Breaking News

ಬಿಡದಿ ಟೌನ್ ಶಿಪ್‌ಗೆ ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ ದಾಖಲಾತಿ ಬಹಿರಂಗ ಮಾಡಿ- ಛಲವಾದಿ ನಾರಾಯಣಸ್ವಾಮಿ

Spread the love

ಬೆಂಗಳೂರು : ಬಿಡದಿ ಟೌನ್ ಶಿಪ್‌ಗೆ  ಪ್ರಧಾನಿ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆ ದಾಖಲಾತಿಯನ್ನ ಬಹಿರಂಗ ಪಡಿಸಲಿ ಎಂದು ಸಿಎಂ ಡಿಕೆಶಿವಕುಮಾರ್‌ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲ್ ಹಾಕಿದ್ದಾರೆ.

ಬಿಡದಿ ಟೌನ್ ಶಿಪ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಡದಿ ಟೌನ್ ಶಿಪ್ ಗೆ ನಾವು ಮೊದಲಿಂದ ವಿರೋಧ ಮಾಡ್ತಾ ಇದ್ದೇವೆ. ನಮ್ಮದು ಕೆಲವು ಕೆಲಸ ಇತ್ತು. ಅದಕ್ಕೆ ತಡ ಆಯ್ತು. ನಾನು ಮತ್ತು ಅಶೋಕ್ ಮಾತುಕತೆ ‌ಮಾಡಿದ್ದೇವೆ‌. ಅಶೋಕ್ ಅವರ ಆರೋಗ್ಯ ಸರಿ ಇರಲಿಲ್ಲ. ಜೆಡಿಎಸ್ ಹೋರಾಟ ಮಾಡ್ತಿದೆ. ಅದಕ್ಕೆ ನಾವು ಹೋಗ್ತೀವಿ. ನಮ್ಮ ಬೆಂಬಲವೂ ಇದೆ‌ ನಾವು ಹೋಗ್ತೀವಿ ಎಂದರು.

ಪ್ರಧಾನಿ ಮೋದಿ ಯೋಜನೆ ‌ಒಪ್ಪಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ‌ ಮೋದಿ ಅವರು ಏನ್ ಹೇಳಿದ್ರು ಅನ್ನೋದು ಡಿಕೆಶಿ ಬಹಿರಂಗ ಪಡಿಸಲಿ. ನೀವು ಆಪರೇಷನ್ ಸಿಂಧೂರ್‌ಗೂ ಸಾಕ್ಷಿ ಕೇಳಿದ್ರಿ. ಅದೇ ರೀತಿ ಮೋದಿ ಕೊಟ್ಟ ಗ್ರೀನ್ ಸಿಗ್ನಲ್ ಹೇಗಿತ್ತು? ಅದನ್ನ ಬಹಿರಂಗ ಮಾಡಿ. ಯಾವ ರೀತಿ ಮೋದಿ ಅವರು ಗ್ರೀನ್ ಸಿಗ್ನಲ್ ಕೊಟ್ಟರು ಡಿಕೆಶಿ ಬಹಿರಂಗ ಮಾಡಲಿ ಅಂತ ಸವಾಲ್ ಹಾಕಿದರು.

ಬಿಡದಿ ಹೋರಾಟ ವಿಚಾರದ ಕುರಿತು ನಾನು, ಅಶೋಕ್, ವಿಜಯೇಂದ್ರ ಚರ್ಚೆ ಮಾಡ್ತೀವಿ. ಜೆಡಿಎಸ್, ಬಿಜೆಪಿ ಅಂತ ಏನಿಲ್ಲ. ಇದು ಜನರ ವಿಚಾರ. ನಾವು ಅವರು ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಗ್ಯಾರಂಟಿ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸಿ, ಚುನಾವಣೆಗೆ ಓಟ್ ಬೇಕಾದಾಗ ಗೃಹ ಲಕ್ಷ್ಮಿ, ಸೌಭಾಗ್ಯ ಲಕ್ಷ ಆಗಿದ್ದರು. ಈಗ ದುಡ್ಡು ಖಾಲಿ ಆಗ್ತಾ ದರಿದ್ರಾ ಲಕ್ಷ್ಮಿಯರು ಆಗಿದ್ದಾರೆ. ಹೆಣ್ಣು ಮಕ್ಕಳಿಗೆ ಎಷ್ಟು ಅಪಮಾನ ಮಾಡ್ತಾ ಇದ್ದಾರೆ. ನಿಮ್ಮ ಸಹವಾಸ ಬೇಡ ಅಂತಿದ್ದಾರೆ ಹೆಣ್ಣುಮಕ್ಕಳು. ಹಣವನ್ನು ನಿಮ್ಮ ಎದೆಯ ಮೇಲೆ ಹಾಕಿಕೊಂಡು ಹೋಗಿ ಅಂತ ಆಕ್ರೋಶ ಹೊರ ಹಾಕ್ತಾ ಇದ್ದಾರೆ. ಮಹಿಳೆಯರನ್ನ‌ ಬಿಕ್ಷುಕರಾಗಿ ಮಾಡಿದ್ದಾರೆ ಅಂತ ಕಿಡಿಕಾರಿದರು.

ಹೆಣ್ಣು ಮಕ್ಕಳಿಗೆ ಇಂತಹ ಅಪಮಾನ ಬೇಕಿತ್ತಾ? 2 ಸಾವಿರಕ್ಕೆ ಭಿಕ್ಷುಕರಾಗಿ, ಹರಾಜು ಹಾಕ್ತಾ ಇದ್ದೀರಾ. ಅವರ ಮನೆತನಗಳನ್ನ ಹರಾಜು ಇಟ್ಟಿದ್ದೀರಾ ಈ ಸರ್ಕಾರದವರು. ಹಣ ಕೊಡಿ ಅಂತ ಯಾರು ಕೇಳಿರಲಿಲ್ಲ. ನೀವೆ ಕೊಟ್ಟು ನೀವೇ ಅಪಮಾನ ಮಾಡ್ತಾ ಇದ್ದೀರಾ. ನಿಮಗೆ‌ ನಿಜಕ್ಕೂ ಹೆಣ್ಣು ಮಕ್ಕಳು ಓಟ್ ಹಾಕ್ತಾರಾ? ನೀವೇ ಮಹಿಳೆಯರಿಗೆ ಅಪಮಾನ ಮಾಡೋದು ಸರಿಯನಾ ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ದ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ