Breaking News

Monthly Archives: ಏಪ್ರಿಲ್ 2026

ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ

ಕ್ಷೇತ್ರ ಮರುವಿಂಗಡನೆಯನ್ನು ಹೊಸ ಜನಗಣತಿಯಾದ ನಂತರ ಮಾಡುವುದು ಸೂಕ್ತ : ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ ಮೈಸೂರು, ಏಪ್ರಿಲ್ 20: ಕ್ಷೇತ್ರ ಮರುವಿಂಗಡನೆಯನ್ನು ಹೊಸ ಜನಗಣತಿಯಾದ ನಂತರ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ಎರಡು ದಿನಗಳ ಪ್ರವಾಸ ನಿಮಿತ್ತ ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ನಾವು ಅದಕ್ಕಾಗಿಯೇ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧ ಮಾಡಿದೆವು. ನಾವು ಎಂದಿಗೂ ಮಹಿಳಾ ಮೀಸಲಾತಿಯ ಪರವಾಗಿಯೇ ಇದ್ದೇವೆ ಎಂದರು. …

Read More »

ಬಸವ ಜನ್ಮಭೂಮಿಯಲ್ಲಿ ಸಂಭ್ರಮದ ಬಸವ ಜಯಂತಿ; ಗೌರವ ಸಲ್ಲಿಸಿಸ ಗಣ್ಯರು

ಬಸವ ಜಯಂತಿ ನಿಮಿತ್ತ ಈ ದಿನ ವಿಜಯಪುರ ನಗರದಲ್ಲಿನ ಬಸವಣ್ಣನವರ ಪುತ್ಥಳಿಗೆ ವಿವಿಧ ಗಣ್ಯರು ಭಕ್ತಿಯಿಂದ ಮಾಲಾರ್ಪಣೆ ಮಾಡಿದರು. ಆ ಮೇರು ಪುರುಷನ ಆದರ್ಶಗಳು ಹಾಗೂ ವಚನ ಸಂದೇಶಗಳನ್ನು ಸ್ಮರಿಸುತ್ತಾ ನಮಸ್ಕರಿಸಿದರು. ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದರು. ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಬಸವ ಜ್ಯೋತಿಯನ್ನು ಹಿಡಿದು, ವಿಜಯಪುರ …

Read More »

ಗ್ರಾಮ ದೇವಿಯ ಜಾತ್ರೆಯಲ್ಲಿ ಭಂಡಾರಮಯವಾದ ಕಲ್ಲೂರು ಗ್ರಾಮ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಹಲವು ವರ್ಷಗಳ ಬಳಿಕ ಗ್ರಾಮದೇವಿ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ಜರುಗುತ್ತಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಪ್ರತಿದಿನವೂ ದೇವಿಗೆ ವಿಶೇಷ ಪೂಜೆ, ಪ್ರಾರ್ಥನೆ, ಭಜನೆ, ಅಭಿಷೇಕ ಹಾಗೂ ಕುಂಭೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ದೇವಿಯ ದರ್ಶನಕ್ಕಾಗಿ ಅಕ್ಕಪಕ್ಕದ ಗ್ರಾಮಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದು, ಅವರಿಗಾಗಿ ಪ್ರತಿದಿನ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ನಿನ್ನೆ …

Read More »

ಕೌಟಂಬಿಕ ಕಲಹಕ್ಕೆ ಪತ್ನಿ ಆತ್ಮಹತ್ಯೆ, ಪತಿ‌ ಅರೇಸ್ಟ್

ಬೆಳಗಾವಿಯ ಜ್ಯೋತಿ ನಗರದಲ್ಲಿ ಘಟನೆ ಶ್ರೀನಿಧಿ ಸಂತೋಷ ನಾವಿ (28) ಮೃತ ವಿವಾಹಿತೆ. ಕೌಟುಂಬಿಕ ಕಲಹ, ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣು. ಮನೆ ಮೊದಲ ಮಹಡಿಯಲ್ಲಿ ಕಿಟಿಕಿ ಗ್ರೀಲಗೆ ವೆಲ್ ಬೀಗಿದುಕೊಂಡು ಆತ್ಮಹತ್ಯೆ 2021ರಲ್ಲಿ ಶ್ರೀನಿಧಿ ‌ಮದುವೆ ಸಂತೋಷ ಆಗಿತ್ತು ಈ‌ ದಂಪತಿಗೆ ಇಬ್ಬರು ಮಕ್ಕಳು, ಗಂಡ ಹೆಂಡ್ತಿ ಮಧ್ಯೆ ಆಗಾಗ ಗಲಾಟೆ. ತವರು ಮನೆಯವರೊಂದಿಗೆ ಮಾತನಾಡಬಾರದೆಂದು ಮೊಬೈಲ್ ಪೋನ್ ಕಿತ್ತುಕೊಂಡಿದ್ದ ಪತಿ. ಗಂಡ, ಅತ್ತೆ, ಇನ್ನಿಬ್ಬರೂ‌ ಸಂಬಂಧಿಕರ ವಿರುದ್ಧ …

Read More »

ಕ್ರಾಂತಿ ಯೋಗಿ ಬಸವ ಜಯಂತಿ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಜಯಂತಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿ

ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಬಸವೇಶ್ವರನಗರ ಬಸವ ಬಳಗದ , ಕಂಬಿ ಸಿದ್ದರಾಮಣ್ಣ ವಿದ್ಯಾರ್ಥಿ ನಿಲಯದಲ್ಲಿ ವತಿಯಿಂದ ಕಾಯಕ ಯೋಗಿ ಶ್ರೀ ಬಸವೇಶ್ವರ ಜಯಂತಿ ಮತ್ತು ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 119ನೇ ಜನ್ಮದಿನಾಚರಣೆ ಅಚರಣೆ. ಕಂಬಿ ಸಿದ್ದರಾಮಣ್ಣ ವಸತಿ ನಿಲಯದಿಂದ ಶ್ರೀ ಬಸವೇಶ್ವರರು, ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿರವರ ಮೂರ್ತಿಗಳನ್ನು ಭವ್ಯ ಮರವಣಿಗೆಯಲ್ಲಿ ಬಸವೇಶ್ವರನಗರ, ಅಂಬೇಡ್ಕರ್ ಕ್ರೀಡಾಂಗಣದ ಮೂಲಕ, ಮಂಜನಾಥನಗರ, ಮೋದಿ ವೃತ್ತದಿಂದ ಸ್ವಾತಿ ಹೋಟೆಲ್ ಮೇಲು …

Read More »

ವಾಹನ ಡಿಕ್ಕಿ ಹೊಡೆದು ಪೊಲೀಸ್‌ ಕಾನ್‌ಸ್ಟೆಬಲ್‌ ಸಾವು.!

ಕಲಬುರಗಿ: ವಾಹನ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್‌ ಕಾನ್‌ಸ್ಟೆಬಲ್‌ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರ್ (ಬಿ) ಗ್ರಾಮದ ಬಳಿ ನಡೆದಿದೆ. ಧರೆಪ್ಪ ಅಂಜುಟಗಿ, (26) ಮೃತ KSRP ಪೇದೆ. ಧರೆಪ್ಪ ಕಲಬುರಗಿಯಿಂದ ಶಿರವಾಳ್ ಗ್ರಾಮಕ್ಕೆ ಹೊರಟಿದ್ದರು. ಗೊಬ್ಬರ (ಬಿ) ಗ್ರಾಮದ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಪೊಲೀಸ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ತಮ್ಮರಾಯ ಪಾಟೀಲ್, ಸಿಪಿಐ ಲಖನ್ ಮಸಗಪ್ಪಿ …

Read More »

ವೇಶ್ಯಾವಾಟಿಕೆ ಅಡ್ಡೆ ಮೇಲೆ ನಗರ ಠಾಣೆ ಪೊಲೀಸರ ದಾಳಿ

ಇಬ್ಬರು ಆರೋಪಿಗಳನ್ನ ಬಂಧಿಸಿದ ನಗರ ಠಾಣೆ ಪೊಲೀಸರು. ಚಿತ್ರದುರ್ಗದ ವಿಧ್ಯಾನಗರ ಮನೆ ಮೇಲೆ ದಾಳಿ ದಾಳಿ ವೇಳೆ ಅಸೀನಾ ಭಾನು, ಅಶ್ವಕ್ ಬಂಧನ. ಅಕ್ರಮವಾಗಿ ಮಹಿಳೆಯರನ್ನ ಇರಿಸಿಕೊಂಡು ದಂಧೆ ಮಾಡುತ್ತಿದ್ದ ಆರೋಪಿಗಳು ದಾಳಿ ವೇಳೆ ಇಬ್ಬರು ಮಹಿಳೆಯರನ್ನ ರಕ್ಷಣೆ ಮಾಡಿರುವ ಪೊಲೀಸರು. ಎಸ್ಪಿ ರಂಜಿತ್ ಕುಮಾರ್ ಮಾರ್ಗದರ್ಶನದಲ್ಲಿ ನಡೆದ ದಾಳಿ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Read More »

ಪ್ರೀತಿ, ಮದುವೆ ಹೆಸರಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಗಳೊಂದಿಗೆ ದೈಹಿಕ ಸಂಪರ್ಕ

ಬೆಂಗಳೂರು: ಕಸ್ಟಮ್ಸ್ ಮಹಿಳಾ ಅಧಿಕಾರಿಗೆ  ಬ್ಲ್ಯಾಕ್‌ಮೇಲ್  ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೃಪಾಲನಿ ಪ್ರೀತಿ, ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ 50 ಮಂದಿಗೆ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಸ್ಟಮ್ಸ್ ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಕೇಸಲ್ಲಿ ಪುಲಕೇಶಿ ನಗರ ಪೊಲೀಸರು ಕೃಪಾಲನಿಯನ್ನು ಬಂಧಿಸಿದ್ದರು. ಆರೋಪಿ ವಿಚಾರಣೆ ವೇಳೆ 50 ಜನರಿಗೆ ಬ್ಲಾಕ್‌ಮೇಲ್ ಮಾಡಿರೋದು ಪತ್ತೆಯಾಗಿದೆ. ಸರ್ಕಾರಿ ಮಹಿಳಾ ಅಧಿಕಾರಿಗಳನ್ನೇ ಆರೋಪಿ ಕೃಪಾಲನಿ ಟಾರ್ಗೆಟ್ ಮಾಡುತ್ತಿದ್ದ. ಉದ್ಯಮಿ ಎಂದು ಸರ್ಕಾರಿ ಮಹಿಳಾ …

Read More »

ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆ – ಕೊಲೆ ಶಂಕೆ

ಬೆಂಗಳೂರು: ಭಾನುವಾರ ಮುಂಜಾನೆ ಮನೆಯಿಂದ ಹೋಗಿದ್ದ ವ್ಯಕ್ತಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನ ಮಣಿಪಾಲ್ ಕೌಂಟಿ ರಸ್ತೆಯಲ್ಲಿ ನಡೆದಿದೆ. ಬಸಾಪುರ ನಿವಾಸಿ ನಾರಾಯಣಪ್ಪ (56) ಮೃತ ದುರ್ದೈವಿ. ನಾರಾಯಣಪ್ಪ ಮುಂಜಾನೆ 5 ಗಂಟೆಗೆ ಮನೆಯಿಂದ ತೆರಳಿದ್ದರು. ಬಳಿಕ ಸ್ವಿಫ್ಟ್ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಾರಿನಲ್ಲಿದ್ದ ಶವವನ್ನು ನೋಡಿ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಮುಖ ಮತ್ತು ಎದೆಯ ಭಾಗಕ್ಕೆ ಗಾಯಗಳಾಗಿರುವ ಸ್ಥಿತಿಯಲ್ಲಿ ನಾರಾಯಣಪ್ಪ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬಂದ …

Read More »

ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆ ಮಾರಾಟಕ್ಕೆ ಯತ್ನ – 6 ಮಂದಿ ಅರೆಸ್ಟ್

ತುಮಕೂರು: ಕಾಲೇಜು ವಿದ್ಯಾರ್ಥಿಗಳಿಗೆ  ಮಾದಕ ಮಾತ್ರೆಗಳನ್ನು  ಮಾರಾಟ ಮಾಡಲು ಯತ್ನಿಸುತ್ತಿದ್ದ 6 ಮಂದಿ ಆರೋಪಿಗಳನ್ನು ತುಮಕೂರಿನ  ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಉಮರ್ (32), ನಜೀರ್ (35), ನವೀದ್(32) ಹಾಗೂ ತುಮಕೂರಿನ ಮರಳೂರುದಿಣ್ಣೆ ನಿವಾಸಿ ಶಾಹಬಾಜ್ (30), ಮಹಮ್ಮದ್ ಗೌಸ್ (32), ಮಹಮ್ಮದ್ ಇಕ್ಬಾಲ್ (28) ಬಂಧಿತ ಆರೋಪಿಗಳು. ತುಮಕೂರು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಾಲೇಜು ಬಳಿ ನಿಂತುಕೊಂಡು ಆರೋಪಿಗಳು ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. …

Read More »