Breaking News

ಬೆಳಗಾವಿಯ ಸಾಯಿ ಮಂದಿರದಲ್ಲಿ ರಾಮನವಮಿ ಸಂಭ್ರಮ: ಖಾಸಬಾಗ ಮಂದಿರದಲ್ಲಿ ಪ್ರಥಮ ವಾರ್ಷಿಕೋತ್ಸವದ ಸಡಗರ

Spread the love

ಇಂದು ಬೆಳಗಾವಿ ನಗರದಲ್ಲಿ ರಾಮನವಮಿಯ ಉತ್ಸಾಹ ಮನೆ ಮಾಡಿದೆ. ನಗರದ ರಾಮ ಮಂದಿರ ಮತ್ತು ಸಾಯಿ ಮಂದಿರಗಳಲ್ಲಿ ರಾಮನವಮಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ.

ಬೆಳಗಾವಿ ಖಾಸಬಾಗದ ರಾಘವೇಂದ್ರ ಕಾಲನಿಯಲ್ಲಿ ವರ್ಷದ ಹಿಂದೆ ನಿರ್ಮಾಣಗೊಂಡು ರಾಮನವಮಿಯ ದಿನವೇ ಲೋಕಾರ್ಪಣೆಗೊಂಡ ಶ್ರೀ ಸಾಯಿ ಮಂದಿರದಲ್ಲಿ ಶ್ರೀರಾಮನವಮಿ ಮತ್ತು ಮಂದಿರ ಪ್ರಥಮ ವಾರ್ಷೀಕೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ರಾಮನವಮಿಯ ನಿಮಿತ್ಯ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಸಾಯಿಬಾಬಾರಿಗೆ ಅಭಿಷೇಕ, ಅಲಂಕಾರ, ಹೋಮ ಹವನ, ಮಹಾ ಆರತಿ ನೆರವೇರಿಸಲಾಯಿತು.

ಬೆಳಿಗ್ಗೆಯಿಂದಲೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕಾಗಿ ಆಗಮಿಸಿದ್ದರು. ಮಧ್ಯಾನ್ಹ ಸದ್ಭಕ್ತರಿಗಾಗಿ ಮಹಾಪ್ರಸಾದವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಾವಿರಾರು ಭಕ್ತರು ಮಹಾಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು. ಈ ಕುರಿತು ಮಂದಿರದ ಅಧ್ಯಕ್ಷರಾದ ಮಹೇಶ್ ವೇರ್ಣೆಕರ್ ಅವರು ಹೆಚ್ಚಿನ ಮಾಹಿತಿಯನ್ನು ನೀಡಿದರು. ಬೈಟ್

ಇನ್ನು ರಾಘವೇಂದ್ರ ಕಾಲನಿಯಲ್ಲಿ ಶ್ರೀ ಸಾಯಿ ಬಾಬಾ ಮಂದಿರವು ಕಳೆದ ಒಂದು ವರ್ಷದಿಂದ ಅಭಿವೃದ್ಧಿಗೊಂಡು ಭಕ್ತರ ಪ್ರೀತಿಗೆ ಪಾತ್ರವಾಗಿದೆ ಎಂದು ಇನ್ನೋರ್ವರು ತಿಳಿಸಿದರು. ಬೈಟ್

ಈ ಸಂದರ್ಭದಲ್ಲಿ ಹಲವಾರು ಭಕ್ತರು ಶ್ರೀ ಸಾಯಿಬಾಬಾರ ದರ್ಶನ ಪಡೆದುಕೊಂಡರು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ