Breaking News

Daily Archives: ಸೆಪ್ಟೆಂಬರ್ 8, 2021

ಅನುಶ್ರೀ ಡ್ರಗ್ ಸೇವನೆ ಮಾಡ್ತಿದ್ರು, ನಮ್ಮ ರೂಮಿಗೂ ತರುತ್ತಿದ್ರು? : ಕಿಶೋರ್ ಶೆಟ್ಟಿ ಆರೋಪ

ಮಂಗಳೂರು : ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಡ್ರಗ್ ಸೇವನೆ ಮಾಡುತ್ತಿದ್ದರು, ನಮ್ಮ ಜೊತೆಯೇ ಡ್ರಗ್ ತೆಗೆದುಕೊಳ್ಳುತ್ತಿದ್ದರು ಎಂದು ಡ್ರಗ್ ಪ್ರಕರಣದ A 2 ಆರೋಪಿ ಕಿಶೋರ್ ಶೆಟ್ಟಿ ಮಂಗಳೂರು ಸಿಸಿಬಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸುಸ್ತಾಗಬಾರದು ಎಂಬ ಕಾರಣಕ್ಕೆ ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಕನ್ನಡದ ಖಾಸಗಿ ವಾಹಿನಿ ನಡೆಸುತ್ತಿದ್ದ ರಿಯಾಲಿಟಿ ಶೋ ವೇಳೆ ಡ್ರಗ್ಸ್ ಬಂದಿತ್ತು. ಆ ವೇಳೆ ಅನುಶ್ರಿ …

Read More »

ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಅನುಶ್ರೀಯವರ ನಾಟಕ ಬಯಲಾಗಿದೆ. ಜೈಲಿಗೆ ಹೋಗುವುದು ಫಿಕ್ಸ್…?

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ ವಿಚಾರವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಅನುಶ್ರೀಯವರ ನಾಟಕ ಬಯಲಾಗಿದೆ. ಜೈಲಿಗೆ ಹೋಗುವುದು ಫಿಕ್ಸ್ ಆಗಿದೆ ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020 ಸೆಪ್ಟೆಂಬರ್ ನಲ್ಲಿ ನಾನು ಶುಗರ್ ಡ್ಯಾಡಿ ಎಂದು ಟ್ವೀಟ್ ಮಾಡಿದ್ದೆ. ಆಗ ಮಾಜಿ ಸಿಎಂ ಒಬ್ಬರು ಊಹಾಪೋಹಕ್ಕೆ ನಾಂದಿ ಹಾಡಿದ್ದರು. ಪ್ರಕರಣದ ತನಿಖೆಯನ್ನು ಮಂಗಳೂರು ಪೊಲೀಸರು ಸರಿಯಾಗಿ …

Read More »

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಆಂತರಿಕ ಹೊಂದಾಣಿಕೆ ಇಲ್ಲದೇ ಕಳೆದುಕೊಳ್ಳಬೇಕಾಯಿತು :

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಆಂತರಿಕ ಹೊಂದಾಣಿಕೆ ಇಲ್ಲದೇ ಕೆಲವು ದ್ಥಾನ ಕಳೆದುಕೊಳ್ಳಬೇಕಾಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಮೊದಲೇ ಹೈ ಕಮಾಂಡ್ ಗೆ ತಿಳಿಸಿದಂತೆ ನಮ್ಮ ನಿಗದಿತ 15 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 5 ಸ್ಥಾನಗಳಲ್ಲಿ ಪಕ್ಷೇತರರು ಗೆಲ್ಲುವುದಾಗಿ ಹೇಳಿದ್ದೆವು.ಹಾಗಾಗಿ ನಮ್ಮ ಗೆಲುವು ನಮಗೆ ತೃಪ್ತಿ ತಂದಿದೆ. ಆದರೆ ನಗರದ ಉತ್ತರ ಕ್ಷೇತ್ರದಲ್ಲಿ ನಮ್ಮ ಆಂತರಿಕ ಹೊಂದಾಣಿಕೆ ಕಾರಣದಿಂದಾಗಿ …

Read More »

ದಲಿತ-ಬ್ರಾಹ್ಮಣರ ಒಗ್ಗಟ್ಟಿನಿಂದ ನಮ್ಮ ಪಕ್ಷ ಮತ್ತೊಮ್ಮೆ ಆಡಳಿತಕ್ಕೆ ಬರುವಂತೆ ಮಾಡಬೇಕು:. ಮಾಯಾವತಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ, ಸಮಾಜವಾದಿ ಪಕ್ಷ ದಂತೆ ಬರೀ ಮಾತನಾಡದೆ, ಕೆಲಸವನ್ನೂ ಮಾಡುವುದಾಗಿ ಬಹುಜನ್‌ ಸಮಾಜ ಪಕ್ಷದ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಹೇಳಿಕೊಂಡಿದ್ದಾರೆ. ಬ್ರಾಹ್ಮಣ ಸಮುದಾಯದ ಮತಗಳನ್ನು ಸೆಳೆಯುವುದಕ್ಕಾಗಿ ಪಕ್ಷವು ಒಂದು ತಿಂಗಳ ಕಾಲ ನಡೆಸಿದ ಅಭಿಯಾನದ ಕೊನೆಯ ದಿನದಂದು ಪ್ರಬುದ್ಧ್ ವರ್ಗ ಸಮ್ಮೇಳನಲ್ಲಿ ಅವರು ಈ ಮಾತನ್ನಾಡಿದ್ದಾರೆ. ದಲಿತ-ಬ್ರಾಹ್ಮಣರ ಒಗ್ಗಟ್ಟಿನಿಂದ ನಮ್ಮ ಪಕ್ಷ ಮತ್ತೊಮ್ಮೆ ಆಡಳಿತಕ್ಕೆ ಬರುವಂತೆ ಮಾಡಬೇಕು. ಬಿಜೆಪಿ ಮತ್ತು ಸಮಾಜವಾದಿ ಪಕ್ಷ ಬರೀ ಮಾತನಾಡುತ್ತವೆ. ಆದರೆ …

Read More »

ರೈತರ ವಿರುದ್ಧ ‘ತಲೆ ಉರುಳಿಸುವ’ ಹೇಳಿಕೆ: ಐಎಎಸ್ ಅಧಿಕಾರಿ ವಿರುದ್ಧ ರೈತರ ಆಕ್ರೋಶ

ಕರ್ನಾಲ್ (ಹರಿಯಾಣ) (ಪಿಟಿಐ): ರೈತರ ವಿರುದ್ಧ ‘ತಲೆ ಉರುಳಿಸುವ’ ಹೇಳಿಕೆ ನೀಡಿದ್ದ ಐಎಎಸ್ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲಾಡಳಿತ ಕಚೇರಿಯನ್ನು ವಶಕ್ಕೆ ತೆಗೆದುಕೊಳ್ಳುವುದಾಗಿ ರೈತರು ಎಚ್ಚರಿಸಿ ದರು. ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸುತ್ತಿದ್ದ ರೈತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಇದಕ್ಕೂ ಮುನ್ನ ರೈತ ಸಂಘಟನೆ ಗಳು ಮಹಾಪಂಚಾಯಿತಿ …

Read More »

ರೈತರಿಗೆ ಶಾಕ್, ಪಂಪ್ಸೆಟ್ ಉಚಿತ ವಿದ್ಯುತ್ ಗೆ ಬ್ರೇಕ್..? ಗ್ಯಾಸ್ ಸಬ್ಸಿಡಿ ಮಾದರಿ ‘ಗಿವ್ ಇಟ್ ಅಪ್’ ಅಭಿಯಾನ.?

ಬೆಂಗಳೂರು: ಎಲ್ಪಿಜಿ ಗ್ಯಾಸ್ ಸಬ್ಸಿಡಿ ಸೌಲಭ್ಯವನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲು ಗಿವ್ ಇಟ್ ಅಪ್ ನಡೆಸಿದಂತೆಯೇ ವಿದ್ಯುತ್ ಗಿವ್ ಇಟ್ ಅಪ್ ಅಭಿಯಾನ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕೃಷಿ ನೀರಾವರಿ ಪಂಪ್ ಸೆಟ್ ಗಳ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ರೈತರು ಸ್ವಯಂ ಪ್ರೇರಿತವಾಗಿ ಬಿಟ್ಟುಕೊಡಲು ಗಿವ್ ಇಟ್ ಅಪ್ ಅಭಿಯಾನ ಕೈಗೊಳ್ಳಲಾಗುತ್ತದೆ. ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವುದನ್ನು ನಿಲ್ಲಿಸಿದರೆ, ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತದೆ. ಹೀಗಾಗಿ ರೈತರೇ ಸ್ವಯಂ …

Read More »

ದೇಗುಲ ಆಸ್ತಿಗೆ ದೇವರೇ ಮಾಲೀಕ, ಅರ್ಚಕನಲ್ಲ: ದೇವಾಲಯ ಭೂಮಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ದೇವಾಲಯಗಳಿಗೆ ಮೀಸಲಾದ ಆಸ್ತಿಯ ಒಡೆತನ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ದೇವಾಲಯದ ಭೂಮಿಗೆ ದೇವರೇ ಮಾಲೀಕ ಎಂದು ತಿಳಿಸಿದೆ. ಯಾವುದೇ ದೇವಾಲಯಗಳ ಆಸ್ತಿಗೆ ಅರ್ಚಕರು ಒಡೆಯರಲ್ಲ, ದೇವರೇ ನಿಜವಾದ ಮಾಲೀಕ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ದೇವಾಲಯಗಳಿಗೆ ಮೀಸಲಾದ ಭೂದಾಖಲೆಗಳಲ್ಲಿ ಅರ್ಚಕರ ಹೆಸರನ್ನು ಸೇರ್ಪಡೆ ಮಾಡಬೇಕೆಂಬುದರ ಕುರಿತಾಗಿ ಉಂಟಾದ ಗೊಂದಲದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ, ದೇಗುಲದ ಭೂಮಿಗೆ ದೇವರೇ ಮಾಲೀಕರಾಗಿದ್ದು, ತಾತ್ಕಾಲಿಕವಾಗಿ …

Read More »

1.06 ಬಿಲಿಯನ್‌ ಡಾಲರ್‌ ಕೊಟ್ಟರೆ ಕೇಸು ವಾಪಸ್‌: ಕೈರ್ನ್ ಎನರ್ಜಿ

ನವದೆಹಲಿ:ಭಾರತ ಸರ್ಕಾರ ಶೀಘ್ರವೇ 1.06 ಬಿಲಿಯನ್‌ ಡಾಲರ್‌ ಮೊತ್ತವನ್ನು ಪಾವತಿಸುವ ವಿಶ್ವಾಸವಿದೆ. ಈ ಮೊತ್ತ ಪಾವತಿ ಮಾಡಿದರೆ, ವಿದೇಶಗಳಲ್ಲಿರುವ ಕೇಂದ್ರದ ಆಸ್ತಿ ವಶಪಡಿಸಿಕೊಳ್ಳುವುದನ್ನು ಕೈ ಬಿಡುವುದಾಗಿ ಕೈರ್ನ್ ಎನರ್ಜಿ ಮಂಗಳವಾರ ಹೇಳಿದೆ. ಭಾರತದ 1.06 ಶತ ಕೋಟಿ ಡಾಲರ್‌ ಮರು ಪಾವತಿ ಆಫ‌ರ್‌ ಅನ್ನು ನಾವು ಸ್ವೀಕರಿಸಿದ್ದು, ತೆರಿಗೆ ವಿವಾದ ಶೀಘ್ರವೇ ಇತ್ಯರ್ಥಗೊಳ್ಳಲಿದೆ ಎಂದು ಕೈರ್ನ್ ಎನರ್ಜಿ ಸಿಇಒ ಸಿಮೊನ್‌ ಥಾಮ್ಸನ್‌ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜತೆಗೆ ದೀರ್ಘ‌ ಕಾಲದಿಂದ ಇರುವ ವಿವಾದ …

Read More »

ದೇಶದಲ್ಲಿ ಕೋವಿಡ್ ದಿಂದಾಗಿ ಕಡಿಮೆಯಾಗಿದ್ದ ವಾಹನ ಮಾರಾಟ ಪ್ರಮಾಣ ಇದೀಗ ಮತ್ತೆ ಏರಿಕೆ

ನವದೆಹಲಿ: ದೇಶದಲ್ಲಿ ಕೋವಿಡ್ ದಿಂದಾಗಿ ಕಡಿಮೆಯಾಗಿದ್ದ ವಾಹನ ಮಾರಾಟ ಪ್ರಮಾಣ ಇದೀಗ ಮತ್ತೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ.39 ಏರಿಕೆಯಾಗಿದೆ ಎಂದು ಆಟೋಮೊಬೈಲ್‌ ವಿತರಕ ಸಂಘಗಳ ಒಕ್ಕೂಟ (ಎಫ್‌ಎಡಿಎ) ತಿಳಿಸಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 1,82,651 ವಾಹನ ಮಾರಾಟ ವಾಗಿತ್ತು, ಈ ವರ್ಷ ಆಗಸ್ಟ್‌ಗೆ ಅದು 2,53,363ಕ್ಕೆ ಏರಿಕೆಯಾಗಿದೆ. ಕಳೆದ ಆಗಸ್ಟ್‌ ಗೆ 9,15,126 ಬೈಕುಗಳು ಮಾರಾಟವಾಗಿದ್ದು, ಈ ವರ್ಷ 9,76,051ಕ್ಕೆ ಏರಿದೆ. ವಾಣಿಜ್ಯ …

Read More »

ದ.ಕ.ಜಿಲ್ಲೆಯ ಪ್ರಮುಖ ದೇವಸ್ಥಾನಗಳ ನಿರ್ಬಂಧ ಸಡಿಲಿಕೆ ..!

ಮಂಗಳೂರು: ಕೋವಿಡ್ ಸೋಂಕು ನಿಯಂತ್ರಣದ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಈ ಹಿಂದೆ ವಿಧಿಸಲಾಗಿದ್ದ ಕೆಲವು ನಿರ್ಬಂಧ, ಮಾರ್ಗಸೂಚಿಗಳನ್ನು ಹಿಂಪಡೆದು ದ.ಕ.ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಸೇರಿದಂತೆ ಪ್ರಮುಖ ದೇವಸ್ಥಾನಗಳು ವಾರಾಂತ್ಯಗಳನ್ನು ಹೊರತುಪಡಿಸಿ ಭಕ್ತಾದಿಗಳಿಗೆ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ತೆರೆದಿರುತ್ತದೆ. ಈ ಸಂದರ್ಭ ಭಕ್ತಾದಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ …

Read More »