Breaking News

ಪೌರ ಕಾರ್ಮಿಕರ ವಸತಿ-ಖಾಯಂ ಬೇಡಿಕೆಗಳಿಗಾಗಿ ಸಪಾಯಿ ಕರ್ಮಚಾರಿ ಸಮಿತಿಯಿಂದ ಪ್ರತಿಭಟನೆ

Spread the love

ಪೌರ ಕಾರ್ಮಿಕರ ವಸತಿ-ಖಾಯಂ ಬೇಡಿಕೆಗಳಿಗಾಗಿ ಸಪಾಯಿ ಕರ್ಮಚಾರಿ ಸಮಿತಿಯಿಂದ ಪ್ರತಿಭಟನೆ
ಅಧಿವೇಶನದಲ್ಲಿ ಪೌರ ಕಾರ್ಮಿಕರಿಂದ ಬೃಹತ್ ಪ್ರತಿಭಟನೆ
ಸಫಾಯಿ ಕರ್ಮಚಾರಿಗಳ 32 ಬೇಡಿಕೆಗಳ ಈಡೇರಿಕೆಗೆ ಆಗ್ರಹ
ವಸತಿ, ಖಾಯಂ ನೇಮಕಾತಿಗೆ ಸಮಿತಿಯ ಕಾವಲು ಪ್ರತಿಭಟನೆ
ಪೌರ ಕಾರ್ಮಿಕರ ಸಮಸ್ಯೆ ಬಗೆಹರಿಸಲು ತಕ್ಷಣ ಕ್ರಮಕ್ಕೆ ಒತ್ತಾಯ
ಬೆಳಗಾವಿಯಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಪೌರ ಕಾರ್ಮಿಕರ 32ಕ್ಕೂ ಹೆಚ್ಚು ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಲಾಯಿತು. ಪ್ರಮುಖವಾಗಿ, ಬೆಳಗಾವಿಯಲ್ಲಿರುವ 253 ಪೌರ ಕಾರ್ಮಿಕರ ವಸತಿ ಗೃಹಗಳನ್ನು ಸದ್ಯ ವಾಸಿಸುತ್ತಿರುವ ಕುಟುಂಬಗಳಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಲಾಯಿತು.
ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳದಲ್ಲಿ ತಮ್ಮ ಬೇಡಿಕೆಗಳಾದ ಮ್ಯಾನುವಲ್ ಸ್ಕೆವೆಂಜರ್ ಮರು ಸಮೀಕ್ಷೆಯಲ್ಲಿ ಗುರುತಿಸಲಾದ 396 ಕುಟುಂಬಗಳ ಸರ್ವೇಕ್ಷಣಾ ಫಾರ್ಮ್ಗಳ ಜಂಟಿ ಪರೀಕ್ಷೆ ನಡೆಸಬೇಕು ಎಂಬುದು ಪ್ರತಿಭಟನಾಕಾರರ ಇನ್ನೊಂದು ಮುಖ್ಯ ಬೇಡಿಕೆಯಾಗಿತ್ತು. ಸಮಿತಿಯು, ಪೌರ ಕಾರ್ಮಿಕರ ವಸತಿ ಗೃಹಗಳ ದುರಸ್ತಿ ಮತ್ತು ನೀರಿನ ಟ್ಯಾಂಕ್ ಅಳವಡಿಕೆಗೆ ಒತ್ತಾಯಿಸಿದೆ.ಹಾಗೆಯೇ, ಖಾಯಂ ನೇಮಕಾತಿ ಆದೇಶ ಪಡೆದ 134 ಪೌರ ಕಾರ್ಮಿಕರಿಗೆ ಆದೇಶದ ಪ್ರತಿಗಳನ್ನು ಒದಗಿಸುವಂತೆ ಒತ್ತಾಯಿಸಲಾಯಿತು.
ಈ ಕುರಿತಾದ ಎಲ್ಲಾ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಸಫಾಯಿ ಕರ್ಮಚಾರಿ ಕಾವಲು ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದೆ.

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ