ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಾಸನದ ಶಕ್ತಿ ದೇವತೆ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. 1000 ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ಅವರು ದೇವಿಯ ದರ್ಶನ ಪಡೆದಿದ್ದಾರೆ.
ಸಿಎಂ ಆಗಿದ್ದ ವೇಳೆ ಎರಡು ಬಾರಿ ಹಾಸನಾಂಬ ದೇವಿಯ ದರ್ಶನ ಪಡೆದಿದ್ದರು. ಇಂದು ತಮ್ಮ ಆಪ್ತರ ಜೊತೆ ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌ಪಟೇಲ್ ಸಾಥ್ ನೀಡಿದ್ದಾರೆ.
ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಸಣ್ಣ ಗೊಂದಲ ಸಹ ಉಂಟಾಗಿತ್ತು. ಡಿಸಿ, ಎಸ್‌ಪಿ ಹಾಗೂ ಮತ್ತೊಂದು ಇನ್ನೋವಾ ಕಾರು ಬರುತ್ತಲೆ ಗೇಟ್ ಬಂದ್ ಮಾಡಲಾಗಿತ್ತು. ಗೇಟ್ ಬಂದ್ ಆಗಿದ್ದರಿಂದ ಸಿದ್ದರಾಮಯ್ಯ ಅವರ ಎಸ್ಕಾರ್ಟ್ ಹಾಗೂ ಪೈಲಟ್ ವಾಹನಗಳು ಮುಂದೆ ಸಾಗಿದವು. ಇದರಿಂದ ದಾರಿ ಮಿಸ್ ಆಗಿ ಸಿದ್ದರಾಮಯ್ಯ ಅವರು ನೂರಾರು ವಾಹನಗಳ ನಡುವೆ ಟ್ರಾಫಿಕ್‌ನಲ್ಲಿ ಸಿಲುಕುವಂತಾಗಿತ್ತು. ಈ ವೇಳೆ ಸಿದ್ದರಾಮಯ್ಯ ಅವರು ಎಲ್ಲಿ ಹೋದರು ಎಂದು ಎಸ್‌ಪಿ ಹಾಗೂ ಡಿಸಿ ಗೊಂದಲಕ್ಕೀಡಾದರು. ನಂತರ ಸಿದ್ದರಾಮಯ್ಯ ಅವರ ಕಾರು ಸಂತೇಪೇಟೆ ಸರ್ಕಲ್ ಬಳಸಿ ದೇವಾಲಯದ ಬಳಿ ಬಂದಿದೆ. ಈ ವೇಳೆ ಶಿವಲಿಂಗೇಗೌಡರು ಯಾಕೆ ಹೀಗೆ ಗೊಂದಲ ಮಾಡ್ತೀರಿ ಎಂದು ಅಧಿಕಾರಿಗಳ ಮೇಲೆ ಸಿಟ್ಟಾದರು.
ದೇವಿಯ ದರ್ಶನದ ಬಳಿಕ ಹಾಸನ ಮಹಾನಗರಪಾಲಿಕೆ ವಸ್ತು ಪ್ರದರ್ಶನ ಮೈದಾನದಲ್ಲಿ ಫಲ ಪುಷ್ಪ ಪ್ರದರ್ಶನ ಉದ್ಘಾಟಿಸಿದರು. ಬಳಿಕ ನಾಡ ಕುಸ್ತಿ ಫೈನಲ್ ಪಂದ್ಯಕ್ಕೆ ಚಾಲನೆ ನೀಡಿ, ಪಂದ್ಯ ವೀಕ್ಷಿಸಿದರು.
Laxmi News 24×7