Breaking News

ಜೆಡಿಎಸ್‌ನಲ್ಲಿ ಇದ್ದೀನಿ, ಮುಂದೆಯೂ ಇರ್ತೀನಿ – ಕ್ಷೇತ್ರದಲ್ಲಿ ಭಾವನಾತ್ಮಕ ದಾಳ ಪ್ರಯೋಗಿಸಿದ ಜಿಟಿಡಿ

Spread the love

ಮೈಸೂರು: ಮುಂದಿನ ಚುನಾವಣೆಯಲ್ಲಿ  ಜೆಡಿಎಸ್  ಪಕ್ಷದಿಂದಲೇ ನನ್ನ ಸ್ಪರ್ಧೆ ಎಂದು ಮೈಸೂರಿನ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ  ಸ್ಪಷ್ಟಪಡಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ  ಜಯಪುರ ಗ್ರಾಮದಲ್ಲಿ ಮಾತನಾಡಿದ ಅವರು, ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಕೊಡದಿದ್ದರೆ ಕ್ಷೇತ್ರದ ಜನ ಹೇಳಿದಂತೆ ಕೇಳುತ್ತೇನೆ ಎಂದು ಕ್ಷೇತ್ರದ ಜನರ ಮುಂದೆ ಭಾವನಾತ್ಮಕ ದಾಳ ಉರುಳಿಸಿದ್ದಾರೆ.

ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ, ಇರುತ್ತೇನೆ. ಟಿಕೆಟ್ ಕೊಡದಿದ್ರೆ ಮತದಾರರು ನೀವು ಏನು ಹೇಳ್ತಿರಾ ಅದಕ್ಕೆ ನಾನು ಬದ್ಧ. ಅರ್ಜಿ ಹಾಕು ಅಂದ್ರೆ ಹಾಕುತ್ತೇನೆ. ನಿಮ್ಮ ಪ್ರೀತಿ ಆಶೀರ್ವಾದವೇ ನನಗೆ ದೈವ. ನನ್ನ ಬಳಿ ಏನೂ ಸಹಾಯ ಮಾಡಿಸಿಕೊಳ್ಳದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಆದರೆ, ನಾನು ಬೆಳೆಸಿದವರು, ದುಡ್ಡು ಮಾಡಿದವರು ನನ್ನ ವಿರುದ್ಧವೇ ನಿಂತಿದ್ದಾರೆ. ಇದು ಇವತ್ತಿನದ್ದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳುವ ಮೂಲಕ ಭಾವನಾತ್ಮಕ ದಾಳ ಪ್ರಯೋಗಿಸಿದ್ದಾರೆ.

ಈಗಾಗಲೇ ಜೆಡಿಎಸ್‌ನ ಎಲ್ಲಾ ಸಭೆಗಳಿಗೂ ಜಿಟಿಡಿ ಗೈರಾಗಿದ್ದು, ಜೆಡಿಎಸ್ ವರಿಷ್ಠರು ಕೂಡ ಜಿಟಿಡಿ ಬಿಟ್ಟು ಮುಂದೆ ಹೋಗುವ ಮಾತಾಡಿದ್ದಾರೆ. ಪಕ್ಷದ ಎಲ್ಲಾ ಸಭೆ ಸಮಾರಂಭ, ಫ್ಲೆಕ್ಸ್‌ಗಳಲ್ಲೂ ಜಿಟಿಡಿ ಫೋಟೋಗೆ ಕೊಕ್ ನೀಡಲಾಗಿದೆ. ಈ ಹಂತದಲ್ಲಿ ಜಿಟಿಡಿ ಪ್ರಯೋಗಿಸಿರುವ ಭಾವನಾತ್ಮಕ ದಾಳ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.


Spread the love

About Laxminews 24x7

Check Also

ಮಹಿಳೆಗೆ ನರಕಯಾತನೆ : 12 ವರ್ಷ ಬಳಿಕ ವೈದ್ಯನ ಕರಾಳ ಮುಖ ಬಯಲು ಮಾಡಿದ ಪತ್ನಿ

Spread the loveಮೈಸೂರು: ಪ್ರೀತಿಯ ನಾಟಕವಾಡಿ, ಆತ್ಮತ್ಯೆಯ ಬೆದರಿಕೆ ಹಾಕಿ, ಅಮಾಯಕ ಹೆಣ್ಮಕ್ಕಳ ಬದುಕನ್ನು ನರಕವಾಗಿಸ್ತಿದ್ದ ಕಾಮುಕ ವೈದ್ಯನ ಕರಾಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ