Breaking News
Home / Tag Archives: accusedarrestdaughterfatherKoppalpoliceWifeಅರೆಸ್ಟ್ಆರೋಪಿಗಳುಕೊಪ್ಪಳತಂದೆಪತ್ನಿಪೊಲೀಸ್ಮಗಳು

Tag Archives: accusedarrestdaughterfatherKoppalpoliceWifeಅರೆಸ್ಟ್ಆರೋಪಿಗಳುಕೊಪ್ಪಳತಂದೆಪತ್ನಿಪೊಲೀಸ್ಮಗಳು

ಜೂನ್ 17ರಿಂದ ರಾಯಚೂರಿನಿಂದ ಮಂತ್ರಾಲಯಕ್ಕೆ ಬಸ್‍ಗಳ ಓಡಾಟ ಆರಂಭ

ರಾಯಚೂರು: ಜಿಲ್ಲೆಗೆ ಇಂದು ಸಹ ಕೊರೊನಾಘಾತವಾಗಿದ್ದು ಜಿಲ್ಲೆಯಲ್ಲಿ ಒಂದೇ ದಿನ 18 ಕೊರೊನಾ ಪಾಸಿಟಿವ್ ಪ್ರಕರಗಳು ದೃಢವಾಗಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 403ಕ್ಕೆ ಏರಿದೆ. ಇಂದು ಟ್ರಾವೆಲ್ ಹಿಸ್ಟರಿ ಇಲ್ಲದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಕಂಟೈನ್ಮೆಂಟ್ ಝೋನ್ ನಿಂದ ಒಂದು ಪ್ರಕರಣ ದಾಖಲಾಗಿದೆ. ತೆಲಂಗಾಣದಿಂದ ಬಂದಿರುವ ಇಬ್ಬರು ಹಾಗೂ ತಮಿಳುನಾಡಿನಿಂದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದಿರುವ 10 ಜನರಲ್ಲಿ ಪಾಸಿಟಿವ್ ದೃಢವಾಗಿದೆ. ಮಹಾರಾಷ್ಟ್ರದಿಂದ ಬಂದಿರುವ 10 …

Read More »

ಜೂಜಿನ ಪಾರಿವಾಳಕ್ಕೆ ಕಿರಿಕ್- ಚರಂಡಿಯಲ್ಲಿ ಕೆಡವಿ ಯುವಕನ ಮೇಲೆ ಹಲ್ಲೆ……..

ದಾವಣಗೆರೆ: ಜೂಜಿನ ಪಾರಿವಾಳ ವಿಚಾರಕ್ಕೆ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದಲ್ಲಿ ಇಂದು ನಡೆದಿದೆ. ಶ್ರೀನಿವಾಸ್ ನಗರದ ನಿವಾಸಿ ನಟರಾಜ್ (30) ಹಲ್ಲೆಗೊಳಗಾದ ಯುವಕ. ಭಾರತ್ ಕಾಲೋನಿಯ ಸಂತೋಷ್ ಹಾಗೂ ಅವನ ಗೆಳೆಯರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಟರಾಜ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಟರಾಜ್ ಪಾರಿವಾಳಗಳನ್ನು ಸಾಕಿ ಅವುಗಳಿಗೆ ತರಬೇತಿ ನೀಡಿ ಜೂಜಿಗೆ ಬಿಡುತ್ತಿದ್ದ. ಹೀಗಾಗಿ ಸಂತೋಷ್ ಹಾಗೂ ಆತನ …

Read More »

15 ದಿನದಲ್ಲಿ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳುಹಿಸಿಕೊಡಿ : ಸುಪ್ರೀಂ ಆದೇಶ

ನವದೆಹಲಿ,ಜೂ.9- ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ 15 ದಿನದಲ್ಲಿ ಕಳುಹಿಸಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವಲಸೆ ಕಾರ್ಮಿಕರಿಗೆ ಉದ್ಯೋಗ ಯೋಜನೆ ಹಾಗೂ ನಿರಾಶ್ರಿತರ ತಾಣಗಳನ್ನು ಸ್ಥಾಪಿಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್‍ಕೃಷ್ಣ ಕೌಲ್ ಮತ್ತು ಎಂ.ಆರ್.ಷಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚನೆ …

Read More »

ಇಲಾಖೆ ಹೇಳೋದು ಒಂದು, ಆರೋಗ್ಯ ಸಚಿವರು ಹೇಳೋದು ಮತ್ತೊಂದು……..

ಉಡುಪಿ: ಮಹಾರಾಷ್ಟ್ರದಿಂದ ಬಂದವರಿಗೆ 7 ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್ ಕಡ್ಡಾಯ ಎಂದು ಸೋಮವಾರವಷ್ಟೇ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಆರೋಗ್ಯ ಸಚಿವ ಶ್ರೀರಾಮುಲು ಅವರು ಇನ್ನು ಮುಂದೆ ಸರ್ಕಾರಿ ಕ್ವಾರಂಟೈನ್ ಇರಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಜನ ಆರೋಗ್ಯ ಇಲಾಖೆಯನ್ನು ನಂಬಬೇಕಾ ಅಥವಾ ಆರೋಗ್ಯ ಸಚಿವರನ್ನು ನಂಬಬೇಕಾ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. ಹೌದು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. …

Read More »

15 ವರ್ಷಗಳ ಹಿಂದಿನ ತಂದೆಯ ಕೊಲೆ ರಹಸ್ಯ ಮಗಳಿಂದ ಬಯಲು_ ತಾಯಿ ಸೇರಿ ಐವರು ಅರೆಸ್ಟ್

ಕೊಪ್ಪಳ: 15 ವರ್ಷಗಳ ಹಿಂದೆ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿಸಿ ಮುಚ್ಚಿ ಹಾಕಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಶಂಕರ್‍ಸಿಂಗ್ ಮೃತ ವ್ಯಕ್ತಿ. ಬಂಧಿತ ಆರೋಪಿಗಳನ್ನು ಗಂಗಾವತಿಯ ವಿರುಪಾಪೂರ ನಗರದ ಮೃತನ ಪತ್ನಿ ಲಕ್ಷ್ಮೀಸಿಂಗ್, ರಾಂಪೂರ ಪೇಟೆಯ ಅಮ್ಜದ್‍ಖಾನ್, ಕಿಲ್ಲಾ ಏರಿಯಾದ ಅಬ್ದುಲ್ ಹಫೀಜ್, ಬಾಬಾ ಜಾಕೀರಬಾಷಾ ಹಾಗೂ ಈಳಿಗನೂರ ಗ್ರಾಮದ ಶಿವನಗೌಡ …

Read More »