Breaking News

ಪ್ರಿಯತಮೆಯ ಸಾವಿನ ನೋವು ಪ್ರಿಯತಮನೂ ಆಕೆಯ ಜನ್ಮ ದಿನದಂದೇ ಆತ್ಮಹತ್ಯೆಗೆ ಶರಣು

Spread the love

ಯಮಕನಮರಡಿ: ತನ್ನ ಪ್ರಿಯತಮೆಯನ್ನು ಒತ್ತಾಯಪೂರ್ವಕವಾಗಿ ಬೇರೆಯವರಿಗೆ ವಿವಾಹ ಮಾಡಿಕೊಟ್ಟು, ನಂತರ ಹಿಂಸೆ ನೀಡಿ ಮರ್ಯಾದಾ ಹತ್ಯೆ ಮಾಡಿದ್ದರಿಂದ ಮನನೊಂದಿದ್ದ ಪ್ರಿಯತಮ ಆಕೆಯ ಜನ್ಮದಿನದಂದೇ ನೇಣಿಗೆ ಕೊರಳೊಡ್ಡಿದ್ದಾರೆ.

ಕೃಷ್ಣಾ ಸಹದೇವ ಪಾಟೀಲ, ವಯಸ್ಸು 30 ವರ್ಷ, ಒಕ್ಕಲುತನ ಕೆಲಸ, ಸಾ-ನದಿಗುಡಕೇತರ, ತಾ|| ಹುಕ್ಕೇರಿ ಈತನು ತಾನು ತಮ್ಮೂರಿನ ಸತ್ತೆವ್ವಾ ಸಂತೋಷ ಹೆಳವಿ ಇವಳನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದರಿಂದ ಪರಸ್ಪರು ಒಪ್ಪಿಕೊಂಡು ತಮ್ಮ ತಮ್ಮ ಮನೆಗಳನ್ನು ಬಿಟ್ಟು ಹೋಗಿದ್ದಾಗ ಪೊಲೀಸರು ಅವರಿಬ್ಬರನ್ನು ಪತ್ತೆ ಹಚ್ಚಿ ಮನೆಗೆ ಕಳುಹಿಸಿಕೊಟ್ಟಿದ್ದರು.

ನಂತರ ಸತ್ತೆವ್ವಾ ಹೆಳವಿ ಇವರ ತವರು ಮನೆಯವರು ಸತ್ತೆವ್ವಾಳಿಗೆ ಮಹಾರಾಷ್ಟ್ರದ ಅರಗಗೆ ಕರೆದುಕೊಂಡು ಹೋಗಿ ಕೃಷ್ಣಾ ಪಾಟೀಲ ಇವನನ್ನು ಬಿಟ್ಟು ಮತ್ತೊಂದು ಬೇರೆ ಮದುವೆಯಾಗು ಎಂದು ಒತ್ತಾಯ ಮಾಡಿದ್ದರಿಂದ ಸತ್ತೆವ್ವಾ ತಾನು ಪ್ರೀತಿಸುತ್ತಿದ್ದ ಕೃಷ್ಣಾ ಇವನನ್ನು ಬಿಟ್ಟು ಬೇರೆ ಮದುವೆಯಾಗುವುದಾದರೆ ಸಾಯುತ್ತೇನೆ ಹೊರತಾಗಿ ಬೇರೆ ಮದುವೆಯಾಗುವುದಿಲ್ಲಾ ಅಂತಾ ಹಠ ಹಿಡಿದಿದ್ದರಿಂದಾಗಿ ಸತ್ತೆವ್ವಳ ತವರು ಮನೆಯವರು ಸತ್ತೆವ್ವಾಳನ್ನು ಕೊಲೆ ಮಾಡಿದ್ದರು.

ಸತ್ತೆವ್ವಾ ಇವಳು ಎಲ್ಲಿಯೂ ಕಾಣಿಸದೇ ಇರುವುದರಿಂದಾಗಿ ಗಾಬರಿಗೊಂಡಿದ್ದ ಕೃಷ್ಣಾ ಸಹದೇವ ಪಾಟೀಲ ಇವರು ಸಂಶಯದಿಂದ ಸತ್ತೆವ್ವಾ ಕೊಲೆಯಾಗಿರುವ ಬಗ್ಗೆ ದೂರನ್ನು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನೀಡಿದ್ದರು.

ಯಮಕನಮರಡಿ ಪೊಲೀಸರು ತನಿಖೆ ಕೈಕೊಂಡು ಸತ್ತೆವ್ವಾಳನ್ನು ಕೊಲೆ ಮಾಡಿದ್ದ 3 ಜನ ಆರೋಪಿತರನ್ನು ಬಂಧಿಸಿ ಹದ್ದಿಯ ಆಧಾರದ ಮೇಲೆ ಪ್ರಕರಣವನ್ನು ಮಹಾರಾಷ್ಟ್ರದ ಮಿರಜ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು, ಈ ಘಟನೆ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದಿತ್ತು.

ನಂತರ, ನಿನ್ನೆ ದಿ: 04-06-2026 ರಂದು ಮೃತ ಸತ್ತೆವ್ವಾ ಹೆಳವಿ ಇವಳ ಜನ್ಮದಿನ (ಹುಟ್ಟುಹಬ್ಬ) ಇತ್ತು. ಅದೇ ದಿನ ಕೃಷ್ಣಾ ನದಿಗುಕೇತ್ರದಲ್ಲಿರುವ ತಮ್ಮ ಮನೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಕೈಕೊಂಡಿದ್ದಾರೆ. ಇನಸ್ಪೆಕ್ಟರ್ ಜಾವೀದ್ ಮುಶಾಪುರೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ