗೆ ಹಾಕಿದ್ದಾನೆ. ಬಳಿಕ ತಾಯಿ ಎದ್ದು ಮಗು ಎಲ್ಲಿ ಎಂದು ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಆನಂತರ ಮನೆಯವರ ಜೊತೆ ಹುಡುಕಾಡುವ ನಾಟಕ ಆಡಿದ್ದಾನೆ. ಕೊನೆಗೆ …
Read More »Daily Archives: ಜುಲೈ 23, 2026
ಬಾಗಲಕೋಟೆಯಲ್ಲಿ ಗೂಳಿಗಳ ಅಟ್ಟಹಾಸ: ವೃದ್ಧನ ಮೇಲೆ ಭೀಕರ ದಾಳಿ
ಬಾಗಲಕೋಟೆ: ನಗರದ ನವನಗರ ಪ್ರದೇಶದಲ್ಲಿ ಬೀದಿಗೂಳಿಗಳ ಹಾವಳಿ ಮಿತಿಮೀರಿದ್ದು, ದಾರಿಹೋಕ ವೃದ್ಧರೊಬ್ಬರ ಮೇಲೆ ಗೂಳಿಯೊಂದು ಅತ್ಯಂತ ಭೀಕರವಾಗಿ ದಾಳಿ ನಡೆಸಿರುವ ದೃಶ್ಯ ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ನಗರದ ಡಿಸಿ ಕಚೇರಿ ಸರ್ಕಲ್ ಬಳಿಯೇ ಈ ಭಯಾನಕ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧರೊಬ್ಬರ ಬೆನ್ನತ್ತಿದ ಗೂಳಿ, ಅವರ ಮೇಲೆ ಎರಗಿ ಕೊಂಬಿನಿಂದ ಎತ್ತಿ ನೆಲಕ್ಕೆ ಬಿಸಾಡಿದೆ. ಗೂಳಿಯ ದಿಢೀರ್ ದಾಳಿಯಿಂದ ಕಂಗಾಲಾದ ವೃದ್ಧರು ಜೀವಭಯದಿಂದ ಅದರಿಂದ ತಪ್ಪಿಸಿಕೊಳ್ಳಲು …
Read More »ಕಬ್ಬು ಬೆಳೆಗಾರರಿಗೆ ಗೊಣ್ಣೆ ಹುಳು ಕಂಟಕ – ಇಳುವರಿ ಕುಸಿತದ ಭೀತಿಯಲ್ಲಿ ರೈತರು
ಬೆಳಗಾವಿ: ಒಂದೆಡೆ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆ, ಮತ್ತೊಂದೆಡೆ ಕಬ್ಬಿನ ಗದ್ದೆಗಳನ್ನು ಆವರಿಸಿರುವ ‘ಗೊಣ್ಣೆ ಹುಳುಗಳ’ ಕಾಟ! ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಲ ವಿಳಂಬವಾಗುತ್ತಿರುವುದು ಮತ್ತು ಕೀಟಬಾಧೆ ಹೆಚ್ಚುತ್ತಿರುವುದು ರೈತರ ನಿದ್ದೆಗೆಡಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 3.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, ಬಹುತೇಕ ಕಡೆ ಗೊಣ್ಣೆ ಹುಳುಗಳ ಹಾವಳಿ ವಿಪರೀತವಾಗಿದೆ. ಸೂಕ್ತ ಸಮಯದಲ್ಲಿ ಮಳೆಯಾಗದಿರುವುದು ಮತ್ತು ಬೇಸಿಗೆಯಲ್ಲಿ ಮಾಗಿ (ಆಳವಾದ) ಉಳುಮೆ …
Read More »ಮರಿಗಳ ಜೊತೆ ಕಾಡಾನೆಗಳ ದಾಂಧಲೆ – ಸುಮಾರು 8 ಎಕರೆ ಪ್ರದೇಶದ ಕಾಫಿ ತೋಟ ನಾಶ
ಹಾಸನ: ಮರಿಗಳ ಜೊತೆ ಕಾಡಾನೆಗಳು ಸುಮಾರು 8 ಎಕರೆ ಪ್ರದೇಶದ ಕಾಫಿ ತೋಟವನ್ನು ನಾಶಪಡಿಸಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಗನ್ನಾಥ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಸ್ವಾಮಿ ಎಂಬುವವರಿಗೆ ಸೇರಿದ ಜಮೀನು ಇದಾಗಿದ್ದು, ಕಾಡಾನೆಗಳ ಹಿಂಡು ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ನಾಶ ಮಾಡಿದೆ. ಈ ಪರಿಣಾಮ ಮಾಲೀಕರಿಗೆ ಸುಮಾರು 6 ಲಕ್ಷ ರೂ.ಗೂ ಅಧಿಕ ನಷ್ಟವುಂಟಾಗಿದೆ. ಮರಿಗಳು ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚಿರುವ …
Read More »ಬಲ್ಡೋಟಾ ಕಾರ್ಖಾನೆಗೆ ನುಗ್ಗಲು ಯತ್ನಿಸಿದ ರೈತ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲು
ಕೊಪ್ಪಳ: ಬಲ್ಡೋಟಾ ಕಾರ್ಖಾನೆಗೆ ನುಗ್ಗಲು ಯತ್ನದ ಆರೋಪದ ಮೇಲೆ ರೈತ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಿದೆ. ಕೊಪ್ಪಳ ತಾಲೂಕಿನ ಬಸಾಪೂರ ಬಳಿ ಇರುವ ಬಲ್ಡೋಟಾ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಕಾರ್ಖಾನೆ ಮುಂಭಾಗ ಮಂಗಳವಾರ (ಜು.22) 46ನೇ ರೈತ ಹುತಾತ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಂತಿಯುತವಾಗಿ ಮುಕ್ತಾಯಗೊಳ್ಳಬೇಕಿದ್ದ ಕಾರ್ಯಕ್ರಮ, ಕೊನೆಗೆ ಕ್ರಾಂತಿಕಾರಿ ಸ್ವರೂಪ ಪಡೆದುಕೊಂಡಿತು. ಈ ವೇಳೆ ಬಲ್ಡೋಟಾ ಕಾರ್ಖಾನೆಗೆ ನುಗ್ಗಲು ಯತ್ನದ ಆರೋಪದಡಿ ಅಲ್ಲಮಪ್ರಭು ಬೆಟ್ಟದೂರು ಸೇರಿ 6 ಜನರ …
Read More »ಇನ್ಮುಂದೆ ಫುಟ್‌ಪಾತ್‌ನಲ್ಲಿ ಬೈಕ್ ಚಲಾಯಿಸಿದ್ರೆ 5,000 ರೂ. ದಂಡ: ಕೃಷ್ಣ ಬೈರೇಗೌಡ
ಬೆಂಗಳೂರು: ಪಾದಾಚಾರಿ ಮಾರ್ಗದಲ್ಲಿ ಮೋಟಾರು ವಾಹನ ಚಲಾಯಿಸುವವರಿಗೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು 5,000 ರೂ.ಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿ ಸಚಿವ ಕೃಷ್ಣ ಬೈರೇಗೌಡ ಅವರು ಸಾರಿಗೆ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಬುಧವಾರ ಬೆಂಗಳೂರು ನಗರ ಟ್ರಾಫಿಕ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಸಾರ್ವಜನಿಕರ ನಡೆಯುವ ಹಕ್ಕನ್ನ ಖಚಿತಪಡಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಗರದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ …
Read More »ಸಾಕು ನಾಯಿ ಹೊತ್ತೊಯ್ದ ಚಿರತೆ
ಮಡಿಕೇರಿ: ಕೊಡಗಿನ ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ಹೊಂಚು ಹಾಕಿ ಸಾಕು ನಾಯಿಯನ್ನು ಹೊತ್ತೊಯ್ದಿರುವ ಘಟನೆ ನಡೆದಿದೆ. ಇಂದು (ಬುಧವಾರ) ಮಧ್ಯಾಹ್ನ 3 ಗಂಟೆ ಸ್ಥಳೀಯ ನಿವಾಸಿ ಅರುಣ್ ಎಂಬುವವರ ಮನೆಯ ಸಮೀಪ ಚಿರತೆ ಕಾಣಿಸಿಕೊಂಡಿದ್ದು, ಸಾಕು ನಾಯಿಯನ್ನು ಎಳೆದೊಯ್ದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಲೂರು ಸಿದ್ಧಾಪುರ ವ್ಯಾಪ್ತಿಯ ಆಲೂರು, ಮಾಲಂಬಿ, ಹೊಸಗುತ್ತಿ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಚಿರತೆ ಒಡಾಟ ನಡೆಯುತ್ತಿದೆ. ರಾತ್ರಿ …
Read More »ಸಂಪುಟ ವಿಸ್ತರಣೆ ಇನ್ನೊಂದು ವಾರ ಮುಂದೂಡಿಕೆ – ಡಿಕೆಶಿಯಿಂದ 3 ಡಿಸಿಎಂ ಬ್ರಹ್ಮಾಸ್ತ್ರ..!
ನವದೆಹಲಿ: ಸಂಪುಟ ವಿಸ್ತರಣೆ ಇನ್ನೂ ಒಂದು ವಾರ ಮುಂದೂಡಿಕೆ ಆಗಿದೆ. ಇವತ್ತು ನಡೆಯಬೇಕಿದ್ದ ಪ್ರಮಾಣ ವಚನ ರದ್ದಾಗಿದೆ ಶನಿವಾರ ಅಥವಾ ಭಾನುವಾರ ಸಚಿವರ ಲಿಸ್ಟ್ ಫೈನಲ್ ಆಗಲಿದ್ದು, ಮುಂದಿನ ಬುಧವಾರದೊಳಗೆ ಪ್ರಮಾಣ ವಚನ ಸಾಧ್ಯತೆ ಹೆಚ್ಚಿದೆ. ಈ ನಡುವೆ ಸಿಎಂ ಡಿಕೆ ಶಿವಕುಮಾರ್ ಅವರಿಂದಲೇ ಮೂರು ಡಿಸಿಎಂ ಬ್ರಹ್ಮಾಸ್ತ್ರ ಪ್ರಯೋಗವಾಗಿದ್ದು, ಕುತೂಹಲ ಹೆಚ್ಚಾಗಿದೆ. ಡಿಕೆಶಿ ಸಿಎಂ ಆಗಿ ಎರಡು ತಿಂಗಳು ಹತ್ತಿರ ಬಂತು. ಆದ್ರೆ ಸಂಪುಟ ವಿಸ್ತರಣೆಗೆ ಆಗಾಗ್ಗೆ ಅಡೆತಡೆ …
Read More »ಶಾಖೋತ್ಪನ್ನ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಗಣನೀಯ ಏರಿಕೆ: ಕೆ.ಜೆ.ಜಾರ್ಜ್
ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವ ಹಿನ್ನೆಲೆ ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಜುಲೈ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 84.34 ದಶಲಕ್ಷ ಯೂನಿಟ್ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ರಾಜ್ಯದಲ್ಲಿ ಜಲ ವಿದ್ಯುತ್ ಮತ್ತು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಸ್ಥಾವರಗಳನ್ನು ನಿರ್ವಹಿಸುತ್ತಿದ್ದು, ಜಲಾಶಗಳಲ್ಲಿ ನೀರಿನ ಪ್ರಮಾಣ …
Read More »ಮೋದಿ ಬಗ್ಗೆ ಮಾತಾಡೋ ಯೋಗ್ಯತೆ ಕಾಂಗ್ರೆಸ್‌ಗಿಲ್ಲ: ಆರ್.ಅಶೋಕ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತಾಡೋ ಯೋಗ್ಯತೆ ಕಾಂಗ್ರೆಸ್ ಅವರಿಗೆ ಇಲ್ಲ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು. ದೆಹಲಿಯಲ್ಲಿ ಪ್ರಧಾನಿ ಮೋದಿ ನಿವಾಸದ ಮುಂದೆ ರಾಹುಲ್ ಗಾಂಧಿ ಪ್ರತಿಭಟನೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೋದಿ ಬಗ್ಗೆ ಮಾತಾಡುವ ಯೋಗ್ಯತೆ ಕಾಂಗ್ರೆಸ್‌ಗೆ ಇಲ್ಲ. ಹುಬ್ಬಳ್ಳಿ-ಧಾರವಾಡ ಲಾಠಿ ಚಾರ್ಜ್ಗೆ ಉತ್ತರ ಕೊಡಿ. ಮೋದಿ ಮನೆ ಮುಂದೆ ಪ್ರತಿಭಟನೆ ಮಾಡಿರೋದು ಒಳ್ಳೆಯ ಸಂಪ್ರದಾಯ …
Read More »
Laxmi News 24×7