Breaking News

Monthly Archives: ಜೂನ್ 2026

ಬೇಟೆಯಾಡಿ ಅರಣ್ಯಾಧಿಕಾರಿಗಳನ್ನು ಮರಕ್ಕೆ ಕಟ್ಟಿ ವಿಕೃತಿ ಮೆರೆದ ಆರೋಪಿಗಳು ಅರೆಸ್ಟ್

ವನ್ಯಜೀವಿಗಳನ್ನು ಬೇಟೆಯಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ ಕಿಡಿಗೇಡಿಗಳನ್ನು ಹೆಡೆಮುರಿ ಕಟ್ಟಲು   ಹೋದ ಅರಣ್ಯಾಧಿಕಾರಿಗಳ ಮೇಲೆಯೇ ಬೇಟೆಗಾರರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳು ಕೆಲವು ದಿನಗಳ ಹಿಂದೆ ಕಾಡುಹಂದಿಯೊಂದನ್ನು ಬೇಟೆಯಾಡಿ, ಆ ದೃಶ್ಯಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಲರ್ಟ್ ಆದ ವಲಯ ಅರಣ್ಯಾಧಿಕಾರಿ …

Read More »

ಏರ್ ಶೋ ವೀಕ್ಷಿಸಿ ರೋಮಾಂಚನಗೊಂಡ ವಸತಿ ಶಾಲೆ ವಿದ್ಯಾರ್ಥಿಗಳು

ಬೆಳಗಾವಿ: ಇಲ್ಲಿನ ಸಾಂಬ್ರಾದ ಏರಮೆನ್ ಟ್ರೈನಿಂಗ್ ಸ್ಕೂಲ್ (ATS) ಆವರಣದಲ್ಲಿ ಭಾರತೀಯ ವಾಯುಸೇನೆಯ ವಿಶ್ವವಿಖ್ಯಾತ ಸಾರಂಗ್ ಹೆಲಿಕಾಪ್ಟರ್ ಡಿಸ್ಪ್ಲೇ ತಂಡದಿಂದ ಶುಕ್ರವಾರ ಆಯೋಜಿಸಿದ್ದ ಏರ್ ಶೋ ವನ್ನು ಜಿಲ್ಲೆಯ ವಿವಿಧ ವಸತಿ ಶಾಲೆಗಳ ಸರ್ಕಾರಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಿಸಿ ರೋಮಾಂಚನಗೊಂಡರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಶಾಲಾ-ಕಾಲೇಜಿನ ಮಕ್ಕಳು ಏರ್  ಶೋ ವನ್ನು ವೀಕ್ಷಿಸಲು ಅನುಕೂಲ ಕಲ್ಪಿಸಿಕೊಟ್ಟಿದ್ದರು. ಅದರಂತೆ ಕರ್ನಾಟಕ ವಸತಿ ಶಿಕ್ಷಣ …

Read More »

ಪ್ರಿಯತಮೆಯ ಸಾವಿನ ನೋವು ಪ್ರಿಯತಮನೂ ಆಕೆಯ ಜನ್ಮ ದಿನದಂದೇ ಆತ್ಮಹತ್ಯೆಗೆ ಶರಣು

ಯಮಕನಮರಡಿ: ತನ್ನ ಪ್ರಿಯತಮೆಯನ್ನು ಒತ್ತಾಯಪೂರ್ವಕವಾಗಿ ಬೇರೆಯವರಿಗೆ ವಿವಾಹ ಮಾಡಿಕೊಟ್ಟು, ನಂತರ ಹಿಂಸೆ ನೀಡಿ ಮರ್ಯಾದಾ ಹತ್ಯೆ ಮಾಡಿದ್ದರಿಂದ ಮನನೊಂದಿದ್ದ ಪ್ರಿಯತಮ ಆಕೆಯ ಜನ್ಮದಿನದಂದೇ ನೇಣಿಗೆ ಕೊರಳೊಡ್ಡಿದ್ದಾರೆ. ಕೃಷ್ಣಾ ಸಹದೇವ ಪಾಟೀಲ, ವಯಸ್ಸು 30 ವರ್ಷ, ಒಕ್ಕಲುತನ ಕೆಲಸ, ಸಾ-ನದಿಗುಡಕೇತರ, ತಾ|| ಹುಕ್ಕೇರಿ ಈತನು ತಾನು ತಮ್ಮೂರಿನ ಸತ್ತೆವ್ವಾ ಸಂತೋಷ ಹೆಳವಿ ಇವಳನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರಿಂದ ಪರಸ್ಪರು ಒಪ್ಪಿಕೊಂಡು ತಮ್ಮ ತಮ್ಮ ಮನೆಗಳನ್ನು ಬಿಟ್ಟು ಹೋಗಿದ್ದಾಗ ಪೊಲೀಸರು ಅವರಿಬ್ಬರನ್ನು ಪತ್ತೆ …

Read More »

ಕನಕಪುರದ ಕಂಚನಹಳ್ಳಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ – ನಿಟ್ಟುಸಿರು ಬಿಟ್ಟ ಜನ

ರಾಮನಗರ: ಹಲವು ದಿನಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ  ಹಿಡಿದಿರುವ ಘಟನೆ ಕನಕಪುರ ತಾಲೂಕಿನ ಕಂಚನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ  ಬಿದ್ದಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಹಲವು ದಿನಗಳಿಂದ ಗ್ರಾಮದ ಜನರ ನಿದ್ದೆಗೆಡಿಸಿದ್ದ ಈ ಚಿರತೆ ಸುತ್ತಮುತ್ತಲಿನ ಜನ ಸಾಕಿದ್ದ ಕೋಳಿ, ನಾಯಿ ಸೇರಿ ಜಾನುವಾರುಗಳ ಮೇಲೆ ದಾಳಿ ಮಾಡಿತ್ತು. ಚಿರತೆ ಕಾಟದಿಂದ ಜನ …

Read More »

ಬೆಂಗಳೂರು ನಗರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ: ಪರೋಕ್ಷವಾಗಿ ಖಾತೆ ಬಿಟ್ಟುಕೊಡಲ್ಲ ಎಂದ ಕೃಷ್ಣಬೈರೇಗೌಡ

ಬೆಂಗಳೂರು: ಸಚಿವ ಸಂಪುಟ ಪುನರ್‌ರಚನೆ ಬಳಿಕ ಬೆಂಗಳೂರು ಅಭಿವೃದ್ಧಿ ಖಾತೆ ಪಡೆದಿರುವ ಸಚಿವ ಕೃಷ್ಣ ಬೈರೇಗೌಡ  ಈ ಜವಾಬ್ದಾರಿ ಸುಲಭವಾಗಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನ ಜನರ ಜೀವನಮಟ್ಟ ಸುಧಾರಿಸುವುದೇ ತಮ್ಮ ಮೊದಲ ಗುರಿ ಎಂದು ತಿಳಿಸಿದ್ದಾರೆ. ಖಾತೆ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ತಾವು ಕಂದಾಯ ಇಲಾಖೆಯಲ್ಲಿ ಆರಂಭಿಸಿರುವ ಕೆಲಸಗಳನ್ನು ಪೂರ್ಣಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಆದರೆ ಪಕ್ಷದ ನಾಯಕತ್ವ ಬೆಂಗಳೂರು ಅಭಿವೃದ್ಧಿ ಖಾತೆ ನೀಡಿದೆ ಎಂದು ಹೇಳಿದರು. …

Read More »

ಡಿಕೆಶಿ ನೇತೃತ್ವದ ಸರ್ಕಾರ ಫಸ್ಟ್ ಬಾಲಿಗೆ ಸಿಕ್ಸ್ ಹೊಡೆದು ಹಿಟ್ ವಿಕೆಟ್ ಆಗಿದೆ: ಸಿ.ಟಿ ರವಿ ವ್ಯಂಗ್ಯ

ಚಿಕ್ಕಮಗಳೂರು: ಮೊದಲ ಸಂಪುಟ ಸಭೆಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಸಿಕ್ಸರ್‌ ಹೊಡೆದ್ರು ಎಂದು ಬಿಂಬಿಸಲಾಗಿತ್ತು. ಈಗ ಹಿಟ್‌ ವಿಕೆಟ್‌ ಆಗಿದೆ ಎಂದು ಎಂಎಲ್‌ಸಿ ಸಿ.ಟಿ ರವಿ  ವ್ಯಂಗ್ಯವಾಡಿದ್ದಾರೆ. ನಗರದ ಬಸವನಹಳ್ಳಿಯಲ್ಲಿರೋ ತಮ್ಮ ನಿವಾಸದಲ್ಲಿ ಅವರು ಮಾತನಾಡಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಸಂಪುಟದ ಮೊದಲ ವಿಕೆಟ್ ಪತನವಾಗಿದೆ.‌ ಸಂಪುಟ ದರ್ಜೆಯ ಸಚಿವ, ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾರೆಡ್ಡಿ  ರಾಜೀನಾಮೆ ನೀಡಿರೋದು ಆಂತರಿಕವಾಗಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಸ್ಪಷ್ಟಪಡಿಸಿದೆ. ಇದು ಭವಿಷ್ಯದ ಬೆಳವಣಿಗೆಗಳನ್ನ …

Read More »

ರಾಮಲಿಂಗಾರೆಡ್ಡಿ ನನ್ನ ಆಪ್ತ ಸ್ನೇಹಿತರು, ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ: ಡಿಕೆಶಿ

ಬೆಂಗಳೂರು: ರಾಮಲಿಂಗಾರೆಡ್ಡಿಯವರುನಮ್ಮ ಪಕ್ಷದ ಹಿರಿಯ ನಾಯಕರು. ನನ್ನ ಆಪ್ತ ಸ್ನೇಹಿತರು. ಅವರ ಅಸಮಾಧಾನವನ್ನು ಮಾತಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು ಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ರಾಮಲಿಂಗಾರೆಡ್ಡಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರವಾಗಿ, ಅವರು ನನ್ನ ಸಹೋದ್ಯೋಗಿ. ಪಕ್ಷದ ಹಿರಿಯ ನಾಯಕರು. ಅವರಿಗೆ ಹಳ್ಳಿಗಳಲ್ಲಿ ಕೆಲಸ ಮಾಡಲು ಆಗಲ್ಲ ಎಂದಿದ್ದಾರೆ. ಬೇರೆ ಖಾತೆ ನೀಡಬೇಕಂಬ ಆಪೇಕ್ಷೆ ಅವರಿಗಿದೆ. ಈ ಬಗ್ಗೆ ಅವರ …

Read More »

ಅಸಮಾಧಾನಗೊಂಡಿದ್ದೇನೆ, ಕೊಟ್ಟ ಮಾತು ತಪ್ಪಿದ್ದಕ್ಕೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ – ಡಿಕೆಶಿಗೆ ರಾಮಲಿಂಗಾರೆಡ್ಡಿ ಶಾಕ್‌

ಬೆಂಗಳೂರು: ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಂಡ ಕೇವಲ ಎರಡೇ ದಿನಕ್ಕೆ ಸರ್ಕಾರಕ್ಕೆ ಬಂಡಾಯದ ಬಿಸಿ ತಟ್ಟಿದೆ. ತಮಗೆ ಇಷ್ಟವಿಲ್ಲದ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ  ಅವರು ಕೋರಮಂಗಲದ ತಮ್ಮ ಕಚೇರಿಯಲ್ಲಿ ಕಾರ್ಯಕರ್ತರ ಮುಂದುಗಡೆ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ಯಾರ ಮನವೊಲಿಕೆಗೂ ಬಗ್ಗದ ರೆಡ್ಡಿ, “ನನ್ನ ನಿರ್ಧಾರ ಅಚಲ, ಯಾರನ್ನೂ ಭೇಟಿಯಾಗುವ ಪ್ರಶ್ನೆಯೇ ಇಲ್ಲ” ಎಂದು ಹಠ ಹಿಡಿದಿರುವುದು ಡಿಕೆಶಿ …

Read More »

ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಖಾದರ್‌ ಸರ್ಪ್ರೈಸ್ ವಿಸಿಟ್ – ಆಸ್ಪತ್ರೆ ಸಿಬ್ಬಂದಿ ಮೇಲೆ ಗರಂ

ಬೆಂಗಳೂರು: ಖಾತೆ ಹಂಚಿಕೆಯಾದ ಒಂದೇ ಗಂಟೆಯಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್‌  ಜಯನಗರದ ಆಸ್ಪತ್ರೆಗೆ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ. ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯೇ ಎಂದು ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಪಾಳಯದಲ್ಲಿ ಸಿಬ್ಬಂದಿ ಕೊರತೆ ಇರುವುದು ಈ ವೇಳೆ ಗಮನಕ್ಕೆ ಬಂದಿದೆ. ಇನ್ನೂ ಇರುವ ಸಿಬ್ಬಂದಿ ಪೈಕಿ ಕೆಲವರು ಕೆಲಸಕ್ಕೆ ಗೈರಾಗಿದ್ದರು. ಇದರಿಂದ ಸಿಬ್ಬಂದಿ ಮೇಲೆ ಸಚಿವರು ಗರಂ ಆಗಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತಾಡಿದ …

Read More »

ವಿವಿ ಸಹಾಯಕ ಪ್ರಾಧ್ಯಾಪಕಿಯ ನಿಗೂಢ ಹತ್ಯೆ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ  ಸಹಾಯಕ ಪ್ರಾಧ್ಯಾಪಕಿಯೊಬ್ಬರ ನಿಗೂಢ ಹತ್ಯೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಶಿವಾಜಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ದೇವಸ್ಮಿತಾ ಪೌಲ್‌  ಕೊಲೆಯಾದ ದುರ್ದೈವಿ. ಇವರು ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನ  ಸತ್ಯಂ ಅಪಾರ್ಟ್ಮೆಂಟ್‌ನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇವರ ಪತಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಗುರುವಾರ ಮಧ್ಯಾಹ್ನ 2:25 ರ ಸುಮಾರಿಗೆ ದೇವಸ್ಮಿತಾ ಪೌಲ್‌ ಸಹೋದರಿ ದೇವಾರತಿ ನ್ಯೂ ಅಶೋಕ್ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆಯ …

Read More »