ಛತ್ರಪತಿ ಸಂಭಾಜಿ ಮಹಾರಾಜರು ಇರದಿದ್ದರೆ ನಾವೆಲ್ಲರೂ ಹಿಂದೂಗಳಾಗಿ ಇರುತ್ತಿರಲಿಲ್ಲ
ಜಾತಿ ಭಾಷೆಯನ್ನು ಬದಿಗಿಟ್ಟು ಹಿಂದೂಗಳೆಲ್ಲರೂ ಒಂದಾಗಿ; ಎಂ.ಎಲ್.ಸಿ ಸಿ.ಟಿ. ರವಿ
ಛತ್ರಪತಿ ಸಂಭಾಜಿ ಮಹಾರಾಜರು ಇರದಿದ್ದರೆ ನಾವೆಲ್ಲರೂ ಹಿಂದೂಗಳಾಗಿ ಇರುತ್ತಿರಲಿಲ್ಲ. ಜಾತಿ ಭಾಷೆಯನ್ನು ಬದಿಗಿಟ್ಟು ನಾವೆಲ್ಲರೂ ಹಿಂದೂ ಎಂದು ಒಗ್ಗೂಡಬೇಕು. ನಮ್ಮೆಲ್ಲರ ಜಾತಿ ಬೇರೆ ಇದ್ದರು ಸಂಸ್ಕೃತಿ ಒಂದೇ ಆಗಿದೆ. ಬಟೆಂಗೆ ತೋ ಕಟೆಂಗೆ ಏಕ ರಹೇಂಗೇ ತೋ ಸೆಫ ರಹೇಂಗೇ ಎಂದು ಎಂ.ಎಲ್.ಸಿ ಸಿ.ಟಿ ರವಿ ಹೇಳಿದರು.
ಬೆಳಗಾವಿಯ ಕಂಗ್ರಾಳಿ ಬಿ.ಕೆ.ಯಲ್ಲಿ ನೂತನವಾಗಿ ಸ್ಥಾಪಿಸಲಾದ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿಯ ಅನಾವರಣವನ್ನು ಎಂ.ಎಲ್.ಸಿ ಸಿ ಟಿ ರವಿ ಹಾಗೂ ವಿವಿಧ ಕ್ಷೇತ್ರದ ಪ್ರಮುಖ ಮುಖಂಡರು ನೆರವೇರಿಸಿದರು.
ಈ ವೇಳೆ ಮಾತನಾಡಿದ ಎಂ.ಎಲ್.ಸಿ ಸಿ ಟಿ ರವಿ ಜಿ ಛತ್ರಪತಿ ಸಂಭಾಜಿ ಮಹಾರಾಜರು ಇರದಿದ್ದರೆ ನಾವೆಲ್ಲರೂ ಹಿಂದೂವಯಾಗಿ ಇರುತ್ತಿರಲಿಲ್ಲ ಜಾತಿ ಭಾಷೆಯನ್ನು ಬದಿಗಿಟ್ಟು ನಾವೆಲ್ಲರೂ ಹಿಂದೂ ಎಂದು ಒಗ್ಗೂಡಬೇಕು. ನಮ್ಮೆಲ್ಲರ ಜಾತಿ ಬೇರೆ ಇದ್ದರು ಸಂಸ್ಕೃತಿ ಒಂದೇ ಆಗಿದೆ ಹಾಗೂ” ಬಟೆಂಗೆ ತೋ ಕಟೆಂಗೆ ಏಕ ರಹೇಂಗೇ ತೋ ಸೆಫ ರಹೇಂಗೇ” ಎಂದರು. ಛತ್ರಪತಿ ಶಿವಾಜೀ ಮಹಾರಾಜರನ್ನು ರಾಷ್ಟ್ರೀಯ ನಾಯಕರನ್ನಾಗಿ ಘೋಷಿಸಬೇಕು ಎಂದರು.
ವೇದಿಕೆಯ ಮೇಲೆ ಬೆಳಗಾವಿ ಬಿಜೆಪಿ ಗ್ರಾಮೀಣ ಮಂಡಳ ಮಾಜಿ ಅಧ್ಯಕ್ಷ ಧನಂಜಯ ಜಾದವ್ ಸಮಿತಿಯ ಮುಖಂಡರಾದ ಶುಭಂಮ ಶೇಳಕೆ, ಶ್ರೀ ಶಿವ ಪ್ರತಿಷ್ಠಾನದ ಮುಖಂಡರಾದ ಹಿರಾಮಣಿ ಮುಚ್ಚಂಡಿ, ವಕೀಲರಾದ ಸುಧೀರ್ ಚೌಹಾಣ್ ಹಾಗೂ ಪ್ರಮುಖರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಹಾಗೂ ಬಿಜೆಪಿ ಮುಖಂಡರಾದ ಪ್ರದೀಪ್ ಪಾಟೀಲ್, ಯಲ್ಲೋಜಿ ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸದಸ್ಯರು ಹಾಗೂ ಬಹು ಸಂಖ್ಯೆಯಲ್ಲಿ ಗ್ರಾಮಸ್ಥರು ಯುವಕರು ಹಿಂದೂ ಬಾಂಧವರು ಉಪಸ್ಥಿತರಿದ್ದರು.
Laxmi News 24×7