Breaking News

ವಿಜಯನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ – ಪಪ್ಪಾಯ ಬೆಳೆ ಸಂಪೂರ್ಣ ನಾಶ

Spread the love

ಬಳ್ಳಾರಿ: ವಿಜಯನಗರ  ಜಿಲ್ಲೆಯ ಹಲವೆಡೆ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿವೆ. ಮಳೆಯಿಂದ ಜಿಲ್ಲೆಯ ಕೆಲವೆಡೆ ಪಪ್ಪಾಯ, ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ಮತ್ತೊಂದೆಡೆ ಸಿಡಿಲಿಗೆ ಜಮೀನನಲ್ಲಿ ಕಟ್ಟಿ ಹಾಕಿದ್ದ ಎತ್ತು ಬಲಿಯಾಗಿದೆ.

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಮರದೇವರಗುಡ್ಡ ಗ್ರಾಮದಲ್ಲಿ ಮಳೆಗೆ ಪಪ್ಪಾಯ, ಅಡಿಕೆ ಸೇರಿ ತೋಟಗಾರಿಕೆ ಬೆಳೆ ಸಂಪೂರ್ಣ ನಾಶವಾಗಿದೆ. ಕಟಾವಿಗೆ ಬಂದಿದ್ದ ಪಪ್ಪಾಯ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ರೈತ ಬೀರಪ್ಪ ತನ್ನ 4 ಎಕರೆ ಜಮೀನಿನಲ್ಲಿ, ಲಕ್ಷಾಂತರ ಹಣ ಖರ್ಚು ಮಾಡಿ ಪಪ್ಪಾಯ ಬೆಳೆದಿದ್ದ. ಇದೀಗ ಲಕ್ಷಾಂತರ ಮೌಲ್ಯದ ಬೆಳೆ ಕಳೆದುಕೊಂಡಿರುವ ರೈತ ದಿಕ್ಕು ತೋಚದಂತಾಗಿದ್ದಾನೆ.

ಇನ್ನೊಂದೆಡೆ ಕೂಡ್ಲಿಗಿ ತಾಲೂಕಿನ ಗುಣಸಾಗರ ಗ್ರಾಮದಲ್ಲಿ ರೈತ ಈರಣ್ಣ ಎನ್ನುವವರಿಗೆ ಸೇರಿದ್ದ ಎತ್ತು ಸಿಡಿಲಿಗೆ ಬಲಿಯಾಗಿದೆ. ಜಮೀನಿನಲ್ಲಿ ಎತ್ತುಗಳನ್ನ ಕಟ್ಟಿ ಹಾಕಿದ್ದ ವೇಳೆ ಸಿಡಿಲಿಗೆ ಇಂದು ಎತ್ತು ಮೃತಪಟ್ಟಿದೆ. ಕೆಲವು ಅವಾಂತರಗಳ ನಡುವೆಯೂ ಜಿಲ್ಲೆಯಲ್ಲಿ ಸುರಿದ ಉತ್ತಮ ಮಳೆ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದೆ.


Spread the love

About Laxminews 24x7

Check Also

ರೊಟ್ಟಿ ತರಲು ಹೋಗಿದ್ದಾಗ ರೊಟ್ಟಿ ಮಾರುತ್ತಿದ್ದ ಆಂಟಿ ಮೇಲೆಯೇ ಲವ್

Spread the loveಬಳ್ಳಾರಿ, : ಪ್ರೀತಿಗೆ ಹೊತ್ತು ಗೊತ್ತಿಲ್ಲ ಪ್ರೀತಿಗೆ ಕಾರಣ ಬೇಕಿಲ್ಲ ಎನ್ನುವ ಸಿನಿಮಾ ಹಾಡು ಕೇಳಿದ್ದೇವೆ. ಆದ್ರೆ, ಇಲ್ಲೋರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ