ಬೆಂಗಳೂರು: ಜಲಮಂಡಳಿಯ ನೀರಿನ ಘಟಕಕ್ಕೆ ಬಿದ್ದು ಇಬ್ಬರು ಕಾರ್ಮಿಕರು ಕಣ್ಮರೆಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಿಹಾರ ಮೂಲದ ಬ್ರಿಜೇಶ್ (30), ತಮಿಳುನಾಡು ಮೂಲದ ಅಖಿಲೇಶ್ (30) ನಾಪತ್ತೆಯಾದ ಕಾರ್ಮಿಕರು. ವರ್ತೂರಿನ ಬೆಳಗೆರೆಯಲ್ಲಿರುವ ಸಂರಕ್ಷಣಾ ಘಟಕದಲ್ಲಿ ಅವಘಡ ಸಂಭವಿಸಿದೆ.
ಟ್ಯಾಂಕ್ ಬಳಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಮೂವರು ಸಹ ಆಯತಪ್ಪಿ ಟ್ಯಾಂಕ್ ಒಳಗೆ ಬಿದ್ದಿದ್ದಾರೆ. ತಕ್ಷಣ ಓರ್ವನನ್ನ ಉಳಿದ ಕಾರ್ಮಿಕರು ಬಚಾವ್ ಮಾಡಿದ್ದಾರೆ. ಆದರೆ, ಇನ್ನಿಬ್ಬರು ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಬೆಳಗೆರೆಯಲ್ಲಿ ಇಂದು ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ವರ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಮಿಕರೆಲ್ಲಾ 21 ರಿಂದ 30 ವರ್ಷದ ಒಳಗಿನವರು ಎನ್ನಲಾಗಿದೆ.
Laxmi News 24×7