Breaking News

ಎಸ್‌ಐಆರ್‌ ವಿಚಾರಕ್ಕೆ ತಹಶೀಲ್ದಾರ್, ಪಿಡಿಒಗಳ ಮಧ್ಯೆ ಗಲಾಟೆ – ಏಕವಚನದಲ್ಲೇ ವಾಗ್ವಾದ

Spread the love

ಬೆಳಗಾವಿ: ಎಸ್‌ಐಆರ್‌  ವಿಚಾರಕ್ಕೆ ತಹಶೀಲ್ದಾರ್ ಹಾಗೂ ಪಿಡಿಒಗಳ  ಮಧ್ಯೆ ಗಲಾಟೆಯಾದ ಘಟನೆ ಖಾನಾಪುರದಲ್ಲಿ ನಡೆದಿದೆ.

ಜಿಲ್ಲಾಧಿಕಾರಿ ಸೂಚನೆಯಂತೆ ಖಾನಾಪುರ ತಹಶೀಲ್ದಾರ್ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಎಸ್‌ಐಆರ್ ವಿಚಾರ ಚರ್ಚಿಸುವಾಗ ಪಿಡಿಒ ತಹಶೀಲ್ದಾರ್ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ಪರಸ್ಪರ ಏಕವಚನದಲ್ಲೇ ಗಲಾಟೆ ಮಾಡಿಕೊಂಡಿದ್ದಾರೆ.

ತಕ್ಷಣವೇ ಸಭೆಯಿಂದ ಹೊರಬಂದ ಪಿಡಿಒಗಳು ತಹಶೀಲ್ದಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಹಶೀಲ್ದಾರ್ ದರ್ಪ ತೋರಿಸುತ್ತಿದ್ದಾರೆ ಎಂದು ಕೆಲ ಪಿಡಿಒಗಳು ಆರೋಪಿಸಿದ್ದಾರೆ.

ಈಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್, ಪಿಡಿಒಗಳು ಎಸ್‌ಐಆರ್‌ ಕರ್ತವ್ಯ ಹಾಗೂ ನಿಯಮಗಳನ್ನ ಅಚ್ಚುಕಟ್ಟಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಸಿಎಂ ಡಿಕೆಶಿ ನನ್ನನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡುವ ನಂಬಿಕೆ ಇದೆ: ಕೆ.ವೈ.ನಂಜೇಗೌಡ

Spread the loveಕೋಲಾರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಮಾತಿನಂತೆ ನನಗೆ ಕೆಎಂಎಫ್  ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಮಾಡಿಕೊಡುತ್ತಾರೆ ಎಂಬ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ