Home / ಅಂತರಾಷ್ಟ್ರೀಯ / ಅಮೆರಿಕ ವಿಶೇಷ ತಂಡದಿಂದ ಚೀನಾ ವೈರಸ್ ಕಳ್ಳಾಟದ ತನಿಖೆ ………

ಅಮೆರಿಕ ವಿಶೇಷ ತಂಡದಿಂದ ಚೀನಾ ವೈರಸ್ ಕಳ್ಳಾಟದ ತನಿಖೆ ………

Spread the love

ವಾಷಿಂಗ್ಟನ್/ಚೀನಾ, ಏ.20-ಕಿಲ್ಲರ್ ಕೊರೊನಾ ವ್ಯಾಪನೆ ಮೂಲಕ ಜಗತ್ತಿನಾದ್ಯಂತ ಭಾರೀ ಸಾವು-ನೋವು ಮತ್ತು ಸೋಂಕು ಹೆಚ್ಚಳಕ್ಕೆ ಕಾರಣವೆನ್ನಲಾದ ಚೀನಾಗೆ ವಿಶೇಷ ತಜ್ಞರ ತಂಡವೊಂದನ್ನು ರವಾನಿಸಿ ತನಿಖೆ ನಡೆಸಲು ಅಮೆರಿಕ ಗಂಭೀರ ಚಿಂತನೆ ನಡೆಸಿದೆ.

ಅಮೆರಿಕದಲ್ಲಿ 41,000 ಮಂದಿ ಸೇರಿದಂತೆ ವಿಶ್ವಾದ್ಯಂತ 1.65 ಲಕ್ಷ ಜನರ ಸಾವಿಗೆ ಚೀನಾ ಹೊಣೆ ಎಂಬುದು ಸಾಬೀತಾದಲ್ಲಿ ಆ ದೇಶ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ನಿನ್ನೆಯಷ್ಟೇ ಖಡಕ್ ಎಚ್ಚರಿಕೆ ನೀಡಿದ್ದರು.

ರಾಜಧಾನಿ ವಾಷಿಂಗ್ಟನ್‍ನ ಶ್ವೇತಭವನದಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಕೋವಿಡ್-19 ಸೋಂಕಿನ ವಿರುದ್ಧ ಹೆಚ್ಚಿನ ತನಿಖೆ ನಡೆಸಲು ಚೀನಾದೊಳಗೆ ತಜ್ಞರ ವಿಶೇಷ ತಂಡವನ್ನು ಕಳುಹಿಸಲು ಬಯಸಿರುವುದಾಗಿ ತಿಳಿಸಿದರು.

ಕೊರೊನಾ ಪಿಡುಗನ್ನು ಒಂದು ಪ್ಲೇಗ್ ಎಂದು ಬಣ್ಣಿಸಿದ ಅವರು, ಚೀನಾ ಈ ವೈರಾಣು ಸಂಬಂಧ ನೀಡುತ್ತಿರುವ ಹೇಳಿಕೆಗಳು ಮತ್ತು ಕೈಗೊಂಡಿರುವ ಕ್ರಮಗಳು ನಮಗೆ ತೃಪ್ತಿ ತಂದಿಲ್ಲ ಎಂದು ಅವರು ಬೀಜಿಂಗ್ ಕಳ್ಳಾಟದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೊರೊನಾ ವೈರಾಣು ದಾಳಿ ಚೀನಾದಲ್ಲಿ ಕಾಣಿಸಿಕೊಂಡಾಗಲೇ ನಾವು ಆ ದೇಶವನ್ನು ಸಂಪರ್ಕಿಸಿ ಅಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಯತ್ನಿಸಿದೆವು. ಅವರಿಂದ ಸರಿಯಾದ ಉತ್ತರ ಲಭಿಸಿಲ್ಲ. ಈಗಲೂ ಚೀನಾದಿಂದ ಸರಿಯಾದ ಮಾಹಿತಿ ದೊರೆಯುತ್ತಿಲ್ಲ ಎಂದು ಟ್ರಂಪ್ ವಿಷಾದಿಸಿದರು.


Spread the love

About Laxminews 24x7

Check Also

ಜಾರಕಿಹೊಳಿ ಸಾಮ್ರಾಜ್ಯ ನಿರ್ಮಿಸುವಲ್ಲಿ ಕಲಾಲ ಸಮಾಜದ ಕೊಡುಗೆ ಅಪಾರ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ : ಕಳೆದ ಐದು ದಶಕಗಳ ಹಿಂದೆ ನಮ್ಮ ಕುಟುಂಬ ಸ್ಥಾಪಿಸಿರುವ ಸಾಮ್ರಾಜ್ಯದಲ್ಲಿ ಕಲಾಲ ಸಮಾಜದವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ