Breaking News

Monthly Archives: ಜೂನ್ 2026

ಪೌರ ಕಾರ್ಮಿಕರ ಎಲ್ಲಾ ಬೇಡಿಕೆಗಳ ಪರವಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ: ಯತೀಂದ್ರ

ಬೆಂಗಳೂರು: ಪೌರ ಕಾರ್ಮಿಕರ ನೇರ ಪಾವತಿ ವ್ಯವಸ್ಥೆ ಅಡಿ ನೇಮಕಾತಿ, ಪೌರ ಕಾರ್ಮಿಕರ ಖಾಯಂಗೊಳಿಸುವಿಕೆ, ಕಸ ಗುಡಿಸುವವರು, ಲೋಡ್ ಮಾಡುವವರು, ಕಸದ ವಾಹನಗಳ ಡ್ರೈವರ್‌ಗಳನ್ನು ಪೌರ ಕಾರ್ಮಿಕರನ್ನಾಗಿ ಪರಿಗಣಿಸುವುದು ಸೇರಿದಂತೆ ಪೌರ ಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಪೂರಕವಾದ ಕ್ರಮಗಳನ್ನು, ಆದ್ಯತೆಯ ಮೇಲೆ ಕೈಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ  ಹೇಳಿದರು. ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ …

Read More »

ಮೋದಿಯವರಿಂದ ಭಾರತದ ಅಭಿವೃದ್ಧಿಯ ಹಾದಿ ತೆರೆದುಕೊಂಡಿದೆ: ಸೋಮಣ್ಣ

ತುಮಕೂರು: ನರೇಂದ್ರ ಮೋದಿ  ಅವರು ದೇಶದ ಪ್ರಧಾನಿ ಆದ ನಂತರ ಅಭಿವೃದ್ಧಿಯ ಹಾದಿ ತೆರೆದುಕೊಂಡಿತು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 12 ವರ್ಷ ಪೂರ್ಣಗೊಳಿಸಿದ್ದರಿಂದ, ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಸಾಧನೆ ಪಟ್ಟಿ ಓದಿ, ಮಾತನಾಡಿದರು. ಮೋದಿ ಅವರು ದೇಶದ ಪ್ರಧಾನಿ ಆಗುವುದಕ್ಕೂ ಮುನ್ನ ‘ಗರೀಬಿ ಹಠಾವೋ’ ಹೆಸರು ಹೇಳಿಕೊಂಡು ಜನರನ್ನು …

Read More »

ವಚನಾನಂದ ಶ್ರೀಗೆ ಜಾಮೀನು ನೀಡಿದ ರೀತಿ ಆಘಾತಕಾರಿ: ಕೆಳ ನ್ಯಾಯಾಲಯದ ವಿರುದ್ಧ ಹೈಕೋರ್ಟ್ ಗರಂ!

ಬೆಂಗಳೂರು: ಮಕ್ಕಳ ದುರ್ಬಳಕೆ ಹಾಗೂ ದೌರ್ಜನ್ಯ ಎಸಗಿದ ಗಂಭೀರ ಆರೋಪ ಎದುರಿಸುತ್ತಿರುವ ದಾವಣಗೆರೆ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳಿಗೆ ಕೆಳ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಧಾನದ ಕುರಿತು ಹೈಕೋರ್ಟ್ ತೀವ್ರ ಆಘಾತ ವ್ಯಕ್ತಪಡಿಸಿದೆ. ದೂರು ದಾಖಲಾಗುವ ಮುನ್ನವೇ ಜಾಮೀನು ನೀಡಿರುವ ರೀತಿ ಆಘಾತಕಾರಿಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವಚನಾನಂದ ಶ್ರೀಗಳಿಗೆ ದಾವಣಗೆರೆ ಜಿಲ್ಲಾ ನ್ಯಾಯಾಲಯ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕನ ತಾಯಿ …

Read More »

ಶಾಸಕರಿಗೆ ಆಮಿಷದ ಕರೆ, ಪ್ರತಿಯೊಬ್ಬರ ಚಲನವಲನ ಗಮನಿಸುತ್ತಿದ್ದೇವೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತ ಹಾಗೂ ಆಮಿಷದ ರಾಜಕಾರಣದ ಸದ್ದು ಮತ್ತೆ ಜೋರಾಗಿದೆ. ಬಿಡದಿಯ ವಂಡರ್‌ಲಾ ರೆಸಾರ್ಟ್‌ನಲ್ಲಿ  ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮಹತ್ವದ ಸಭೆಯಲ್ಲಿ, ಪಕ್ಷದ ಕೆಲವು ಶಾಸಕರಿಗೆ ಅನ್ಯ ಪಕ್ಷಗಳಿಂದ ಆಮಿಷದ ಕರೆಗಳು ಬರುತ್ತಿರುವ ಸ್ಪೋಟಕ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಬಹಿರಂಗಪಡಿಸಿದ್ದಾರೆ. ಪ್ರಮುಖವಾಗಿ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೂ ಇಂತಹದ್ದೇ ಕರೆ ಬಂದಿರುವ ಅಂಶವನ್ನು ಸಿಎಂ ಸಭೆಯ ಗಮನಕ್ಕೆ ತಂದಿದ್ದಾರೆ ಎಂದು …

Read More »

ಮುಂಗಾರು ಕೊರತೆ ಎಫೆಕ್ಟ್: ಹಾರಂಗಿ ಜಲಾಶಯ ಒಳಹರಿವು ತೀವ್ರ ಕುಸಿತ

ಮಡಿಕೇರಿ : ಮುಂಗಾರು ಮಳೆ (Monsoon) ಕೊರತೆಯಿಂದ ಕೊಡಗು ಜಿಲ್ಲೆಯ ಏಕೈಕ ಜಲಾಶಯವಾದ ಹಾರಂಗಿ ಜಲಾಶಯದ ಒಳಹರಿವು ತೀವ್ರವಾಗಿ ಕುಸಿದಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಮಳೆಗಾಲ ಶುರುವಾಗಿದ್ದರೂ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಸೋಮವಾರದಿಂದ ಉರಿ ಬಿಸಿಲು ಹೆಚ್ಚಾಗಿದ್ದು, ಮಳೆಗಾಲದಲ್ಲಿಯೇ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮ ಹಾರಂಗಿ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಪ್ರಸ್ತುತ ಹಾರಂಗಿ ಜಲಾಶಯದ ಒಳಹರಿವು 285 ಕ್ಯೂಸೆಕ್ ಮಾತ್ರ. ಜಲಾಶಯದಿಂದ 180 …

Read More »

ಅಪ್ರಾಪ್ತ ಅಕ್ಕ-ತಂಗಿ ಮೇಲೆ ಅತ್ಯಾಚಾರ – ಪೋಕ್ಸೊ ಪ್ರಕರಣ ದಾಖಲು, ಕಿರಾತಕ ಅರೆಸ್ಟ್‌

ರಾಯಚೂರು: ಜಿಲ್ಲೆಯ ಸಿಂಧನೂರು ನಗರ ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತ ಅಕ್ಕ ತಂಗಿಯರ ಮೇಲೆ ಕಿರಾತಕನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಎರಡು ಮತ್ತು 3ನೇ ತರಗತಿ ಓದುತ್ತಿದ್ದ 8 ಹಾಗೂ 9 ವರ್ಷದ ಬಾಲಕಿಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಬಾಲಕಿಯರ ಕುಟುಂಬಕ್ಕೆ ಪರಿಚಯಸ್ಥ ವ್ಯಕ್ತಿಯಿಂದಲೇ ಅತ್ಯಾಚಾರ ನಡೆದಿದೆ. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ 30 ವರ್ಷದ ಬಾಬಾನನ್ನ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯರ ಪೋಷಕರು ಕೂಲಿ ಕೆಲಸಕ್ಕೆ …

Read More »

66 ರೌಡಿಗಳಿಗೆ ಮುಕ್ತಿ – ಮೇಲ್ಮನವಿ ಸಲ್ಲಿಸುತ್ತೇವೆ ಎಂದ ಕಮಿಷನರ್

ಬೆಂಗಳೂರು: ಪೊಲೀಸ್ ಇಲಾಖೆ ದಾಖಲೆ ನಿರ್ವಹಣೆಯ ಲೋಪದಿಂದ ರೌಡಿಪಟ್ಟಿಯಿಂದ 66 ರೌಡಿಶೀಟರ್‌ಗಳನ್ನು ಕೈಬಿಟ್ಟಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಈ ಕುರಿತು ನಗರ ಪೊಲೀಸ್ ಆಯುಕ್ತ  ಸೀಮಂತ್ ಕುಮಾರ್ ಸಿಂಗ್  ಪ್ರತಿಕ್ರಿಯಿಸಿದ್ದಾರೆ. 7 ರೌಡಿಶೀಟರ್‌ಗಳನ್ನು ಯಾವ ಕಾರಣಕ್ಕೆ ಕೈಬಿಡಲಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆಯಿಂದ ಯಾವುದೇ ಕರ್ತವ್ಯಲೋಪ ಆಗಿದೆಯೇ ಎಂಬುದನ್ನೂ ತನಿಖೆ ಮಾಡಲಾಗುತ್ತದೆ. ರೌಡಿಶೀಟರ್‌ಗಳ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ …

Read More »

ಬಾಲಕಿ ವೆನ್ನಿಲಾ ಕೊಲೆ ಕೇಸ್‌ – ಪ್ರಿಯಾಂಕಾಳ ಸುಳ್ಳುಪತ್ತೆ ಪರೀಕ್ಷೆಗೆ ಸಿದ್ಧತೆ

ಬೆಂಗಳೂರು: ವೆನ್ನಿಲಾ ಕೊಲೆ ಪ್ರಕರಣದಲ್ಲಿ ತಾಯಿ ಪ್ರಿಯಾಂಕಾ ವಿರುದ್ಧ ಅನುಮಾನಗಳು ಮುಂದುವರಿದಿವೆ. ಪ್ರಕರಣದ ಸತ್ಯ ಬಯಲಿಗೆಳೆಯಲು ಪಾಲಿಗ್ರಾಫ್ ಟೆಸ್ಟ್‌ ಗೆ (ಸುಳ್ಳುಪತ್ತೆ ಪರೀಕ್ಷೆ) ಪೊಲೀಸರು ಸಿದ್ಧತೆ ನಡೆಸಿದ್ದು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕಾಡುಗೋಡಿ ಬಾಲಕಿ ವೆನ್ನಿಲಾ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಪ್ರಕರಣದ ಇಬ್ಬರು ಆರೋಪಿಗಳಾದ ಮೋಹನ್ ಮತ್ತು ಪ್ರಿಯಾಂಕಾರನ್ನು ಬಾಣಸವಾಡಿ ಎಸಿಪಿ ಅನುಷಾ ನೇತೃತ್ವದ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ …

Read More »

ಪ್ರಿಯಾಂಕ್ ಖರ್ಗೆ RSS ಬಗ್ಗೆ ತಿಳಿದುಕೊಳ್ಳಬೇಕಾದ್ರೆ ಶಾಖೆಗೆ ಬರಲಿ: ಸಿ.ಟಿ ರವಿ

ಬೆಂಗಳೂರು: ಪ್ರಿಯಾಂಕ್ ಖರ್ಗೆ  ಅವರಿಗೆ ಆರ್‌ಎಸ್‌ಎಸ್  ಬಗ್ಗೆ ತಿಳಿದುಕೊಳ್ಳಬೇಕಾದರೆ ಸಂಘದ ಶಾಖೆಗೆ ಬರಲಿ ಎಂದು ಬಿಜೆಪಿ ನಾಯಕ ಸಿಟಿ ರವಿ  ಪ್ರಿಯಾಂಕ್ ಖರ್ಗೆ ಅವರಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ಮೋಹನ್ ಭಾಗವತ್‌ರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿ ಪತ್ರ ಬರೆದಿದ್ದರೆ ಸರ್ಕಾರದಲ್ಲೇ ಅದಕ್ಕೆ ದಾಖಲೆ ಇವೆ. ಆರ್‌ಎಸ್‌ಎಸ್ ಅನ್ನು 3 ಬಾರಿ ನಿಷೇಧಕ್ಕೆ ಹಾಕಲಾಗಿತ್ತು. 2 ಬಾರಿ …

Read More »

ಬಿಡದಿ ಟೌನ್ ಶಿಪ್‌ಗೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ ದಾಖಲಾತಿ ಬಹಿರಂಗ ಮಾಡಿ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಬಿಡದಿ ಟೌನ್ ಶಿಪ್‌ಗೆ  ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ ದಾಖಲಾತಿಯನ್ನ ಬಹಿರಂಗ ಪಡಿಸಲಿ ಎಂದು ಸಿಎಂ ಡಿಕೆಶಿವಕುಮಾರ್‌ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲ್ ಹಾಕಿದ್ದಾರೆ. ಬಿಡದಿ ಟೌನ್ ಶಿಪ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಡದಿ ಟೌನ್ ಶಿಪ್ ಗೆ ನಾವು ಮೊದಲಿಂದ ವಿರೋಧ ಮಾಡ್ತಾ ಇದ್ದೇವೆ. ನಮ್ಮದು ಕೆಲವು ಕೆಲಸ ಇತ್ತು. ಅದಕ್ಕೆ ತಡ ಆಯ್ತು. ನಾನು ಮತ್ತು ಅಶೋಕ್ …

Read More »