Breaking News
Home / 2021 / ಆಗಷ್ಟ್ (page 3)

Monthly Archives: ಆಗಷ್ಟ್ 2021

ವಿದ್ಯುತ್ ಸ್ಪರ್ಶಿಸಿ ಸಹೋದರರಿಬ್ಬರ ದಾರುಣ ಸಾವು

ಚಿಕ್ಕೋಡಿ/ಬೆಳಗಾವಿ: ನೀರು ಹಾಯಿಸಲು ಬಾವಿಯ ಮೋಟರ್ ಸ್ಟಾರ್ಟ್ ಮಾಡಲು ಹೋಗಿ ಸಹೋದರಿಬ್ಬರು ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದ ಬಡಿಗೇರ ತೋಟದಲ್ಲಿ ನಡೆದಿದೆ. ಬಾವಿಗೆ ಅಳವಡಿಸಲಾಗಿದ್ದ ನೀರೆತ್ತುವ ಮೋಟರ್ ನ್ನು ಬೆಳಗ್ಗೆ ಸ್ಟಾರ್ಟ್ ಮಾಡಲು ಹೋಗಿ ರಾಜು ಬಾಳಪ್ಪ ಬಡಿಗೇರ ಹಾಗೂ ಸಹೋದರ ಶಂಕರ್ ರಾಮಪ್ಪ ಬಡಿಗೇರ ಸಾವೀಗಿಡಾಗಿದ್ದಾರೆ. ಮದುವೆ ವಯಸ್ಸಿಗೆ ಬಂದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಮಳೆ, ಗಾಳಿಗೆ ವಿದ್ಯುತ್ ತಂತಿಗಳು …

Read More »

KSRTC ಬಸ್ ತಡೆದು ವಿದ್ಯಾರ್ಥಿಗಳು, ಜನರಿಂದ ಪ್ರತಿಭಟನೆ

ನೆಲಮಂಗಲ: ವಿದ್ಯಾರ್ಥಿಗಳು ಹಾಗೂ ಜನರು ಕೆ.ಎಸ್‍.ಆರ್.ಟಿ.ಸಿ  ಬಸ್‍ಗಳನ್ನು ತಡೆದು ನೆಲಮಂಗಲದಲ್ಲಿ ಪ್ರತಿಭಟನೆ ನಡೆಸಿದರು. ಕೊರೊನಾ ಆತಂಕದ ನಡುವೆಯೇ ಇತ್ತೀಚೆಗೆ ಶಾಲಾ ಕಾಲೇಜುಗಳನ್ನು ಓಪನ್ ಮಾಡಿದ್ದು, ಪಾಠ ಪ್ರವಚನಗಳು ನಡೆಯುತ್ತಿವೆ. ಆದರೆ ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆಯಿಂದ ಸಾಕಷ್ಟು ಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಳಗ್ಗೆ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ಹೋಗಲು ಬಸ್‍ಗಳು ಸರಿಯಾಗಿ ಬರುತ್ತಿಲ್ಲ. ಬರುವಂತಹ ಎಲ್ಲಾ ಬಸ್‍ಗಳು ಸರ್ವೀಸ್ ರಸ್ತೆಯಲ್ಲಿ ಚಲಿಸದೆ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿವೆ. ಈ …

Read More »

ಮೈಸೂರು ಗ್ಯಾಂಗ್ ರೇಪ್ ಸಂತ್ರಸ್ಥೆ ಫೋನ್ ಸ್ವಿಚ್‍ ಆಫ್

ಮೈಸೂರು,; ಗ್ಯಾಂಗ್‍ರೇಪ್‍ಗೆ ಒಳಗಾದ ಸಂತ್ರಸ್ತೆ ಪೊಲೀಸರಿಗೆ ದೊಡ್ಡ ತಲೆ ನೋವಾಗಿದ್ದಾಳೆ. ನಾವು ಫೋನ್ ಮಾಡಿದಾಗ ಕೆಲವು ವಿವರ ನೀಡುವಂತೆ ಸಂತ್ರಸ್ತೆ ಮತ್ತು ಫೋಷಕರಿಗೆ ಪೊಲೀಸರು ತಾಕೀತು ಮಾಡಿ ಮೈಸೂರಿನಿಂದ ಕಳುಹಿಸಿದ್ದರು. ಸದ್ಯ ಮುಂಬೈನಲ್ಲಿರುವ ಯುವತಿ ಮತ್ತು ಫೋಷಕರು ಫೋನ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಸಿಕ್ಕಿರುವ ಕಾರಣ ಸಂತ್ರಸ್ತೆ ಮುಂದೆ ಐಡೆಂಟಿಫಿಕೇಷನ್ ಪರೇಡ್ ಮಾಡಿಸಬೇಕು. ಆದರೆ, ಸಂತ್ರಸ್ತೆ ಫೋನ್ ಪಿಕ್ ಮಾಡದ ಕಾರಣ ಪೊಲೀಸರು ಮುಂದೇನು ಮಾಡುವುದು ಎಂದು ಚಿಂತಿತರಾಗಿದ್ದಾರೆ. …

Read More »

ಸರಳ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ಸಾದ್ಯತೆ

ಬೆಂಗಳೂರು, ;ಸಾರ್ವಜನಿಕರು ಹಾಗೂ ಹಿಂದೂಪರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಗಣೇಶ ಹಬ್ಬ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡುವ ನಿರೀಕ್ಷೆಯಿದೆ. ಈ ಬಾರಿಯ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ನಿರ್ಬಂಧ ಹಾಕಿ ಸರಳವಾಗಿ ಆಚರಿಸುವಂತೆ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಕೆಲವು ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಅದರಲ್ಲೂ ಆಡಳಿತಾರೂಢ ಬಿಜೆಪಿಯ ಸಚಿವರು ಮತ್ತು ಶಾಸಕರೇ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಗಣಪತಿ ಹಬ್ಬ ಆಚರಣೆಗೆ …

Read More »

ಯುವತಿಗೆ ಚಾಕು ಇರಿದು, ತಾನು ಕತ್ತು ಕೊಯ್ದುಕೊಂಡ ಯುವಕ

ಉಡುಪಿ: ಯುವಕನೊಬ್ಬ ಯುವತಿಗೆ ಚೂರಿಯಿಂದ ಇರಿದು, ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಸಂತೆಕಟ್ಟೆ ಸಮೀಪದ ರೋಬೋಸಾಫ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಆ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಸೌಮ್ಯಶ್ರೀ ವಿಠಲ ಭಂಡಾರಿ (28) ಚಿಕಿತ್ಸೆಗೆ ಸ್ಪಂದಿಸದೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಸಂತೆಕಟ್ಟೆಯ ರೋಬೊ ಸಾಫ್ಟ್ ಕಂಪನಿ ಎದುರು ಸೌಮ್ಯಶ್ರೀ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ಸಂದೇಶ್ ಏಕಾಏಕಿ …

Read More »

500 ರೂ. ಗೆ ಐಫೋನ್‍ ನಕಲಿ ಬ್ಯಾಕ್ ಕೇಸ್ ಮಾರುತ್ತಿದ್ದವರು ಅರೆಸ್ಟ್

ಆಯಪಲ್ ಕಂಪನಿಯ ಐಫೋನ್ ಇರಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿ ಬಹಳ ದಿನಗಳಾಗಿವೆ. ಅಷ್ಟೇ ದೊಡ್ಡ ಪ್ರತಿಷ್ಠೆ ಐಫೋನ್‍ಗಳಿಗೆ ಬ್ಯಾಕ್ ಕೇಸ್ ಹಾಕಿಸುವುದು. ಕಂಪನಿಯದ್ದೇ ಒರಿಜಿನಲ್ ಕೇಸ್‍ನ ಬೆಲೆ 4500 ರೂ. ನಿಂದ ಆರಂಭವಾಗುತ್ತದೆ. ಆದರೆ ಇದರ ನಕಲಿ ರೂಪ ಕೆಲವೆಡೆ ಸಿಗುತ್ತದೆ. ಅದರ ಬೆಲೆಯೇನು ಕಡಿಮೆ ಇಲ್ಲ, ಸುಮಾರು 500 ರೂ. ಇಂಥದ್ದೇ ನಕಲಿ ಬ್ಯಾಕ್ ಕೇಸ್‍ಗಳನ್ನು ಮಾರುತ್ತಿದ್ದ ಚೆನ್ನೈನ ಅಮಿನ್‍ಜಿಕರೈನ ಇಬ್ಬರು ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.   ಇವರ ಬಳಿಯಿಂದ …

Read More »

6 ರಿಂದ 8 ನೇ ತರಗತಿ ಆರಂಭಕ್ಕೆ ಸಮ್ಮತಿ|’ಸೆಪ್ಟೆಂಬರ್ 6′ ರಿಂದ ಶಾಲೆ ಶುರು

ಬೆಂಗಳೂರು: ರಾಜ್ಯದಲ್ಲಿ 6, 7 ಹಾಗೂ 8 ನೇ ತರಗತಿ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಇಂದು( ಆ.30) ತಜ್ಞರ ಜೊತೆ ನಡೆದ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್. ಅಶೋಕ್ ಅವರು, ಕೋವಿಡ್ ಪಾಸಿಟಿವಿಟಿ ದರ 2 % ಕಡಿಕೆ ಇರುವ ತಾಲೂಕುಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಸೆಪ್ಟೆಂಬರ್ 6 ರಿಂದ ಭೌತಿಕ ತರಗತಿಗಳ (6,7,8)ನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡುತ್ತಿದೆ ಎಂದರು. 50% …

Read More »

ಸರ್ಕಾರಿ, ಅನುದಾನಿತ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್; 20 ದಿನದಲ್ಲಿ ಬಾಕಿ ಪಠ್ಯಪುಸ್ತಕ ಪೂರೈಕೆ

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಶೇಕಡ 54.74 ರಷ್ಟು ಪಠ್ಯಪುಸ್ತಕ ಪೂರೈಕೆ ಮಾಡಲಾಗಿದ್ದು, ಪುಸ್ತಕಗಳ ಮುದ್ರಣ ಕಾರ್ಯ ಪ್ರಗತಿಯಲ್ಲಿದೆ. ಇನ್ನು 20 ದಿನಗಳ ಒಳಗೆ ಮಕ್ಕಳಿಗೆ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹೈಕೋರ್ಟ್ ಗೆ ರಾಜ್ಯ ಸರ್ಕಾರದಿಂದ ಈ ಕುರಿತಾಗಿ ಮಾಹಿತಿ ಸಲ್ಲಿಸಲಾಗಿದೆ. ಈ ಕುರಿತಂತೆ ಸಲ್ಲಿಕೆಯಾಗಿದ್ದ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆದಿದ್ದು, …

Read More »

ರಾಜ್ಯದಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದ್ದು, ಇಂದಿನಿಂದ ಸೆಪ್ಟಂಬರ್ 2 ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.   ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇಂದಿನಿಂದ ಮೂರು ದಿನ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, …

Read More »

ಕೇರಳದಲ್ಲಿ ಮಹಾಮಾರಿ ಕೊರೊನಾ ಆತಂಕ : 24 ಗಂಟೆಯಲ್ಲಿ19,622 ಪ್ರಕರಣಗಳು ಪತ್ತೆ

ತಿರುವನಂತಪುರಂ : ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 1,17,216 ಕೊರೊನಾ ಪರೀಕ್ಷೆಗಳು ನಡೆದಿದ್ದು, ಬಳಿಕ ಕೇರಳದಲ್ಲಿ 19,622 ಪ್ರಕರಣಗಳು ವರದಿಯಾಗಿದೆ.   ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ ಕೇರಳದಲ್ಲಿ 19,622 ಪ್ರಕರಣಗಳು ವರದಿಯಾಗಿದೆ. ಸದ್ಯ ಕೇರಳದಲ್ಲಿ ಪಾಸಿಟಿವಿಟಿ ರೇಟ್ ಶೇಕಡಾ 16.74 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ., ಕೇರಳದಲ್ಲಿ 123 ಹೊಸ ಸಾವುಗಳು ವರದಿಯಾಗಿವೆ, ಸಾವಿನ ಸಂಖ್ಯೆ 20673 …

Read More »