Breaking News

ಸಿದ್ದರಾಮಯ್ಯ ಕನಸಿನ ಕೂಸು ಜಾತಿಗಣತಿ ಜಾರಿ ಮಾಡುತ್ತೇವೆ: ಯತೀಂದ್ರ

Spread the love

ದಾವಣಗೆರೆ: ಸಿದ್ದರಾಮಯ್ಯನವರು ಸಿಎಂ ಆಗಿ ಇನ್ನೂ ಎರಡು ವರ್ಷ ಇರುತ್ತಾರೆ ಎಂದುಕೊಂಡಿದ್ದೆವು. ಕಾರಣಾಂತರಗಳಿಂದ ಆ ಸ್ಥಾನದಿಂದ ಇಳಿದರು. ಆದರೆ ಅವರ ಕನಸಿನ ಕೂಸು ಜಾತಿಗಣತಿ ಸ್ವೀಕರಿಸಿದ್ದೇವೆ. ಅದನ್ನು ಜಾರಿ ಮಾಡುತ್ತೇವೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ದಾವಣಗೆರೆಯಲ್ಲಿ  ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ಜಾತಿಗಣತಿ ವರದಿಯನ್ನು ಜಾರಿಗೊಳಿಸಬೇಕು ಎಂದು ಸಿದ್ದರಾಮಯ್ಯನವರು ಎಂದುಕೊಂಡಿದ್ದರು. ಅದನ್ನು ನಾವು ಜಾರಿ ಮಾಡುತ್ತೇವೆ. ಕ್ಯಾಬಿನೆಟ್ ಮುಂದೆ ಇದರ ಚರ್ಚೆ ಬರಬೇಕಿದೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಜಾತಿಗಣತಿ ಬಿಡುಗಡೆ ಮಾಡುವುದಾಗಿ ಹೇಳಿದ್ದೆವು. ಬಿಡುಗಡೆ ಮಾಡುತ್ತೇವೆ ಎಂದರು.

ಜು.2 ರಂದು ನಡೆದ ಸಭೆಯಲ್ಲಿ 23 ಅಜೆಂಡಾಗಳು ಇದ್ದವು. ಮುಖ್ಯಮಂತ್ರಿಗಳು ಹೊಸದಾಗಿ ಪ್ರಜಾಸೇವೆ ಇಲಾಖೆ ಆರಂಭಿಸಿದ್ದಾರೆ. ಭಾರತ್ ಜೋಡೋ ಯುವಕರ ಸಂಘದಿಂದ ಪಕ್ಷ ಸಂಘಟನೆ ಮಾಡಲು ನಿರ್ಧಾರ ಮಾಡಲಾಗಿದೆ. ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದವು ಎಂದರು.

ವಿದ್ಯುತ್ ಖಾಸಗೀಕರಣ ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣದ ವಿರುದ್ಧ ಇದೆ. ಈಗಾಗಲೇ ಮುಖ್ಯ ಮoತ್ರಿಗಳು ಹಾಗೂ ಇಂಧನ ಸಚಿವರು ತಿಳಿಸಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡೋದಿಲ್ಲ ಎಂದರು. ಇನ್ನೂ‌ ಕಾಂಗ್ರೆಸ್ ಎಸ್‌ಐಆರ್ ವಿರುದ್ದ ದೊಡ್ಡ ಷಡ್ಯಂತ್ರ ಮಾಡುತ್ತಿದೆ ಎಂದು ವಿಜಯೇಂದ್ರ ಹೇಳಿಕೆ ವಿಚಾರವಾಗಿ, ವಿರೋಧ ಪಕ್ಷದವರು ಇರೋದೇ ಟೀಕೆ ಮಾಡಲು, ಅವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದರು.

ಎಸ್‌ಐಆರ್ ಬಂದು ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಮತದಾನದ ಹಕ್ಕನ್ನು ಕಳೆಯುವ ಕೆಲಸ ಬಿಜೆಪಿ ಮಾಡಿದೆ. ಯಾರು ಕೂಡ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ಚುನಾವಣಾ ಅಯೋಗ ನಿಗಾ ವಹಿಸಬೇಕಿತ್ತು‌, ಅದು ಆಗಿಲ್ಲ. ಮತದಾದ ಹಕ್ಕನ್ನು ಕಸಿದುಕೊಂಡು ಮತಗಳ್ಳತನ ಮಾಡುವ ಪಕ್ಷ ಎಂದರೆ ಬಿಜೆಪಿ ಎಂದರು.

ಎರಡು ವಾರದಲ್ಲಿ ಸಂಪುಟ ರಚನೆ ಆಗುವ ನಿರೀಕ್ಷೆ ಇದೆ. ಯಾವುದೇ ಸಂಪುಟ ರಚನೆಯಾಗಬೇಕು ಎಂದು ಹೊಸಬರು ಹಾಗೂ ಹಳಬರು ಕೂಡ ಇರಬೇಕು. ಎಲ್ಲಾ ವಿಚಾರವನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇವೆ ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹೊಸ ಸಿ ಎಂ ಪ್ರಮಾಣ ವಚನ ಸ್ವೀಕಾರ ಮಾಡಿ ಒಂದು ತಿಂಗಳು ಆಗಿದೆ. ನೂರು ದಿನಗಳ ಅಜೆಂಡಾ ಇದೆ. ರಾಜ್ಯದ ಯುವ ಜನರ ಗಮನ ಹರಿಸಿ ಸರ್ಕಾರ ನಡೆಸುತ್ತೇವೆ ಎಂದಿದ್ದಾರೆ. ಗ್ಯಾರೆಂಟಿ ಕೊಡೋದು ಯಾರೂ ಬಡವರು ಅರ್ಹ ಇದ್ದಾರೆ ಅವರಿಗೆ. ಜಾತಿ ಆಧಾರಿತವಾಗಿ ಗ್ಯಾರೆಂಟಿ ಯೋಜನೆ ನೀಡಿಲ್ಲ. ಯಾವ ಸಮುದಾಯದವರು ಎಷ್ಟು ಪಲಾನುಭವಿಗಳು ಇದ್ದಾರೆ ಅನ್ನೋ ನಿಟ್ಟಿನಲ್ಲಿ ಇರಬೇಕು ಎಂದರು.


Spread the love

About Laxminews 24x7

Check Also

ಮರದ ರೆಂಬೆ ಬಿದ್ದು ಎರಡು ಕಾರುಗಳು ಜಖಂ – ತಪ್ಪಿದ ಭಾರೀ ಅನಾಹುತ

Spread the loveಬೆಂಗಳೂರು: ರಸ್ತೆ ಪಕ್ಕದಲ್ಲಿದ್ದ ಬೃಹತ್‌ ಮರದ ರೆಂಬೆಯೊಂದು ಬಿದ್ದು ಎರಡು ಕಾರು ಹಾಗೂ ಒಂದು ಸ್ಕೂಟಿ ಜಖಂಗೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ