Breaking News

ಶಾಸಕ ಬಿ.ಪಿ.ಹರೀಶ್‌ ಬಂಧನಕ್ಕೆ ವಾರೆಂಟ್‌

Spread the love

ದಾವಣಗೆರೆ: ಶಾಸಕ ಬಿ.ಪಿ.ಹರೀಶ್‌ ಬಂಧನಕ್ಕೆ ಜನಪ್ರತಿನಿಧಿ ವಿಶೇಷ ನ್ಯಾಯಾಲಯ ವಾರೆಂಟ್‌ ಹೊರಡಿಯಸಿದೆ.

ಜಾತಿನಿಂದನೆ ಪ್ರಕರಣವೊಂದರ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಕೋರ್ಟ್‌ನ ನ್ಯಾಯಮೂರ್ತಿ ಸಂತೋಶ್‌ ಗಜಾನನ ಭಟ್‌ ಅವರು ಬಂಧನದ ವಾರೆಂಟ್‌ ಜಾರಿ ಮಾಡಿದ್ದಾರೆ. ಇದೇ 7ರಂದು ಕೋರ್ಟ್‌ಗೆ ಶಾಸಕರನ್ನು ಹಾಜರುಪಡಿಸುವಂತೆ ಹರಿಹರ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ಕೋರ್ಟ್‌ ಆದೇಶಿಸಿದೆ.

2023 ವಿಧಾನಸಭೆಯ ಚುನಾವಣಾ ಫಲಿತಾಂಶದ ಮರುದಿನ ದಲಿತ ಸಮಾಜದ ಬಗ್ಗೆ ಶಾಸಕ ಬಿ.ಪಿ.ಹರೀಶ್ ಅವಹೇಳನಕಾರಿಯಾಗಿ ಮಾತನಾಡಿದ್ದರು. ಹರಿಹರ ಬಿಎಸ್ಪಿ ಮುಖಂಡ ಹನುಮಂತಪ್ಪ ಎಂಬವರು ಹರಿಹರನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು. ಹೈಕೋರ್ಟ್‌ ಆದೇಶ ಬರುತ್ತಿದ್ದಂತೆ ಹರಿಹರ ನಗರ ಠಾಣೆಯ ಪೊಲೀಸರು ಆಕ್ಟಿವ್‌ ಆಗಿದ್ದಾರೆ.


Spread the love

About Laxminews 24x7

Check Also

ಘಟಿಕೋತ್ಸವದಲ್ಲಿ ವಂದೇ ಮಾತರಂ ಪೂರ್ಣ ಹಾಡು – ವಿಟಿಯು ಕುಲಪತಿ

Spread the loveಬೆಳಗಾವಿ: ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಹಾಡುವ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಈಗಾಗಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ