Breaking News

ಜಾಮೀನಿನ ಮೇಲೆ ಹೊರಬಂದ ಬೆನ್ನಲ್ಲೇ ಮತ್ತೆ ಅಕ್ರಮ ಗರ್ಭಪಾತ ದಂಧೆ?

Spread the love

ಬಾಗಲಕೋಟೆ: ಅಕ್ರಮ ಗರ್ಭಪಾತ ಹಾಗೂ ಹೆಣ್ಣು ಭ್ರೂಣಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ನಕಲಿ ವೈದ್ಯೆಯೊಬ್ಬಳು, ಮತ್ತೆ ಅದೇ ಕರಾಳ ದಂಧೆಯಲ್ಲಿ ಸಕ್ರಿಯವಾಗಿರುವ ಗಂಭೀರ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಆಕೆಯ ಮನೆಗೆ ಭೇಟಿ ನೀಡಿ ಕಠಿಣ ಎಚ್ಚರಿಕೆಯ ನೋಟಿಸ್ ಅಂಟಿಸಿದ್ದಾರೆ.

ಮಹಾಲಿಂಗಪುರ ಪಟ್ಟಣದ ನಿವಾಸಿ ಕವಿತಾ ಬಾಡನವರ ಈ ಹಿಂದೆ ಲಿಂಗಪತ್ತೆ ಹಾಗೂ ಅಕ್ರಮ ಗರ್ಭಪಾತ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಳು. ಸುಮಾರು ಎರಡು ವರ್ಷಗಳ ಹಿಂದೆ ಈಕೆ ನಡೆಸಿದ ಅಕ್ರಮ ಗರ್ಭಪಾತದ ಅಡ್ಡಪರಿಣಾಮದಿಂದ  ಮಹಾರಾಷ್ಟ್ರ ಮೂಲದ ಮಹಿಳೆಯೊಬ್ಬಳು ಮೃತಪಟ್ಟಿದ್ದಳು. ಈ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಕವಿತಾ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ್ದು, ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದಾಳೆ.

ಜಾಮೀನಿನ ಮೇಲೆ ಬಂದ ಕೆಲವೇ ದಿನಗಳಲ್ಲಿ ಕವಿತಾ ಮತ್ತೆ ಹಳೆಯ ಚಾಳಿಯನ್ನು ಮುಂದುವರಿಸಿರುವ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಕಾರಿನಲ್ಲಿ ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳು ತನ್ನ ಸಹಚರರೊಂದಿಗೆ ಗರ್ಭಪಾತ ಮಾಡಿಸಿಕೊಳ್ಳಲೆಂದೇ ಕವಿತಾ ಮನೆಗೆ ಬಂದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ತಕ್ಷಣವೇ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ಸ್ಥಳೀಯರ ದೂರಿನ ಮೇರೆಗೆ ಬಾಗಲಕೋಟೆ ಡಿಎಚ್‌ಒ  ಡಾ. ಸುವರ್ಣಾ ಕುಲಕರ್ಣಿ ಹಾಗೂ ಮುಧೋಳ ಟಿಎಚ್‌ಒ  ಡಾ. ವೆಂಕಟೇಶ್ ಮಲಘಾಣ ನೇತೃತ್ವದ ತಂಡ ಮಹಾಲಿಂಗಪುರದಲ್ಲಿರುವ ಕವಿತಾ ಬಾಡನವರ ಮನೆಗೆ ದಿಢೀರ್ ಭೇಟಿ ನೀಡಿತು. ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕವಿತಾ ಮನೆಯಿಂದ ಪರಾರಿಯಾಗಿದ್ದು, ಮನೆಗೆ ಬೀಗ ಜಡಿಯಲಾಗಿತ್ತು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮನೆಯ ಬಾಗಿಲಿಗೆ ಕಾನೂನು ನೋಟಿಸ್ ಅಂಟಿಸಿದ್ದಾರೆ. “ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು. ಮುಂದಿನ ಭೇಟಿಯ ವೇಳೆಯೂ ಮನೆಯಲ್ಲಿ ಹಾಜರಿರದಿದ್ದರೆ, ಕಾನೂನುಬದ್ಧವಾಗಿ ಬೀಗ ಮುರಿದು ಒಳಪ್ರವೇಶಿಸಿ ತಪಾಸಣೆ ನಡೆಸಲಾಗುವುದು” ಎಂದು ನೋಟಿಸ್‌ನಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ತಡವಾಗಿ ಹೋಗಿದ್ದೇ ಹಿಂದಿನ ಸಾಲಲ್ಲಿ ಕೂರಲು ಕಾರಣ: ಸಿದ್ದರಾಮಯ್ಯ ಸ್ಪಷ್ಟನೆ

Spread the loveಬೆಂಗಳೂರು: ದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿಯವರ  ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದೆ ಕುಳಿತುಕೊಳ್ಳಲು ತಡವಾಗಿ ಬಂದಿದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ