ವಾಷಿಂಗ್ಟನ್: ಅಮೆರಿಕದಲ್ಲಿ ಒಂದೇ ದಿನಕ್ಕೆ 1,997 ಮಂದಿ ಬಲಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ. ಈ ಮೂಲಕ ಭಾನುವಾರದವರೆಗೆ ಮೃತಪಟ್ಟವರ ಸಂಖ್ಯೆ 40,661 ಕ್ಕೆ ಏರಿಕೆಯಾಗಿದೆ.
ಪ್ರಪಂಚದಾದ್ಯಂತ ಕೋವಿಡ್ 19 ಎಂಬ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ಇತ್ತ ವಿಶ್ವದ ದೊಡ್ಡಣ್ಣ ಈ ಮಹಾಮಾರಿಗೆ ತತ್ತರಿಸಿ ಹೋಗಿದೆ. ಭಾನುವಾರದ ಅಂಕಿ-ಅಂಶವನ್ನು ಗಮನಿಸಿದಾಗ ಇನ್ನೂ ದುಪ್ಪಟ್ಟಾಗುವ ಸಾಧ್ಯತೆಗಳಿರುವುದಾಗಿ ರಾಜ್ಯಪಾಲ ಆಂಡ್ರ್ಯೂ ಕುಮೊ ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಅಮೆರಿಕದಲ್ಲಿ 7,64,265 ಕೊರೊನಾ ಸೋಂಕಿತರಿದ್ದು, ಈ ಮೂಲಕ ಜಗತ್ತಿನಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿರುವ ದೇಶ ಎಂಬ ಕುಖ್ಯಾತಿಗೆ ಒಳಗಾಗಿದೆ.
ಇಟಲಿಯಲ್ಲಿ ಕೋವಿಡ್ 19ಗೆ 23,660 ಮಂದಿ ಬಲಿಯಾಗಿದ್ದಾರೆ. 1,78,972 ಮಂದಿಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದ್ದು, 47,055 ಮಂದಿ ಗುಣಮುಖರಾಗಿದ್ದಾರೆ. ಜಗತ್ತಿನಾದ್ಯಂತ ಮಹಾಮಾರಿಗೆ 1,65,069 ಮಂದಿ ಬಲಿಯಾಗಿದ್ದು, 24,07,339 ಕ್ಕಿಂತ ಹೆಚ್ಚು ಸೋಂಕಿತರಿದ್ದಾರೆ. ಇನ್ನು 6,23,911 ಮಂದಿ ಗುಣಮುಖರಾಗಿದ್ದಾರೆ.