Breaking News

ಬುಡಾ ವಿರುದ್ಧ ವಿಜಯಕುಮಾರ್ ಪಾಟೀಲ್ ಆಕ್ರೋಶ: ಫೆ. 28 ರೊಳಗೆ ಲೇಔಟ್ ಬಿಡುಗಡೆಗೆ ಗಡುವು

Spread the love

ಕಳೆದ ಇಪ್ಪತ್ತು ವರ್ಷಗಳಿಂದ ಬುಡಾದಿಂದ ಯಾವುದೇ ಲೇಔಟ್ ನಿರ್ಮಾಣವಾಗಿಲ್ಲ ಎಂದು ವಿಜಯಕುಮಾರ್ ಪಾಟೀಲ ಆರೋಪಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಗುಂಟೆ ದರ ಲಕ್ಷಾಂತರ ರೂಪಾಯಿ ತಗಲುತ್ತಿದ್ದು, ಸಾರ್ವಜನಿಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.ಮಾಸ್ಟರ್ ಪ್ಲಾನ್ ಹೆಸರಿನಲ್ಲಿ ಒಂದೂ ಲೇಔಟ್ ನಿರ್ಮಿಸದೆ ಬುಡಾ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಟೌನ್ ಪ್ಲಾನಿಂಗ್ ಅನ್ನು ಈ ತಿಂಗಳ 28ರೊಳಗಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.ಯಾವುದೇ ರಾಜಕೀಯ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೆ, ಬುಡಾ ಮುಂದೆ ಬಾಕಿ ಇರುವ ಎಲ್ಲಾ ಲೇಔಟ್‌ಗಳನ್ನು ತಕ್ಷಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಾಧ್ಯಮಗೋಷ್ಟೀಯಲ್ಲಿ ಜುನೇದ್ ಪಾಷಾ, ಶಬೀರ ಮುಲ್ಲಾ, ರೀಜ್ವಾನ್ ಮಕಾನದಾರ ಸೇರಿದಂತೆ ಹಲವಾರು ಇದ್ದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ