ಮೈಸೂರು : ಮೈಸೂರು ವಿಶ್ವವಿದ್ಯಾಲಯ ವು 2020 ರ ಸೆಪ್ಟೆಂಬರ್ ನಲ್ಲಿ ನಡೆಸಲಾಗಿದ್ದಂತ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ಫಲಿತಾಂಶವನ್ನು ಇಂದು ( ಜನವರಿ 8) ರಂದು ಪ್ರಕಟ ಗೊಳಿಸಿದೆ. ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದ್ದು, 2020ರ ಸೆಪ್ಟೆಂಬರ್ ನಲ್ಲಿ ನಡೆದಿದ್ದ ಫಲಿತಾಂಶವನ್ನು ಜನವರಿ 8 ರಂದು www.kset.uni-mysore.ac.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ. ರಾಜ್ಯದ 11 ಕೇಂದ್ರಗಳಲ್ಲಿ 41 ವಿಷಯಗಳಿಗೆ 79,717 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 5,495 ಮಂದಿಗೆ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು …
Read More »Monthly Archives: ಜನವರಿ 2021
ಗವಿಮಠದ ಅಜ್ಜನ ಜಾತ್ರೆಯ ತೇರೆಳೆಯೋದು ಪಕ್ಕಾ; ಮೂರೇ ದಿನಕ್ಕೆ ಸೀಮಿತವಾಗಲಿದೆಯಾ ಜಾತ್ರಾ ಮಹೋತ್ಸವ!?
ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂದೇ ಖ್ಯಾತವಾಗಿರುವ ಕೊಪ್ಪಳ ಗವಿಮಠದ ಅಜ್ಜನ ಜಾತ್ರಾ ಮಹೊತ್ಸವದ ತೇರೆಳೆಯೋದು ಬಹುತೇಕ ಪಕ್ಕಾ ಆಗಿದೆ. ಅಧಿಕೃತವಾಗಿ ಈವರೆಗೆ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲವಾದರೂ ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಂಸದ ಕರಡಿ ಸಂಗಣ್ಣ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಮತ್ತು ರಾಘವೇಂದ್ರ ಹಿಟ್ನಾಳರವರು ಜಾತ್ರಾ ಮಹೋತ್ಸವ ಸಂಬಂಧ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಗವಿಮಠದ ಜಾತ್ರೆ, ಭಕ್ತರ ಜಾತ್ರೆ. ಭಕ್ತರ ತೀರ್ಮಾನವೇ ನಮ್ಮ …
Read More »ವ್ಯಾಯಾಮ ಮಾಡುವ ಮೂಲಕ ಕೆಎಎಸ್ ಅಧಿಕಾರಿಗಳ ಸಂಘದ ಜಿಮ್ ಉದ್ಘಾಟಿಸಿದ ಸಿಎಂ
ವ್ಯಾಯಾಮ ಮಾಡುವ ಮೂಲಕ ಕೆಎಎಸ್ ಅಧಿಕಾರಿಗಳ ಸಂಘದ ಜಿಮ್ ಉದ್ಘಾಟಿಸಿದ ಸಿಎಂ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ 2021ನೇ ವರ್ಷದ ದಿನಚರಿಯನ್ನು ಬಿಡುಗಡೆ ಮಾಡಿ ಶತಮಾನೋತ್ಸವ ಭವನಕ್ಕೆ ಶಂಕುಸ್ಥಾಪನೆ ಮಾಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು, ವ್ಯಾಯಾಮ ಮಾಡುವ ಮೂಲಕ ಜಿಮ್ ಉದ್ಘಾಟನೆ ಮಾಡಿದರು. ಈ ವೇಳೆ ವ್ಯಾಯಾಮ ಮಾಡುವ ಮೂಲಕವೇ ಜಿಮ್ ಉದ್ಘಾಟನೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು ಕಾರ್ಯಕ್ರಮದಲ್ಲಿ ಕೆಎಎಸ್ ಅಧಿಕಾರಿಗಳು ತಮಗೆ ನಿವೇಶನ ನೀಡುವಂತೆ …
Read More »ಎರಡ್ಮೂರು ದಿನಗಳಿಂದ ಅಕಾಲಿಕವಾಗಿ ಅಲ್ಲಲ್ಲಿ ಸುರಿಯುತ್ತಿರುವ ಚಳಿಗಾಲದ ಮಳೆ ಕೆಲ ಅವಾಂತರವನ್ನ ಸೃಷ್ಟಿಸುತ್ತಿದೆ.
ರಾಯಚೂರು: ಕಳೆದ ಎರಡ್ಮೂರು ದಿನಗಳಿಂದ ಅಕಾಲಿಕವಾಗಿ ಅಲ್ಲಲ್ಲಿ ಸುರಿಯುತ್ತಿರುವ ಚಳಿಗಾಲದ ಮಳೆ ಕೆಲ ಅವಾಂತರವನ್ನ ಸೃಷ್ಟಿಸುತ್ತಿದೆ. ಬಿಸಿಲನಾಡು ರಾಯಚೂರು ಈ ವರ್ಷ ಚಳಿ ಮಳೆಯನ್ನೇ ಹೆಚ್ಚು ಕಾಣುತ್ತಿದೆ. ಆದರೆ ಈಗ ಬದಲಾಗಿರುವ ವಾತಾವರಣ ಕೆಲ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಉತ್ತರ ಭಾರತದಲ್ಲಿನ ಚಳಿಗಾಲದ ಮಳೆ, ಪಶ್ಚಿಮದ ಗಾಳಿ, ಹಿಂದೂ ಮಹಾಸಾಗರದಿಂದ ಸುಳಿಗಾಳಿ ಬರುವುದು ವಾತಾವರಣದಲ್ಲಿ ಬದಲಾವಣೆ ತಂದಿದೆ. ಬಂಗಾಳ ಕೊಲ್ಲಿ ಸಮುದ್ರ ಮೇಲ್ಮೈನಲ್ಲಿನ ಸುಳಿಗಾಳಿಯೂ ರಾಜ್ಯದಲ್ಲಿನ ತುಂತುರು …
Read More »ಕಾಲೇಜು ಮುಂದೆ ಚೆನ್ನಾಗಿ ಕಾಣೋದಿಲ್ಲ ಅಂತ ಏಕಾಏಕಿ ಸರ್ಕಾರಿ ಪ್ರೌಢಶಾಲೆ ಶೌಚಾಲಯ ತೆರವು ವಿದ್ಯಾರ್ಥಿಗಳು ಆಕ್ರೋಶ
ರಾಯಚೂರು: ಕಾಲೇಜು ಮುಂದೆ ಚೆನ್ನಾಗಿ ಕಾಣೋದಿಲ್ಲ ಅಂತ ಏಕಾಏಕಿ ಸರ್ಕಾರಿ ಪ್ರೌಢಶಾಲೆ ಶೌಚಾಲಯವನ್ನ ತೆರವು ಮಾಡಿರುವ ಘಟನೆ ರಾಯಚೂರಿನ ಯರಮರಸ್ ಕ್ಯಾಂಪ್‍ನಲ್ಲಿ ನಡೆದಿದೆ. ಮಾಹಿತಿಯೂ ನೀಡದೇ ಶಾಲೆ ಇಲ್ಲದ ವೇಳೆ ಶೌಚಾಲಯ ತೆರವು ಮಾಡಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ. ರಾಯಚೂರು ಸರ್ಕಾರಿ ಇಂಜನಿಯರಿಂಗ್ ಕಾಲೇಜು ಗೇಟ್ ಗೆ ಎದುರುಗಡೆ ಇದೆ ಅಂತ ಏಕಾಏಕಿ ಶೌಚಾಲಯ ತೆರವು ಮಾಡಲಾಗಿದೆ. ಇಂಜಿನಿಯರಿಂಗ್ ಕಾಲೇಜ್ ಪ್ರಾಚಾರ್ಯರು ಪ್ರೌಢಶಾಲೆ ವಿದ್ಯಾರ್ಥಿಗಳ ಬಗ್ಗೆ …
Read More »ರಾಗಿಣಿ ದ್ವಿವೇದಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ವಾರಕ್ಕೆ ಮುಂದೂಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿ ಮತ್ತು ಪ್ರಕರಣ ನಂಬರ್ 1 ಆರೋಪಿ ಶಿವಪ್ರಕಾಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಒಗ್ಗೂಡಿಸಿ ನ್ಯಾ.ನಾಗೇಶ್ವರಾವ್ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆಗೂ ಮುನ್ನ ಅನಾರೋಗ್ಯ ಹಿನ್ನಲೆ …
Read More »ಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಅದರಲ್ಲಿಯೂ ಕ್ಷೇತ್ರದ ಮನೆಯ ಮಗಳಾಗಿ ಸಾರ್ಥಕತೆಯನ್ನು ಕಂಡಿದ್ದೇನೆ ” :ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಅದರಲ್ಲಿಯೂ ಕ್ಷೇತ್ರದ ಮನೆಯ ಮಗಳಾಗಿ ಸಾರ್ಥಕತೆಯನ್ನು ಕಂಡಿದ್ದೇನೆ “ ಸುಮಾರು ವರ್ಷಗಳಿಂದ ಅಪಘಾತ ವಲಯ (Accident Zone) ಅಂತಾನೇ ಕರೆಯಲ್ಪಡುವ ಚಿನ್ನವಾರಿ ಗುಡ್ಡ (ಕೆಕೆ ಕೊಪ್ಪ) ಈ ಪ್ರದೇಶದಲ್ಲಿ ತಡೆಗೊಡೆಗಳಿಲ್ಲದೆ ಸುಮಾರು ಅಪಘಾತಗಳು ಸಂಭವಿಸಿ ಕೆಲವರು ಕೈ ಕಾಲುಗಳನ್ನು ಕಳೆದುಕೊಂಡು ಕತ್ತಲೆಯ ಜೀವನವನ್ನು ಅನುಭವಿಸುತ್ತಿದ್ದಾರೆ, ಹಾಗೂ ಸುಮಾರು ರೈತರು ಟ್ರಾಕ್ಟರ್ ಮೂಲಕ ಕಬ್ಬನ್ನು ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಸಂದರ್ಭದಲ್ಲಿ ಅನೇಕ ಟ್ರಾಕ್ಟರ್ ಗಳು ಉರುಳಿ …
Read More »ಫೆಬ್ರವರಿ 14ಕ್ಕೆ ‘ಲವ್ ಮಾಕ್‌ಟೇಲ್ 2’ ಚಿತ್ರದ ಹಾಡು ಬಿಡುಗಡೆ
ನಟ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ನಟಿಸಿದ ‘ಲವ್ ಮಾಕ್‌ಟೇಲ್’ ಸಿನಿಮಾ ಸಿನಿ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಚಿತ್ರದ ಮೂಲಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಸಾಕಷ್ಟು ಜನಪ್ರಿಯತೆ ಪಡೆದರು. ಇದೀಗ ‘ಲವ್ ಮಾಕ್‌ಟೇಲ್ 2’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಇದರ ಸಾಂಗ್ ವೊಂದನ್ನು ಫೆಬ್ರವರಿ 14ರಂದು ರಿಲೀಸ್ ಮಾಡಲಿದ್ದಾರೆ. ‘ಲವ್ ಮೊಕ್ಟೈಲ್ 2’ಚಿತ್ರದ ರೊಮ್ಯಾಂಟಿಕ್ ಹಾಡೊಂದನ್ನು ರಿಲೀಸ್ ಮಾಡುವ ಮೂಲಕ ಪ್ರೇಮಿಗಳ ದಿನದಂದು ಉಡುಗೊರೆಯಾಗಿ …
Read More »ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ ಹಾಗೂ ಕಾನ್ಸ್ಟೇಬಲ್
ಬೆಂಗಳೂರು: ಜಮೀನುದಾರರೊಬ್ಬರ ಬಳಿ ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದ ರೆವಿನ್ಯೂಇನ್ಸ್ ಪೆಕ್ಟರ್ ಹಾಗೂ ಚಿಕ್ಕಜಾಲ ಹೆಡ್ ಕಾನ್ಸ್ಟೇಬಲ್ ರಾಜು ಎಂಬುವವರನ್ನು ಎಸಿಬಿ ಅಧಿಕಾರಿಗಳು ಭರ್ಜರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ವ್ಯಾಜ್ಯ ಪ್ರಕರಣದಲ್ಲಿ ಸಿಲುಕಿದ್ದರು. ಇದನ್ನು ಇತ್ಯರ್ಥಪಡಿಸಲು ಆರ್ ಐ ಪುಟ್ಟಹನುಮಯ್ಯ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಜೊತೆಗೆ ಜಮೀನಿನ ವಿಚಾರಕ್ಕೆ ಸಂಬಂಧಪಟ್ಟಂತೆ ರಕ್ಷಣೆ ನೀಡಲು ಹೆಡ್ ಕಾನ್ಸ್ಟೇಬಲ್ ರಾಜು 6 ಲಕ್ಷ ಹಣದ ಬೇಡಿಕೆ …
Read More »ಬೆಂಗಳೂರಿನ ಸ್ಲಿಪ್ ಕಾರ್ಟ್ ಮತ್ತು ಸ್ವಿಗ್ಗಿ ಸಂಸ್ಥೆಗಳ ಮೇಲೆ ಐಟಿ ದಾಳಿ
ಬೆಂಗಳೂರು : ಇಂದು ಸ್ಲಿಪ್ ಕಾರ್ಟ್ ಮತ್ತು ಸ್ವಿಗ್ಗಿ ಸಂಸ್ಥೆಗಳ ಬೆಂಗಳೂರಿನ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ಶೋಧಿಸಿದರು. ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಸ್ಥಳೀಯವಾಗಿ ಆಹಾರ ವಿತರಣೆ ಮಾಡುವ ಸ್ವಗ್ಗಿ ಹಾಗೂ ಅಮೆರಿಕದ ವಾಲ್‌ಮಾರ್ಟ್ ಒಡೆತನದ ಫಿಪ್‌ಕಾರ್ಟ್ ಯಲ್ಲಿ ಮೂರನೇ ವ್ಯಕ್ತಿಗಳಿಂದ ತೆರಿಗೆ ವಂಚನೆ ಆಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ …
Read More »