Breaking News

ರಾಣಿ ಚನ್ನಮ್ಮಾಜಿ ಪುತ್ಥಳಿಯ ಮುರಿದ ಕೈ ತಾತ್ಕಾಲಿಕ ದುರಸ್ತಿ

Spread the love

ಬೆಳಗಾವಿ: ಕಿತ್ತೂರು ಉತ್ಸವ ಆರಂಭಕ್ಕೆ ಕ್ಷಣಗಣನೆ ನಡೆಯುತ್ತಿರುವ ಬೆನ್ನಲ್ಲೇ ರಾಣಿ ಚನ್ನಮ್ಮಾಜಿಯವರ ಪುತ್ಥಳಿಯ ಖಡ್ಗ ಹಿಡಿದ ಬಲಗೈ ಮುರಿದು ಬಿದ್ದ ಘಟನೆಗೆ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳಲ್ಲಿ ರಾತ್ರೋರಾತ್ರಿ ದುರಸ್ತಿ ಕಾರ್ಯ ಕೈಗೊಂಡು, ಮುರಿದು ಬಿದ್ದಿದ್ದ ಕೈಯನ್ನು ತಾತ್ಕಾಲಿಕವಾಗಿ ಜೋಡಿಸಿದ್ದಾರೆ.

ಐತಿಹಾಸಿಕ ಮಹತ್ವ ಹೊಂದಿರುವ ರಾಣಿ ಚನ್ನಮ್ಮಾಜಿಯವರ ಪುತ್ಥಳಿಯ ಬಲಗೈ ತುಂಡಾಗಿ ಬಿದ್ದಿರುವುದು ಸಾರ್ವಜನಿಕರು ಹಾಗೂ ಚನ್ನಮ್ಮಾಜಿಯ ಅಭಿಮಾನಿಗಳಲ್ಲಿ ತೀವ್ರ ಆಕ್ರೋಶ ಮತ್ತು ಬೇಸರಕ್ಕೆ ಕಾರಣವಾಗಿತ್ತು. ಕಿತ್ತೂರು ಉತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿರುವ ಸಂದರ್ಭದಲ್ಲೇ ಇಂತಹ ಘಟನೆ ನಡೆದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ತಡರಾತ್ರಿಯೇ ದುರಸ್ತಿ ಕಾರ್ಯ ನಡೆಸಿ ಮುರಿದ ಕೈಯನ್ನು ತಾತ್ಕಾಲಿಕವಾಗಿ ಜೋಡಿಸಿದ್ದಾರೆ. ಇದರಿಂದ ಉತ್ಸವದ ಮುನ್ನ ಪುತ್ಥಳಿಗೆ ಉಂಟಾಗಿದ್ದ ಹಾನಿಯನ್ನು ತಾತ್ಕಾಲಿಕವಾಗಿ ಸರಿಪಡಿಸಿದಂತಾಗಿದೆ.

ಆದರೆ, ಮುರಿದ ಕೈಯನ್ನು ತಾತ್ಕಾಲಿಕವಾಗಿ ಜೋಡಿಸಿರುವುದರಿಂದ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ. ಪುತ್ಥಳಿಯ ಸುರಕ್ಷತೆಗಾಗಿ ಶಾಶ್ವತ ದುರಸ್ತಿ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಇದರ ನಡುವೆ, ಐತಿಹಾಸಿಕ ಮಹತ್ವ ಹೊಂದಿರುವ ರಾಣಿ ಚನ್ನಮ್ಮಾಜಿಯವರ ಪುತ್ಥಳಿಯ ಬದಲಾಗಿ ಭವ್ಯವಾದ ನೂತನ ಪುತ್ಥಳಿ ನಿರ್ಮಿಸಬೇಕೆಂಬ ಸಾರ್ವಜನಿಕರ ಆಗ್ರಹವೂ ಮುಂದುವರಿದಿದೆ. ಕಿತ್ತೂರು ರಾಣಿ ಚನ್ನಮ್ಮಾಜಿಯವರ ಗೌರವ ಮತ್ತು ಐತಿಹಾಸಿಕ ಸ್ಮಾರಕದ ಸಂರಕ್ಷಣೆಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.


Spread the love

About Laxminews 24x7

Check Also

ಮೂರು ಕಡೆ ದಾಳಿ: 9 ಕೆಜಿಗೂ ಅಧಿಕ ಮಾದಕವಸ್ತು ವಶ

Spread the loveದೇಶಾದ್ಯಂತ ಮಾದಕವಸ್ತು ಕಳ್ಳಸಾಗಣೆಗೆ ಕಡಿವಾಣ ಹಾಕಲು ಆದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ನಡೆಸಿದ ಸರಣಿ ಕಾರ್ಯಾಚರಣೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ