Breaking News

Monthly Archives: ಜನವರಿ 2021

ಗೋಕಾಕ: ನಗರದ ತಾಲೂಕಾ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ಆಶ್ರಯದಲ್ಲಿ ಜರುಗಿದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರು ಮಾತನಾಡುತ್ತಿರುವುದು.

ಗೋಕಾಕ: ಗಣರಾಜ್ಯವು ದೇಶದ ನಾಗರೀಕರಿಗೆ ತನ್ನ ರಾಷ್ಟ್ರದ ಜವಾಬ್ದಾರಿಯನ್ನು ನೀಡಿದ ದಿನವಾಗಿದ್ದು, ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರವನ್ನು ಕಲ್ಪಿಸಿಕೊಟ್ಟ ಮಹತ್ವದ ದಿನವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು. ಮಂಗಳವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಹಾಗೂ ನಗರಸಭೆ ಇವುಗಳ ಆಶ್ರಯದಲ್ಲಿ ಜರುಗಿದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಗಣತಂತ್ರವು ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ನೀಡುವುದರ ಮೂಲಕ ಮೂಲಭೂತ ಹಕ್ಕುಗಳನ್ನು ನೀಡಿದೆ ಎಂದು ತಿಳಿಸಿದರು. …

Read More »

ಬಿಡುವಿಲ್ಲದೆ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ, ಗ್ರಾಹಕರು ಕಂಗಾಲು

ನವದೆಹಲಿ: ತೈಲ ದರ ಏರಿಕೆಗೆ ಬಿಡುವಿಲ್ಲದಂತಾಗಿ, ಮಂಗಳವಾರ ಸಹ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 35 ಪೈಸೆ ಏರಿಕೆಯಾಗಿ ಗ್ರಾಹಕರು ದಾರಿ ಕಾಣದೆ ಪರಿತಪಿಸುವಂತಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಗೆ 86ರ ಗಡಿಯನ್ನು ದಾಟಿದೆ ಡೀಸೆಲ್ ದರವು ಕಳೆದ ಒಂದು ವರ್ಷದಲ್ಲಿ ಗರಿಷ್ಠ ಏರಿಕೆ ಕಂಡು ಲೀಟರ್ ಗೆ 76ಕ್ಕಿಂತಲೂ ಹೆಚ್ಚಿದೆ. ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ …

Read More »

72ನೇ ಗಣರಾಜ್ಯೋತ್ಸವ: ಗೂಗಲ್​ ಡೂಡಲ್​ದಲ್ಲಿ ಭಾರತದ ಪರಂಪರೆ ಪ್ರದರ್ಶನ

ನವದೆಹಲಿ: ರಾಷ್ಟ್ರದ 72ನೇ ಗಣರಾಜ್ಯೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ಪ್ರಪಂಚದ ಜನಪ್ರಿಯ ಸರ್ಚ್ ಎಂಜಿನ್ ಗೂಗಲ್ ಸಹ ಗಣರಾಜ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ್ದು, ದೇಶದ ಕಲೆ ಮತ್ತು ವಾಸ್ತುಶಿಲ್ಪ, ಸಾಂಸ್ಕೃತಿಕ ಮತ್ತು ಏಕತೆಯ ಪರಂಪರೆಯನ್ನು ಡೂಡಲ್‌ನಲ್ಲಿ ಗೂಗಲ್ ಕಟ್ಟಿಕೊಟ್ಟಿದೆ. ಡೂಡಲ್ ಕಲಾಕೃತಿಯಲ್ಲಿ ಕೆಂಪು ಕೋಟೆ ಸೇರಿದಂತೆ ದೇಶದ ಐತಿಹಾಸಿಕ ಕಟ್ಟಡಗಳು, ರಾಷ್ಟ್ರಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮುಂಭಾಗದಲ್ಲಿ ದೇಶದ ವಿವಿಧ ಸಂಸ್ಕೃತಿಯ ಜನರನ್ನು ಪ್ರದರ್ಶಿಸುತ್ತಿದೆ. ಗೂಗಲ್ ಎಂಬ ಪದದ …

Read More »

ಟ್ರ್ಯಾಕ್ಟರ್ ಭದ್ರಕೋಟೆ ಭೇದಿಸಲು ಬೆಂಗಳೂರು ಪೊಲೀಸರು ಚಕ್ರವ್ಯೂಹ

ಬೆಂಗಳೂರು, ಜ.26- ರೈತರ ಟ್ರ್ಯಾಕ್ಟರ್ ಭದ್ರಕೋಟೆ ಭೇದಿಸಲು ನಗರದಲ್ಲಿ ಪೊಲೀಸ್ ಚಕ್ರವ್ಯೂಹ ರಚಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ದೇಶಾದ್ಯಂತ ರೈತರು ಇಂದು ಟ್ರಾಕ್ಟರ್ ರ್ಯಾಲಿ ನಡೆಸುತ್ತಿದ್ದು, ನಗರದ ಆರು ಮಾರ್ಗಗಳ ಮೂಲಕ ರೈತರು ಫ್ರೀಡಂ ಪಾರ್ಕ್ ತಲುಪುತ್ತಿದ್ದಾರೆ. ನಗರಕ್ಕೆ ಟ್ರಾಕ್ಟರ್ ಪ್ರವೇಶಿಸಲು ಬೆಂಗಳೂರು ಪೊಲೀಸರು ಅವಕಾಶ ನಿರಾಕರಿಸಿದ್ದು, ಹೊರ ವಲಯಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಿ ಟ್ರಾಕ್ಟರ್ ಜೊತೆ ಆಗಮಿಸುವ ರೈತರನ್ನು ಗಡಿಯಲ್ಲೇ ತಡೆಯಲಾಗುತ್ತಿದೆ. ಮೈಸೂರು ಮಾರ್ಗ: ಮೈಸೂರು …

Read More »

ಪ್ರತಿಭಟನೆ ನಡೆಸುತ್ತಿರುವವರು ಭಯೋತ್ಪದಕರು, ಅವರಿಗೆ ಪಾಕಿಸ್ತಾನ ಸಪೋರ್ಟ್‌ ಇದೇ: ಬಿ.ಸಿ ಪಾಟೀಲ್‌

ಕೊಪ್ಪಳ: ನವದೆಹಲಿಯ ಕೆಂಪುಕೋಟೆಗೆ ರೈತರು ನುಗ್ಗಿ ರೈತರು ಬೇರೆ ಧ್ವಜವೊಂದು ಹಾರಿಸಿದ್ದಾರೆ. ಈ ನಡುವೆ ರಾಜ್ಯದಲ್ಲೂ ಕೂಡ ರೈತರ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇವರಲ್ಲದರ ನಡುವೆ ಸಚಿವ ಬಿ.ಸಿ ಪಾಟೀಲ್‌ ರೈತರ ಪ್ರತಿಭಟನೆಗೆ ಸಂಬಂಧಪಟ್ಟಂತೆ ನೀಡಿರುವ ಹೇಳಿಕೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಭಯೋತ್ಪದಕರು, ಅವರಿಗೆ ಪಾಕಿಸ್ತಾನ ಸಪೋರ್ಟ್‌ ಇದೇ ಅನ್ನುವುದರ ಮೂಲಕ ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದರು, ಇದೇ …

Read More »

ಪೊಲೀಸರ ಜೊತೆ ರೈತರ ವಾಗ್ವಾದ

ಮಂಡ್ಯ : ಬೆಂಗಳೂರಿನಲ್ಲಿ ರೈತರ ಟ್ರ್ಯಾಕ್ಟರ್ ಪೆರೇಡ್ ಹಿನ್ನೆಲೆ, ಜಿಲ್ಲೆಯ ರೈತರು ತಮ್ಮ ಟ್ರ್ಯಾಕ್ಟರ್ ಜೊತೆಗೆ ತೆರಳುತ್ತಿದ್ದರು. ಆದ್ರೇ ಹೀಗೆ ತೆರಳುತ್ತಿದ್ದಂತ ಮದ್ದೂರಿನ ಬಳಿ ರೈತರು ಸೇರಿ ಟ್ರ್ಯಾಕ್ಟರ್ ಗಳನ್ನು ಮದ್ದೂರು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಇದರಿಂದಾಗಿ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದವೇ ನಡೆದಿರುವ ಘಟನೆ ನಡೆದಿದೆ. ಇಂದು ರೈತರ ಟ್ರ್ಯಾಕ್ಟರ್ ಪೆರೇಡ್ ನಲ್ಲಿ ಭಾಗವಹಿಸಲು ಮಂಡ್ಯದಿಂದ ಬೆಂಗಳೂರಿನತ್ತ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದಂತ ರೈತರನ್ನು ಮದ್ದೂರು ಪೊಲೀಸರು, ಮದ್ದೂರಿನ …

Read More »

ಮಧ್ಯರಾತ್ರಿಯಲ್ಲಿ ಒಂಟಿಯಾಗಿ ಆಟೋ ಹತ್ತಿದ್ದ ಕಾಲೇಜ್ ವಿದ್ಯಾರ್ಥಿ.. ನಂತರ ಆಟೋ ಡ್ರೈವರ್ ಏನು ಮಾಡಿದ್ದಾರೆ ಗೊತ್ತಾ?

ನಮಸ್ತೆ ಸ್ನೇಹಿತರೆ, ಈ ಪ್ರಪಂಚದಲ್ಲಿ ಅಲ್ಲಲ್ಲಿ ಒಳ್ಳೆಯ ವ್ಯಕ್ತಿಗಳು ಕೂಡ ಇರುತ್ತಾರೆ. ಹಾಗೆಯೆ ಆಟೋ ಡ್ರೈವರ್ ಗಳು ಅಂದರೇನೆ ಮೀಟರ್ ಮೇಲೆ ಜ್ಯಾಸ್ತಿ ದುಡ್ಡು ಕೇಳೋದು.. ಸರಿಯಾದ ಸಮಯಕ್ಕೆ ಸರಿಯಾದ ಜಾಗಕ್ಕೆ ಬರೋದಿಲ್ಲ ಎಂಬ ಕಂಪ್ಲೇಂಟ್ ಗಳು ಹೇಳುತ್ತಿರುತ್ತಾರೆ. ಆದರೆ ಎಲ್ಲರೂ ಇದೇ ರೀತಿ ಇರುವುದಿಲ್ಲ.. ಕೆಲವು ಆಟೋ ಡ್ರೈವರ್ ಗಳು ಕೂಡ ಒಳ್ಳೆಯ ರೀತಿಯಲ್ಲಿ ಇರುತ್ತಾರೆ. ಹಾಗೆ ಇಲ್ಲಿ ಒಬ್ಬ ಆಟೋ ಡ್ರೈವರ್ ತನ್ನ ಒಳ್ಳೆಯ ತನದಿಂದ ಎಲ್ಲರ …

Read More »

ಸಾಮಾಜಿಕ ಅಂತರ, ಚಿಕ್ಕ ರೂಟ್​​ನಲ್ಲಿ 72ನೇ ಗಣರಾಜ್ಯೋತ್ಸವ ಪರೇಡ್; ರಫೇಲ್​ ಪ್ರಮುಖ ಆಕರ್ಷಣೆ

ನವದೆಹಲಿ: ಇಂದು ಭಾರತದ 72ನೇ ಗಣರಾಜ್ಯೋತ್ಸವ. ಈ ಬಾರಿ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಗಣರಾಜ್ಯೋತ್ಸವ ಸಮಾರಂಭವನ್ನ ಸಂಕ್ಷಿಪ್ತವಾಗಿ ನಡೆಸಲಾಗ್ತಿದೆ. ದೆಹಲಿಯ ಕೆಂಪುಕೋಟೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಬೆಳಗ್ಗೆ 11.25 ಕ್ಕೆ ಮುಕ್ತಾಯಗೊಳ್ಳಲಿದೆ. ರಾಜ್​ಪಥ್​​ನಲ್ಲಿ ನಡೆಯಲಿರುವ ಪಥಸಂಚಲನದ ಮಾರ್ಗವನ್ನ ಕಡಿತಗೊಳಿಸಲಾಗಿದೆ. ಹಾಗೇ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಇಲ್ಲ. ಕಡಿಮೆ ಸಂಖ್ಯೆಯ ಪ್ರೇಕ್ಷಕರು ಮಾತ್ರ ಪರೇಡ್​ ವೀಕ್ಷಿಸಲಿದ್ದಾರೆ. 15 ವರ್ಷದೊಳಗಿನ ಮಕ್ಕಳಿಗೆ ಕಾರ್ಯಕ್ರಮಕ್ಕೆ ಬರಲು ಅವಕಾಶ …

Read More »

ಮುಖ್ಯ ಅತಿಥಿಯಿಲ್ಲದೆ ಗಣರಾಜ್ಯೋತ್ಸ, 50 ವರ್ಷಗಳಲ್ಲಿ ಇದೇ ಮೊದಲು

ನವದೆಹಲಿ, ಜ.26- ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಇಲ್ಲದೇ ಆಚರಿಸಲ್ಪಟ್ಟಿರುವ ಪ್ರಥಮ ಗಣರಾಜ್ಯೋತ್ಸವ ಇದಾಗಿದೆ. ವಿಶ್ವದ್ಯಾಂತ ಕೊರೊನಾ ಸಾಂಕ್ರಾಮಿಕ ವ್ಯಾಪಿಸಿರುವ ಕಾರಣ ಅತಿಥಿಯ ಅನುಪಸ್ಥಿತಿಯಲ್ಲಿ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. 50 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ಅನಿವಾರ್ಯತೆ ಕಂಡುಬಂತು. ಯುಕೆ ಪ್ರಧಾನ ಮಂತ್ರಿ ಬೋರಿಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿತ್ತು. ಆದರೆ, ಕೋವಿಡ್-19 ಸಾಂಕ್ರಾಮಿಕ ಮಹಾಮಾರಿ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸುವ …

Read More »

ಗೋಕಾಕ ಹಿಲ್ ಗಾರ್ಡನ್ ಕಚೇರಿಯಲ್ಲಿ 72ನೇ ಗಣರಾಜೋತ್ಸವ ಆಚರಣೆ

ಗೋಕಾಕ್ : ಪಟ್ಟಣದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಹಿಲ್ ಗಾರ್ಡನ್ ಕಚೇರಿಯಲ್ಲಿ 72ನೇ ಗಣರಾಜೋತ್ಸವವನ್ನು ಅದ್ಧೂರಿಯಾಗಿ ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಠ್ಠಲ ಪರಸಣ್ಣವರ, ವಿವೇಕ ಜತ್ತಿ, ಪಾಡು ರಂಗಸೂಭೆ,ಪ್ರಕಾಶ ಬಸಾಪುರ , ಸುರೇಶ್ ಸೇರಿದಂತೆ ಇತರರು ಇದ್ದರು.

Read More »