Breaking News

ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆ ಮಾರಾಟಕ್ಕೆ ಯತ್ನ – 6 ಮಂದಿ ಅರೆಸ್ಟ್

Spread the love

ತುಮಕೂರು: ಕಾಲೇಜು ವಿದ್ಯಾರ್ಥಿಗಳಿಗೆ  ಮಾದಕ ಮಾತ್ರೆಗಳನ್ನು  ಮಾರಾಟ ಮಾಡಲು ಯತ್ನಿಸುತ್ತಿದ್ದ 6 ಮಂದಿ ಆರೋಪಿಗಳನ್ನು ತುಮಕೂರಿನ  ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಉಮರ್ (32), ನಜೀರ್ (35), ನವೀದ್(32) ಹಾಗೂ ತುಮಕೂರಿನ ಮರಳೂರುದಿಣ್ಣೆ ನಿವಾಸಿ ಶಾಹಬಾಜ್ (30), ಮಹಮ್ಮದ್ ಗೌಸ್ (32), ಮಹಮ್ಮದ್ ಇಕ್ಬಾಲ್ (28) ಬಂಧಿತ ಆರೋಪಿಗಳು. ತುಮಕೂರು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಾಲೇಜು ಬಳಿ ನಿಂತುಕೊಂಡು ಆರೋಪಿಗಳು ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಟಾಪೆಜೆಕ್ 100 ಎಂಜಿ, ಹಾಗೂ ಟೈಜೋಲ್-100 ಎಂಜಿ ಮಾತ್ರೆಗಳನ್ನ ಮಾರಾಟ ಮಾಡಲು ಯತ್ನಿಸಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತಿಲಕ್ ಪಾರ್ಕ್ ಪೊಲೀಸರು (Tilak Park Police) ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿಗಳ ಬಳಿಯಿದ್ದ 100 ಮಾದಕ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಎಂಡಿಎಂಎ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ