Breaking News

Monthly Archives: ಜನವರಿ 2021

ಮುಂದಿನ ಮಳೆಗಾಲದಲ್ಲಿ ವೇದಾವತಿ ಕಣಿವೆಯಿಂದ ವಾಣಿ ವಿಲಾಸ ಜಲಾಯಶಕ್ಕೆ ನೀರು : ಸಚಿವ ರಮೇಶ್ ಜಾರಕಿಹೊಳಿ

ಹಾಸನ : ಮುಂದಿನ ಮಳೆಗಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ವೇದಾವತಿ ಕಣಿವೆ ಮೂಲಕ ತಾತ್ಕಾಲಿಕವಾಗಿ ನೀರು ಹರಿಸಲಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಜಿಲ್ಲೆಯ ಬೇಲೂರು ತಾಲ್ಲೂಕಿನ ಎತ್ತಿನಹೊಳೆ ಯೋಜನಾ ಕಾಮಗಾರಿಯನ್ನು ಶುಕ್ರವಾರ ಪರಿವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಹಂತ-1ರ ಕಾಮಗಾರಿಗಳು ಮತ್ತು ಹಂತ-2ರ 33 ಕಿ.ಮೀ.ವರೆಗಿನ ಗುರುತ್ವಾ ಕಾಲುವೆ ಕಾಮಗಾರಿಗಳನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದರು. ಪ್ರಾಯೋಗಿಕ ನೀರನ್ನು …

Read More »

ನನಗೂ ಸಿಎಂ ಆಗುವ ಆಸೆ ಇದೆ : ಸಚಿವ ಉಮೇಶ ಕತ್ತಿ

ತುಮಕೂರು : ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಸೀನಿಯರ್ ಇದಾರೆ. ಅವರಿಗಿಂತ ನಾನು ಸೀನಿಯರ್ ಇದ್ದೇನಿ. ಸಿಎಂ ಸ್ಥಾನಕ್ಕೆ ಯತ್ನಾಳ ಹಾಗೂ ನನಗೆ ಪೈಪೋಟಿ ನಡೆಯಲಿ ಎಂದು ನೂತನ ಸಚಿವ ಉಮೇಶ ಕತ್ತಿ ಹಾಸ್ಯವಾಗಿ ಹೇಳಿದರು. ತುಮಕೂರು ಸಿದ್ದಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿಯಲ್ಲಿ 75 ವರ್ಷದವರೆಗೂ …

Read More »

15 ಕೋಟಿ ರೂ. ವೆಚ್ಚದ ಗೋಸಬಾಳ ಗ್ರಾಮದಲ್ಲಿ 110 ಕೆವ್ಹಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಹೊಸ 110 ಕೆವ್ಹಿ ವಿದ್ಯುತ್ ಉಪಕೇಂದ್ರ ನಿರ್ಮಾಣದ ಬಳಿಕ ಈ ಭಾಗದ ಎಲ್ಲಾ ಗ್ರಾಮಗಳ ಸಾರ್ವಜನಿಕರಿಗೆ ನಿಗದಿತ ಪ್ರಮಾಣದ ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರದಂದು ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಕೆಪಿಟಿಸಿಎಲ್‍ನಿಂದ 15.09 ಕೋಟಿ ರೂ. ವೆಚ್ಚದ 110 ಕೆವ್ಹಿ ಉಪಕೇಂದ್ರ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ …

Read More »

ಗೋಕಾಕ್ : ಪೊಲೀಸ್ ಇಲಾಖೆಯಿಂದ ಸೇವೆ ಅವಶ್ಯಕತೆ ಇದ್ದಾಗ 112 ಸಂಖ್ಯೆಗೆ ಕರೆ ಮಾಡಿ ತುರ್ತು ಸಹಾಯ ಪಡೆಯಬಹುದೆಂದು.ಡಿ ವಾಯ್ ಎಸ್ ಪಿ ಜಾವೀದ್ ಇನಾಮದಾರ ಹೇಳಿದರು.

  ತುರ್ತು ಪರಿಸ್ಥಿತಿಗೆ 112 ಸಂಖ್ಯೆಗೆ ಕರೆ (24 Jan 2021 ,06 ತುರ್ತು ಸ್ಪಂದನಾ ವಾಹನಗಳನ್ನು ಚಾಲನೆ)   ಗೋಕಾಕ್ : ಪೊಲೀಸ್ ಇಲಾಖೆಯಿಂದ ಸೇವೆ ಅವಶ್ಯಕತೆ ಇದ್ದಾಗ 112 ಸಂಖ್ಯೆಗೆ ಕರೆ ಮಾಡಿ ತುರ್ತು ಸಹಾಯ ಪಡೆಯಬಹುದೆಂದು.ಡಿ ವಾಯ್ ಎಸ್ ಪಿ ಜಾವೀದ್ ಇನಾಮದಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾರ್ವಜನಿಕರು ಯಾವುದೇ ಅವಘಡಗಳು ಸಂಭವಿಸಿದಾಗ ಅಥವಾ ಎಂಥದೆ ತುರ್ತು ಪರಿಸ್ಥಿತಿ ಎದುರಾದಾಗ ಇನ್ನು ಮುಂದೆ 112 …

Read More »

ಹಿರೇಬಾಗೇವಾಡಿ ಟೋಲ್ ಬಳಿ ಕರವೇ ಯುವಸೇನೆ ದಾಳಿ: ಶಿವಸೇನೆ ಪುಂಡಾಟ ಖಂಡಿಸಿ ಘೋಷಣೆ, ಕನ್ನಡಮ್ಮನಿಗೆ ಉರುಳು ಸೇವೆ

ಬೆಳಗಾವಿ ಗಡಿಯಲ್ಲಿ ಶಿವಸೇನೆ ಪುಂಡಾಟ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಬೆಳಗಾವಿ ಚಲೋ ಕರೆ ನೀಡಿದ್ದು, ನಾನಾ ಜಿಲ್ಲೆಗಳಿಂದ 30 ವಾಹನಗಳಲ್ಲಿ ಬೆಳಗಾವಿಗೆ ಬಂದಿದ್ದಾರೆ. ಬೆಳಗಾವಿ ಹಿರೇಬಾಗೇವಾಡಿ ಟೋಲ್ ಗೇಟ್‍ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಗಾರರನ್ನ ಪೆÇಲೀಸರು ತಡೆದಿದ್ದಾರೆ. ಗಡಿಯಲ್ಲಿ ಭಗವಾ ಧ್ವಜ ಹಿಡಿದು ಬೆಳಗಾವಿಯತ್ತ ಹೊರಟಿದ್ದ ಶಿವಸೇನೆ ಕಾರ್ಯಕರ್ತರ ಪುಂಡಾಟ, ಪೊಲೀಸರೊಂದಿಗೆ ನೂಕಾಟ ತಳ್ಳಾಟ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಬೆಳಗಾವಿ ಚಲೋ …

Read More »

ಮಿತ್ರಮಂಡಳಿ ಅದೆಲ್ಲಾ ಹಳೆ ಕಥೆ..ಈಗ ನಾವೆಲ್ಲಾ ಒಂದೇ..ರಮೇಶ ಜಾರಕಿಹೊಳಿ

ಬಿಜೆಪಿಯ ಎಲ್ಲಾ ಶಾಸಕ ಮಿತ್ರರು, ಸಚಿವರು ಒಟ್ಟಾಗಿದ್ದೇವೆ. ಮಿತ್ರಮಂಡಳಿ ಅದೆಲ್ಲಾ ಹಳೆ ಕಥೆ, ಈಗ ನಾವೆಲ್ಲಾ ಒಂದೇ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಖಾತೆ ಹಂಚಿಕೆಯಲ್ಲ ಅಸಮಾಧಾನ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬೆಂಗಳೂರಿನಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ ಸುಧಾಕರ್ ಜೊತೆ ಈ ಸಂಬಂಧ ದೂರವಾಣಿ ಮೂಲಕ ಮಾತನಾಡಿದ್ದೇನೆ. ಮುನಿರತ್ನ ಜೊತೆ ಮಾತನಾಡಬೇಕಿತ್ತು. ಆದ್ರೆ ಎತ್ತಿನಹೊಳೆ ಯೋಜನೆ ವೀಕ್ಷಣೆಗೆ ತೆರಳುತ್ತಿದ್ದೇನೆ. ಸಾಯಂಕಾಲ ಬಂದು …

Read More »

ಗೋಕತ್ತರಿಸಿ ಮಾರಾಟ ಮಾಡುತ್ತಿದ್ದವನು ಬಂಧನ

ಗೋ ಕತ್ತರಿಸಿ, ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಬಂಧಿಸಿರುವ ಘಟನೆ ನಡೆದಿದೆ. ಗೋ ಹತ್ಯೆ ನಿಷೇಧ ಕಾಯ್ದೆಯಡಿ ಬಂಧಿಸಲಾಗಿದ್ದು ವಿಜಯಪುರ ಜಿಲ್ಲೆಯ ಕೂಡಗಿ ಗ್ರಾಮದ ಸಿಕಂದರಸಾಬ ರಾಜೇಸಾಬ ಬೇಪಾರಿ (35) ಬಂಧಿತ ಆರೋಪಿಯಾಗಿದ್ದು ಸಿಕಂದರಸಾಬ ಬೇಪಾರಿ ಕೊಲ್ಹಾರ ಸಂತೆಯಲ್ಲಿ ರೈತನಿಂದ ಗೋ ಖರೀದಿಸಿದ್ದ ಖಚಿತ ಮಾಹಿತಿ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಾಗೂ ಪೊಲೀಸರು ಕಸಾಯಿಖಾನೆ ಸ್ಥಳಕ್ಕೆ ತೆರಳಿ, ಆರೋಪಿಯ ಬಂಧಿಸಿ ಇನ್ನೊಂದು ಗೋ ರಕ್ಷಣೆ ಮಾಡಿದ್ದಾರೆ. ಪಿಎಸ್‌ಐ …

Read More »

KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ

  ಸ್ಯಾಂಡಲ್ ವುಡ್ ನ ಹಿರಿಯ ನಟಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅಧ್ಯಕ್ಷೆ ಆಗಿರುವ ಶ್ರುತಿ ಇತ್ತೀಚಿಗೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸ್ತ್ರೀ ಶೌಚಾಲಯವನ್ನು ಪರಿಶೀಲನೆ ನಡೆಸಿದರು. ಕೆ ಎಸ್ ಆರ್ ಟಿ ಸಿ ನಿಗಮ ಬಸ್ ಅನ್ನು ಬಳಸಿ ನಿರ್ಮಿಸಿರುವ ವಿಶೇಷ ಸ್ತ್ರೀ ಶೌಚಾಲಯದ ಬಳಕೆ ಹಾಗೂ ಮಹಿಳೆಯರಿಗೆ ಆಗುವ ಅನುಕೂಲದ ಬಗ್ಗೆ ಮಾಹಿತಿ ಪಡೆದರು. ಇದೇ ಸಮಯದಲ್ಲಿ …

Read More »

ಶಿವಮೊಗ್ಗ ಹುಣಸೋಡು ಗ್ರಾಮದಲ್ಲಿ ಭಾರೀ ಅವಘಡ ಸಂಭವಿಸಿದ್ದು, ಸಾವು- ನೋವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಂತಾಪ ಸೂಚಿಸಿ, ಸರ್ಕಾರಕ್ಕೆ ಆಗ್ರಹವೊಂದನ್ನು ಮಾಡಿದ್ದಾರೆ.

ಬೆಂಗಳೂರು: ಶಿವಮೊಗ್ಗ ಹುಣಸೋಡು ಗ್ರಾಮದಲ್ಲಿ ಭಾರೀ ಅವಘಡ ಸಂಭವಿಸಿದ್ದು, ಸಾವು- ನೋವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಂತಾಪ ಸೂಚಿಸಿ, ಸರ್ಕಾರಕ್ಕೆ ಆಗ್ರಹವೊಂದನ್ನು ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕಿಚ್ಚ, ಶಿವಮೊಗ್ಗದ ಹುಣಸೋಡಿನಲ್ಲಿ ಮೃತಪಟ್ಟ ಕಾರ್ಮಿಕರ ಅತ್ಮಕ್ಕೆ ಶಾಂತಿಸಿಗಲಿ, ಪ್ರತಿ ಪ್ರಾಣವು ಅಮೂಲ್ಯ ಸರ್ಕಾರ ಅಗತ್ಯ ಕ್ರಮ ತಗೆದು ಕೊಳ್ಳಲಿ ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಬಳಸಿ ಮೊದಲುಮಾನವನಾಗು ಎಂದು ಹೇಳಿ …

Read More »

ಮಾರ್ಚ್ ನಂತರ ಹಳೆಯ 100ರೂಪಾಯಿ ನೋಟು ಗಳು ಚಲಾವಣೆ ಯಲ್ಲಿರುವುದಿಲ್ಲ ನಿಮ್ಮ ಹತ್ತಿರ ಇದ್ರೆ ಮಾರ್ಚ್ ಒಳಗಡೆ ಬದಲಾಯಿಸಿ ಕೊಳ್ಳಿ: R.B.I

ಬೆಂಗಳೂರು : ಪ್ರಸ್ತುತ ಚಲಾವಣೆಯಲ್ಲಿರುವ ಹಳೆಯ 100 ರೂ. ನೋಟುಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣವಾಗಿ ಹಿಂಪಡೆಯಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಕಳೆದ 6 ವರ್ಷಗಳಿಂದ ಮುದ್ರಣವಾಗದ, ಆದರೆ ಚಲಾವಣೆಯಲ್ಲಿರುವ ಹಳೆಯ ನೋಟುಗಳನ್ನು ಹಂತ ಹಂತವಾಗಿ ಹಿಂಪಡೆಯಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ಇದು ಪೂರ್ಣವಾಗಲಿದೆ. ಇನ್ಮುಂದೆ 100 ರೂ. ಮುಖಬೆಲೆಯ ಹೊಸ ನೋಟುಗಳು ಮಾತ್ರ ಚಲಾವಣೆಯಲ್ಲಿರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. 00 ರೂ. ನಹಳೆಯ ನೋಟುಗಳನ್ನು ಗ್ರಾಹಕರು …

Read More »