Breaking News

ಕೊರೊನಾ ದೃಢಪಟ್ಟ ಐವರ ಫೋನ್ ಸ್ವಿಚ್ ಆಫ್- ಆತಂಕದಲ್ಲಿ ಉಡುಪಿ ಜನ………….

Spread the love

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸಿದ್ದು, ಇಂದು ಒಂದೇ ದಿನ 73 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯ ಕೊರೊನಾ ಪೀಡಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ 73 ಸೋಂಕಿತರ ಪೈಕಿ 68 ಜನರನ್ನು ಪತ್ತೆ ಮಾಡಲಾಗಿದೆ. ಕೋವಿಡ್-19 ದೃಢಪಟ್ಟಿರುವ ಐದು ಮಂದಿ ಫೋನ್ ಸ್ವಿಚ್ ಆಫ್ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಫೋನ್ ಸ್ವಿಚ್ ಆಫ್ ಮಾಡಿದ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತೊಡಗಿದೆ.

ಸೋಂಕಿತರ ಪೈಕಿ 61 ಜನ ಮಹಾರಾಷ್ಟ್ರದಿಂದ ಬಂದವರು. ಮೂವರು ಅನಿವಾಸಿ ಭಾರತೀಯರು. ಜಿಲ್ಲೆಯ ನಾಲ್ಕು ಮಂದಿ ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಕೂಡ ಆತಂಕದ ವಿಚಾರ. ಸೋಂಕಿತರ ಪೈಕಿ ಗರ್ಭಿಣಿ, ಮಕ್ಕಳು ರೋಗ ಲಕ್ಷಣ ಇರುವ ಹಿರಿಯರನ್ನು ಉಡುಪಿಯ ಟಿಎಂಎ ಪೈ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಕೊರೊನಾದ ಲಕ್ಷಣ ಇಲ್ಲದವನ್ನು ಆಯಾಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಶಂಕರ ನಾರಾಯಣ ಪೊಲೀಸ್ ಠಾಣೆ, ಉಡುಪಿ ಡಿಎಆರ್ ಪೊಲೀಸರು ಕೆಲಸ ಮಾಡಿದಸ್ಥಳಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಉಡುಪಿ ಎಸ್.ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

https://youtu.be/OYEMtBeW6b0


Spread the love

About Laxminews 24x7

Check Also

ಕರ್ನಾಟಕ ಸಿಂಹ ಗಂಗಾಧರ್ ರಾವ್ ದೇಶಪಾಂಡೆ ಸ್ಮಾರಕ ಭವನ, ಫೋಟೋ ಗ್ಯಾಲರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

Spread the loveಬೆಳಗಾವಿ : “ಗಾಂಧಿ ಭಾರತ” ಕಾರ್ಯಕ್ರಮ ಹಿನ್ನೆಲೆ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನಿರ್ಮಿಸಿರುವ ಕರ್ನಾಟಕ ಸಿಂಹ ಗಂಗಾಧರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ