ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 25 ವರ್ಷದ ಟೆಕ್ಕಿ ಶ್ವೇತಾ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯವರಾದ ಶ್ವೇತಾ, ಶನಿವಾರ ಕೆಲಸ ಮುಗಿಸಿ ಮನೆಗೆ ಬಂದು ತಾಯಿಯೊಂದಿಗೆ ಮಾತನಾಡುತ್ತಿದ್ದಾಗ ಕುಸಿದು ಬಿದ್ದಿದ್ದರು. ಬೆಂಗಳೂರಿಗೆ ಕರೆತರುವಷ್ಟರಲ್ಲಿ ಕೋಮಾಗೆ ಜಾರಿದ್ದರು. ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟ ಕಾರಣ ಅದು ಸಾಧ್ಯವಾಗಿಲ್ಲ. ಆರೋಗ್ಯವಾಗಿದ್ದ ಯುವತಿ ದಿಢೀರ್ ಬ್ರೈನ್ ಸ್ಟೋಕ್ನಿಂದ ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ. ಮೃತದೇಹ ಹಾಸನಕ್ಕೆ ರವಾನಿಸಲಾಗಿದೆ.
Laxmi News 24×7