Breaking News

ಮೋದಿಯವರಿಂದ ಭಾರತದ ಅಭಿವೃದ್ಧಿಯ ಹಾದಿ ತೆರೆದುಕೊಂಡಿದೆ: ಸೋಮಣ್ಣ

Spread the love

ತುಮಕೂರು: ನರೇಂದ್ರ ಮೋದಿ  ಅವರು ದೇಶದ ಪ್ರಧಾನಿ ಆದ ನಂತರ ಅಭಿವೃದ್ಧಿಯ ಹಾದಿ ತೆರೆದುಕೊಂಡಿತು ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 12 ವರ್ಷ ಪೂರ್ಣಗೊಳಿಸಿದ್ದರಿಂದ, ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಸಾಧನೆ ಪಟ್ಟಿ ಓದಿ, ಮಾತನಾಡಿದರು.

ಮೋದಿ ಅವರು ದೇಶದ ಪ್ರಧಾನಿ ಆಗುವುದಕ್ಕೂ ಮುನ್ನ ‘ಗರೀಬಿ ಹಠಾವೋ’ ಹೆಸರು ಹೇಳಿಕೊಂಡು ಜನರನ್ನು ಬಡತನದಲ್ಲೇ ಇಟ್ಟಿದ್ದ ಕಾಂಗ್ರೆಸ್ ನಾಯಕರ ಬಗ್ಗೆ ದೇಶದ 100 ಕೋಟಿ ಜನರಿಗೆ ಹತಾಶೆ ಮೂಡಿತ್ತು. 2014ರಲ್ಲಿ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಸಾಮಾಜಿಕ ಪರಿವರ್ತನೆಯ ಹಾದಿ ಕಾಣತೊಡಗಿತು. ಇಲ್ಲಿಯವರೆಗೆ ದೇಶದ 25 ಕೋಟಿಗೂ ಅಧಿಕ ಜನರನ್ನು ಮೋದಿ ಬಡತನದಿಂದ ಮೇಲಕ್ಕೆತ್ತಿದ್ದಾರೆ ಎಂದು ಹೇಳಿದರು.

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿ 60 ಕೋಟಿಗೂ ಅಧಿಕ ಜನರು 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಪಡೆದಿದ್ದಾರೆ. ಜಲಜೀವನ್ ಯೋಜನೆ ಮೂಲಕ 16 ಕೋಟಿ ಮನೆಗಳಿಗೆ ನೀರಿನ ಸಂಪರ್ಕ, 12 ಕೋಟಿ ಶೌಚಾಲಯಗಳ ರ್ಬ್ಯಾಣ, ಪಿ.ಎಂ ಕಿಸಾನ್ ಯೋಜನೆ ಅಡಿ ರೈತರ ಖಾತೆಗಳಿಗೆ 4.3 ಲಕ್ಷ ಕೋಟಿ ರೂ. ಅನುದಾನ, ಆಹಾರ ಉತ್ಪಾದನೆಯಲ್ಲಿ ಶೇ.71ರಷ್ಟು ಏರಿಕೆ, ಮಹಿಳಾ ಸಬಲೀಕರಣಕ್ಕಾಗಿ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ ಎಂದು ಬಣ್ಣಿಸಿದರು.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ