ಪಾಟ್ನಾ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲಾಗಿದೆ.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಕೃಷ್ಣ ಸಿಂಗ್ ಕಲ್ಲು ಅವರು, ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಖರ್ಗೆ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ.
ಏನಿದು ವಿವಾದ?
ಪಾಟ್ನಾದಲ್ಲಿ ಕೃಷ್ಣ ಸಿಂಗ್ ಅವರ 139ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಿದ್ದರು.
ಎಸ್ಐಆರ್ ವಿಚಾರವಾಗಿ ಮಾತನಾಡುತ್ತಾ.. ʻಮತಗಳ್ಳತನ ಮಾಡುವವರನ್ನ ಸುಮ್ಮನೆ ಬಿಡಬೇಕಾ? ಮೊದಲು ಎಫ್ಐಆರ್ ಹಾಕಬೇಕು, ಆಮೇಲೆ ತನಿಖೆ ಮಾಡಬೇಕು, ಅದಾದ್ಮೇಲೆ ಜೈಲಿಗೆ ಕಳಿಸಬೇಕು. ಜೈಲಿಗೆ ಕಳಿಸೋ ಕೆಲಸವನ್ನ ನಾವು ಮಾಡುತ್ತೇವೆ ಅಂತಾ ಹೇಳಿದ್ರು, ಈ ವೇಳೆ ಸಭೀಕರಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಜೋರು ದನಿಯಲ್ಲಿ `ಮೋದಿಯನ್ನು ಎಲ್ಲಿಗೂ ಕಳಿಸೋಕೆ ಆಗಲ್ಲ’ ಎಂದು ಕೂಗಿದರು. ಇದರಿಂದ ಕೆರಳಿದ ಖರ್ಗೆ, `ಮೋದಿ ಅವರ ಅಪ್ಪನೂ ಜೈಲಿಗೆ ಹೋಗಲೇಬೇಕು’ ಅಂತ ಲೇವಡಿ ಮಾಡಿದರು. ಬಳಿಕ ವ್ಯಕ್ತಿಯನ್ನ ಕಾಂಗ್ರೆಸ್ ಕಾರ್ಯಕರ್ತರು ಥಳಿಕಾರ್ಯಕ್ರಮದ ಸಭಾಂಗಣದಿಂದ ಹೊರದಬ್ಬಿದರು.
2ನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರೆ
ಇದೇ ವೇಳೆ ಎಸ್ಐಆರ್ ಪ್ರತಿಭಟನೆಗಳನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯನ್ನ ರದ್ದುಗೊಳಿಸಬೇಕು. ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ಗಳನ್ನ (ಮತಪತ್ರ) ಬಳಸಬೇಕು. ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ ಅವರು, SIಖ ವಿರುದ್ಧದ ಹೋರಾಟವನ್ನ ʻಸ್ವಾತಂತ್ರ್ಯದ 2ನೇ ಸಂಗ್ರಾಮ’ ಎಂದು ಬಣ್ಣಿಸಿದರು.
ದೇಶದಲ್ಲಿ ವಿಭಜನೆಯನ್ನು ಹೆಚ್ಚಿಸುವ ಸಿದ್ಧಾಂತವನ್ನು ಆರ್ಎಸ್ಎಸ್ ಮತ್ತು ಬಿಜೆಪಿ ಅನುಸರಿಸುತ್ತಿವೆ. ಆರ್ಎಸ್ಎಸ್ ಸಿದ್ಧಾಂತವನ್ನ ನಿರ್ಮೂಲನೆ ಮಾಡದ ಹೊರತು, ದೇಶದಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ಎಚ್ಚರಿಸಿದರು.
Laxmi News 24×7