ಬೆಳಗಾವಿ ಬೆಳಗಾವಿ ಉತ್ತರ ಮತಕ್ಷೇತ್ರದ ಚಾವಟಗಲ್ಲಿ ರೇಹಿವಾಸಿಗಳು ತಮಗೆ ಕುಡಿಯುವ ನೀರಿನ ಸೌಲಭ್ಯ ನೀಡಿದ್ದಕ್ಕಾಗಿ ಹಾಗು ಬಹಳ ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಹದಿಗೊಟ್ಟು ಇರುವ ಕಾರಣದಿಂದಾಗಿ ಚಾವುಟದಲ್ಲಿ ನಿವಾಸಿಗಳಿಗೆ ಕುಡಿಯುವ ನೀರಿಗಾಗಿ ಪರದಾಟ ಮಾಡುವ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್ ರಾಜು ಸೇಟ್ ಗಮನಿಸಿ ಚವಟಗಲ್ಲಿ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಕ್ಕಾಗಿ ಅಲ್ಲಿ ಮಹಿಳಾ ಸಂಘಟನೆ ಹಾಗೂ ವಿವಿಧ ನಾಗರಿಕರು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್ ರಾಜು ಸೆಟ್ ಅವರ ಕಚೇರಿಗೆ ಭೇಟಿ ನೀಡಿ ಕುಡಿಯುವ ನೀರಿನ ಸೌಲಭ್ಯ ನೀಡಿದ್ದಕ್ಕಾಗಿ ಧನ್ಯವಾದಗಳು ಹಾಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಚಾವಟ್ ಗಲ್ಲಿ ಮಹಿಳಾ ಅಧ್ಯಕ್ಷ ಅಕ್ಕ ತಾಯಿ ಸುತಾರ್ ಪಂಚಾಯತ ಸ್ವರಾಜ್ ಸಮಾಚಾರ ಜೊತೆ ಮಾತನಾಡಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರು ಅನೇಕ ಒಳ್ಳೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ನಮಗೆ ನೀಡಿರುವ ಭರವಸೆಗಳನ್ನು ಎಡೆಸುತ್ತಿದ್ದಾರೆ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದ್ದಾರೆಂದು, ಈ ಸಂದರ್ಭದಲ್ಲಿ ಶಾಸಕರಿಗೆ ಅಭಿನಂದನೆ ಹಾಗೂ ಧನ್ಯವಾದಗಳು ತಿಳಿಸಿದರು ಇದೇ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು ಛಾಯಾ ಬಾತ್ಕಂಡೆ ,ಜ್ಯೋತಿ ಪಡಿಕೆ ,ಆಶಾ ದೂರಾಜೆ ,ನಿತ ಪಡಕೆ, ಶೋಭಾಂಗಿ ಅಷ್ಟೇ ಕರ್, ನೇಮಾ ಬಾತ್ ಕಾಂಡೆ ,ಲಕ್ಷ್ಮಣ್ ಚೌಹಾನ್, ಹಾಗೂ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
Laxmi News 24×7