Breaking News

ಕಬ್ಬಿನ ಹುಲ್ಲು ಸಾಗಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶ – ಧಗ ಧಗ ಹೊತ್ತಿ ಉರಿದ ಟ್ರ್ಯಾಕ್ಟರ್‌

Spread the love

ಬಾಗಲಕೋಟೆ: ವಿದ್ಯುತ್ ತಂತಿ ತಗುಲಿದ್ದರಿಂದ ಕಬ್ಬಿನ ಹುಲ್ಲು (ರವದಿ) ಸಾಗಿಸುತ್ತಿದ್ದ ಟ್ರ್ಯಾಕ್ಟರ್‌  ಧಗ ಧಗ ಹೊತ್ತಿ ಉರಿದ ಘಟನೆ ಜಮಖಂಡಿ ತಾಲ್ಲೂಕಿನ ಟಕ್ಕಳಕಿಯಲ್ಲಿ ನಡೆದಿದೆ.

ವಸಂತ ಚೌಹಾಣ್ ಎಂಬುವರ ಟ್ರ್ಯಾಕ್ಟರ್, ಟ್ರೇಲರ್ ಎಲ್ಲವೂ ಸುಟ್ಟು ಹೋಗಿದೆ. ಬೆಂಕಿ  ಆರಿಸಲು ಸ್ಥಳೀಯರು ಹರಸಾಹಸ ಪಟ್ಟರೂ ನಿಯಂತ್ರಣ ಮಾಡಲು ಸಾಧ್ಯವಾಗದೇ ನೋಡ ನೋಡುತ್ತಿದ್ದಂತೆ ಸುಟ್ಟುಹೋಗಿದೆ.

ಟಕ್ಕಳಕಿಯಿಂದ ಸಾವಳಗಿ ಕಡೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಎಂಜಿನ್ ಟ್ರೇಲರ್ ಹಾಗೂ ಸೊಪ್ಪು ಸೇರಿ 8-9 ಲಕ್ಷ ರೂ. ನಷ್ಟವಾಗಿರುವ ಸಾಧ್ಯತೆಯಿದೆ. ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ