Breaking News

‘ವಿಬಿಜಿ ರಾಮಜೀ’ ತಿರಸ್ಕರಿಸಿ ಮನರೇಗಾ ಉಳಿಸಿ: ಬೆಳಗಾವಿಯಲ್ಲಿ ಕೂಲಿ ಕಾರ್ಮಿಕರ ಬೃಹತ್ ಪ್ರತಿಭಟನೆ

Spread the love

ಮಹಾತ್ಮಾ ಗಾಂಧೀಜಿಯವರ ಪುಣ್ಯಸ್ಮರಣೆಯಂದು ವಿಬಿಜಿ ರಾಮಜೀ ತಿರಸ್ಕರಿಸಿ ಮನರೇಗಾ ಉಳಿಸಿ ಹೋರಾಟವನ್ನು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ವತಿಯಿಂದ ನಡೆಸಲಾಯಿತು.

ಮಹಾತ್ಮಾ ಗಾಂಧೀಜಿಯವರ ಪುಣ್ಯಸ್ಮರಣೆಯಂದು ವಿಬಿಜಿ ರಾಮಜೀ ತಿರಸ್ಕರಿಸಿ ಮನರೇಗಾ ಉಳಿಸಿ ಹೋರಾಟವನ್ನು ಬೆಳಗಾವಿಯ ತಾಲೂಕಾ ಪಂಚಾಯಿತಿ ಕಾರ್ಯಾಲಯದ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ವತಿಯಿಂದ ನಡೆಸಲಾಯಿತು.

ಹೊಸ ವಿಬಿಜಿ ರಾಮಜೀ ಯೋಜನೆಯೂ ಕಾರ್ಮಿಕ ಕೆಲಸದ ಹಕ್ಕುಗಳನ್ನು ಕಿತ್ತುಕೊಂಡಿದೆ. ಫಾರ್ಮ ನಂ. 6ರಡಿ 10 ದಿನಗಳಲ್ಲಿ ಕೆಲಸ ನೀಡಬೇಕು ಇಲ್ಲದಿದ್ದರೇ, ಭತ್ಯೆ ನೀಡಬೇಕೆಂದಿತ್ತು. ಆದರೇ, ಈಗ ಕೇಂದ್ರವು ಕೆಲಸ ನೀಡಿದಾಗ ಮಾತ್ರ ಕೆಲಸ ಮಾಡುವ ಸಂದರ್ಭ ಬಂದೊದಗಿದೆ. ವಲಸೆ ತಡೆಯುವ ಬದಲೂ ವಲಸೆ ಹೋಗಲು ಪ್ರೇರೆಪಿಸುತ್ತಿದೆ. ಬಡಜನರಿಗೆ ಈ ಕಾನೂನು ಕುತ್ತು ತಂದಿದೆ. ಬಡಜನರ ಮಕ್ಕಳ ವಿದ್ಯಾಭ್ಯಾಸದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ನಮಗೆ ಹೆಚ್ಚಿಗೆ ಹಾಜರಾತಿ ಬೇಡ. ಹಳೆಯ ಕಾನೂನೆ ಜಾರಿಗೊಳಿಸುವಂತೆ ಶಕುಂತಲಾ ಆಗ್ರಹಿಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ