Breaking News

Daily Archives: ಫೆಬ್ರವರಿ 8, 2021

ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಗಡಿಪಾರಿಗೆ ಆಗ್ರಹ

  ರಾಮನಗರ : ಹಿರಿಯ ಸಾಹಿತಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಪ್ರಗತಿಪರ ಹಾಗೂ ದಲಿತ ಸಮಾನ ಮನಸ್ಕರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ವಕೀಲೆ ಮೀರಾ ರಾಘವೇಂದ್ರ ಅವರ ಗಡಿಪಾರಿಗೆ ಆಗ್ರಹಿಸಿದರು. ಇಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭಿಸಿದರು.ಪ್ರೊ. ಕೆ. ಎಸ್. ಭಗವಾನ್ ಮುಖಕ್ಕೆ ಮಸಿ‌ ಬಳಿದ ವಕೀಲೆ ವೀರಾ ರಾಘುವೇಂದ್ರ‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ದೇಶದ ಸಂವಿಧಾನದ …

Read More »

ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಬಿಜೆಪಿ ಸಮಿತಿಗಿಲ್ಲ: ಈಶ್ವರಪ್ಪ

ಶಿವಮೊಗ್ಗ: ಶಾಸಕ ಬಸನಗೌಡ ಯತ್ನಾಳ್ ಮತ್ತೆ ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಸಿಎಂ ಮಾತನಾಡುವುದು ಬೇಡ ಎಂದು ಹೇಳಿದರೂ ಕೇಳುತ್ತಿಲ್ಲ. ಆದರೆ ರಾಜ್ಯ ಬಿಜೆಪಿ ಸಮಿತಿಗೆ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಹೇಳಿಕೆಗಳು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಗಮನಕ್ಕೂ ಬಂದಿದೆ. ಅವರು ಕೇಂದ್ರ ಶಿಸ್ತು ಸಮಿತಿಯ ಗಮನಕ್ಕೆ ಈ …

Read More »

ಪೊಲೀಸ್ ದಾಳಿಗೆ ಹೆದರಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ನೀರು ಪಾಲು

ರಾಮದುರ್ಗ: ಯುವಕರ ಗುಂಪು ಜೂಜಾಟದಲ್ಲಿ ತೊಡಗಿದ್ದು, ಪೊಲೀಸ್ ದಾಳಿ ನಡೆಸಿದ್ದರಿಂದ ಇಬ್ಬರು ಮಲಪ್ರಭಾ ನದಿಗೆ ಹಾರಿದ ಘಟನೆ ನಡೆದಿದೆ. ನದಿಯ ಪಕ್ಕದ ಪೊದೆಯ ಬಳಿ ಗುಂಪು ಪೊಲೀಸರು ಬಂದಿದ್ದರಿಂದ ಹೆದರಿ ಓಡಿಹೋಗಿದ್ದಾರೆ. ಈ ವೇಳೆ ಇಬ್ಬರು ನದಿ ನೀರಿಗೆ ಹಾರಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಈಜು ತಜ್ಞರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮಂಜುನಾಥ ಲಕ್ಷ್ಮಣ ಬಂಡಿವಡ್ಡರ (28) ಹಾಗೂ ಸಮೀರ ಮಹಮದಸಾಬ ಬಟಕುರ್ಕಿ (23) ನದಿಗೆ …

Read More »

ವಿದೇಶಿ ವಿನಾಶಕಾರಿ ಸಿದ್ಧಾಂತ, ಆಂದೋಲನ ಜೀವಿಗಳಿಂದ ದೇಶ ರಕ್ಷಿಸಬೇಕಿದೆ: ಮೋದಿ

ನವದೆಹಲಿ: ವಿವಾದಿತ ಕೃಷಿ ಕಾನೂನು ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭೆಯಲ್ಲಿ ಮಾತನಾಡಿದ್ದು ‘ವಿದೇಶಿ ವಿನಾಶಕಾರಿ ಸಿದ್ಧಾಂತ’ (ಎಫ್‌ಡಿಐ) ಆಂದೋಲನ ಜೀವಿಗಳಿಂದ ನಾವು ದೇಶವನ್ನು ರಕ್ಷಿಸಬೇಕಿದೆ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು ದೇಶದ ಹೊಸ ತಲೆಮಾರಿನ ಜನರನ್ನು ವಿದೇಶಿ ವಿನಾಶಕಾರಿ ಸಿದ್ಧಾಂತಗಳಿಂದ ರಕ್ಷಿಸಿಬೇಕಿದ್ದು, ಅವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ಹೊಸ ತಲೆಮಾರಿನ ಜನರನ್ನು …

Read More »

ಬೆಳಗಾವಿ ಲೋಕಸಭೆ ಉಪಚುನಾವಣೆ: ಮತಗಟ್ಟೆಗಳ ತಯಾರಿ ನಡೆಸಿರುವ ಅಧಿಕಾರಿಗಳು

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಮತಗಟ್ಟೆಗಳನ್ನು ತಯಾರಿಸುವ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ. ಚುನಾವಣಾ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ ಎನ್ನಲಾಗುತ್ತಿದ್ದು, ಚುನಾವಣಾ ಆಯೋಗದ ಸೂಚನೆಯಂತೆ ಅಧಿಕಾರಿಗಳು, ವಿವಿಧ ಸರ್ಕಾರಿ ಶಾಲೆಗಳಿಗೆ ಭಾನುವಾರ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯಗಳು ಮತ್ತು ಮತಗಟ್ಟೆಯಾಗಿ ಪರಿವರ್ತಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಸೆ. 23ರಂದು ಕೋವಿಡ್‌ನಿಂದಾಗಿ …

Read More »

ಏಯ್​.. ಚೆನ್ನಾಗಿರೋ ಪಂಚೆ ಕೊಡಯ್ಯ.. ಕಲರ್​ ಇಲ್ದೇ ಇರೋದು ಕೊಡಬೇಡ: ಸಿದ್ದರಾಮಯ್ಯ

ಬೆಂಗಳೂರು: ತಮ್ಮ ಬಿರುಸಿನ ರಾಜಕೀಯ ಚಟುವಟಿಕೆಗಳಿಂದ ಕೊಂಚ ಬ್ರೇಕ್​ ತಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಇವತ್ತು ಶಾಪಿಂಗ್​ ಮಾಡಲು ತೆರಳಿದ್ದರು. ಹೌದು, ವಿಪಕ್ಷ ನಾಯಕರು ಇಂದು ನಗರದ ಚಿಕ್ಕಪೇಟೆಯ ಗಾಂಧಿ ಗ್ರಾಮೋದ್ಯೋಗ ಮಳಿಗೆಗೆ ಭೇಟಿ ಕೊಟ್ಟು ಬಟ್ಟೆ ಖರೀದಿಗೆ ಮುಂದಾದರು. Siddaramaiah cotton panche purchase ಶಾಪಿಂಗ್​ ವೇಳೆ ಅಂಗಡಿ ಸಿಬ್ಬಂದಿಗೆ ಖಾದಿ ಶರ್ಟ್​ ಮತ್ತು ಪಂಚೆಗಳನ್ನು ತೋರಿಸಲು ಸಿದ್ದರಾಮಯ್ಯ ಕೇಳಿದರು. ಈ ವೇಳೆ, ಸಣ್ಣ ಬಾರ್ಡರ್​ ಇರೋ ಪಂಚೆ …

Read More »

ಇನ್ ಲೈನ್ ಸ್ಕೇಟಿಂಗ್ ನಲ್ಲಿ ಹತ್ತು ವರ್ಷದ ಪೋರಿಯ ಗಿನ್ನಿಸ್ ದಾಖಲೆ

ಹುಬ್ಬಳ್ಳಿ: ಇನ್ ಲೈನ್ ಸ್ಕೇಟಿಂಗ್ ಮಾಡುತ್ತಾ ಮೂರು ಹುಲಾಹೂಪಗಳನ್ನು ತಿರುಗಿಸುವುದರೊಂದಿಗೆ 100 ಮೀ. ದೂರವನ್ನು 23.45 ಸೆಕೆಂಡ್ ಗಳಲ್ಲಿ ಕ್ರಮಿಸಿ ಹತ್ತು ವರ್ಷದ ಪೋರಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾಳೆ. ಇಲ್ಲಿನ ಪರಿವರ್ತನ ಗುರುಕುಲ ಹೆರಿಟೇಜ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಸ್ತುತಿ ಕುಲಕರ್ಣಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾಳೆ. ಇಲ್ಲಿನ ಶಿರೂರು ಪಾರ್ಕ್ ನಿವಾಸಿಗಳಾದ ಕಿಶೋರ ಕುಲಕರ್ಣಿ, ರಶ್ಮಿ ಕುಲಕರ್ಣಿ ಅವರ ಪುತ್ರಿಯಾದ ಸ್ತುತಿ ಇದೇ ಕ್ರೀಡೆಯಲ್ಲಿ ಹಲವು ದಾಖಲೆ ಮಾಡಿದ್ದಾಳೆ. …

Read More »

ವಿಜಯನಗರ ನೂತನ ಜಿಲ್ಲೆಯಾಗಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಬೆಂಗಳೂರು: ವಿಜಯನಗರ ನೂತನ ಜಿಲ್ಲೆಯಾಗಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಿಜಯನಗರ ಜಿಲ್ಲೆಗೆ ಹೊಸಪೇಟೆ ಕೇಂದ್ರ ಸ್ಥಾನವನ್ನಾಗಿ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿದ್ದ ರಾಜ್ಯ ಸರ್ಕಾರ ವಿಜಯ ನಗರ ಪ್ರತ್ಯೇಕ ಜಿಲ್ಲೆ ಘೋಷಣೆ ಮಾಡಿತ್ತು. ಇದೀಗ ಅಧಿಕೃತ ಆದೇಶ ಹೊರಡಿಸಿದ್ದು, ವಿಜಯನಗರಕ್ಕೆ ಹೊಸಪೇಟೆ, ಕೂಡ್ಲಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ, ಹರಪನಹಳ್ಳಿ ಸೇರಿ 6 ತಾಲೂಕುಗಳನ್ನು ಸೇರಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ, ಸಂಡೂರು …

Read More »

ಬಿಜೆಪಿಗೆ ದಿಟ್ಟ ಸವಾಲು ಹಾಕಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ, ಫೆಬ್ರುವರಿ 08: ಪಶ್ಚಿಮ ಬಂಗಾಳದಲ್ಲಿ ರಾಜ್ಯ ಬಜೆಟ್ ಮಂಡನೆಯಾಗಿದ್ದು, ಸಿಎಂ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಫೆಬ್ರುವರಿ 5ರಂದು ಬಜೆಟ್ ಮಂಡಿಸಿ, ರಾಜ್ಯ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂದು ಕರೆಸಿಕೊಂಡಿದ್ದಾರೆ. ಬಜೆಟ್ ನಲ್ಲಿ ಪಶ್ಚಿಮ ಬಂಗಾಳ ಜನರಿಗೆ ಹಲವು ಕೊಡುಗೆಗಳನ್ನೂ ನೀಡಿದ್ದಾರೆ. ಆದರೆ ರಾಜ್ಯ ಬಜೆಟ್ ಕುರಿತು ಟೀಕೆ ಮಾಡಿರುವ ಬಿಜೆಪಿ, “ಮಮತಾ ಬ್ಯಾನರ್ಜಿ ಮಂಡಿಸಿರುವ ಈ ರಾಜ್ಯ ಬಜೆಟ್ ವಾಸ್ತವಕ್ಕೆ ದೂರವಾದವು. ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು …

Read More »

ಕೊನೆಗೂ ಬಳ್ಳಾರಿಯನ್ನು ವಿಭಜಿಸಿ ಹೊಸ ವಿಜಯನಗರ ಜಿಲ್ಲೆಯನ್ನು ಘೋಷಿಸಿದ ಸರ್ಕಾರ; ಹೊಸಪೇಟೆ ಕಾರ್ಯಸ್ಥಾನ!

ಬೆಂಗಳೂರು (ಫೆಬ್ರವರಿ 08); ಸಚಿವ ಆನಂದ್​ ಸಿಂಗ್ ಅವರ ಮನವಿಗೆ ಕೊನೆಗೂ ಮನ್ನಣೆ ನೀಡಿರುವ ರಾಜ್ಯ ಸರ್ಕಾರ ಬಳ್ಳಾರಿ ಜಿಲ್ಲೆಯನ್ನು ಒಡೆದು ಹೊಸ ವಿಜಯನಗರ ಜಿಲ್ಲೆಯನ್ನು ಇಂದು ವಿಧಾನ ಮಂಡಲ ಅಧಿವೇಶನದಲ್ಲಿ ಘೋಷಿಸಿದೆ. ಆ ಕುರಿತು ಅಧಿಕೃತ ಆದೇಶವನ್ನೂ ಸಹ ರಾಜ್ಯ ಸರ್ಕಾರ ಹೊರಡಿಸಿದೆ. ಹೊಸಪೇಟೆಯನ್ನು ಕಾರ್ಯಸ್ಥಾನವನ್ನಾಗಿಸಿ ವಿಜಯನಗರ ಎಂಬ ಹೊಸ ಜಿಲ್ಲೆಯನ್ನು ಘೋಷಿಸಬೇಕು ಎಂಬ ಕೂಗು ಬಹುದಿನಗಳಿಂದಲೂ ಇದೆ. ಕೊಪ್ಪಳವನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿದ ಸಂದರ್ಭದಲ್ಲೇ ಈ ಕೂಗು …

Read More »