ಕನಕಪುರ: ಶಾಂತಿಯ ಹೆಸರಿನಲ್ಲಿ ಬಾಲಗಂಗಾಧರ ತಿಲಕ್ ಪ್ರತಿಮೆ ನಿರ್ಮಾಣ ಮಾಡಬೇಕಿತ್ತು. ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಾಣ ಮಾಡಿದ್ದರೂ ಅಡ್ಡಿಯಿಲ್ಲ, ಆದರೆ ಸೋನಿಯಾ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲು ನಮ್ಮ ಅಡ್ಡಿ ಇದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ನಾವು ಶಾಂತಿ ಕದಡಲು ಇಲ್ಲಿ ಬಂದಿಲ್ಲ. ಹಿಂದು ಸಮಾಜವನ್ನು ನಾಶ ಮಾಡುವುದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಅವರಿಗೆ ತಾಕತ್ತಿದ್ದರೆ ಏಸು ಪ್ರತಿಮೆ ಮಾಡಲಿ. ಹಿಂದು ತಾಕತ್ತು ಏನು ಎಂದು ಅವರಿಗೆ ತೋರಿಸುತ್ತೇವೆ.
ಡಿಕೆಶಿ ಅವರಿಗೆ ನಾನು ಪರಿಚಯ ಇಲ್ಲವಂತೆ. ಇರಲಿ ನೋಡೋಣ, ಅವರಿಗೆ ಪರಿಚಯ ಮಾಡಿಕೋಡೋಣ. ಹಿಂದುಗಳು ಮುಗ್ಧರು. ಅಂತಹ ಮುಗ್ಧರನ್ನ ಮೋಸದಿಂದ ಮತಾಂತರ ಮಾಡಲಾಗಿದೆ. ಇದರ ವಿರುದ್ಧ ನಮ್ಮ ಹೋರಾಟ ನಡೆಸುತ್ತೇವೆ ಎಂದರು.
ಹಿಂದೆ ನೀರಿನಲ್ಲಿ ಕಟ್ಟಿಗೆಯ ಶಿಲುಬೆ ತೇಲಿ ಬಿಟ್ಟು ಮತಾಂತರ ಮಾಡಿದ್ದರು. ಈಗ ಕಬ್ಬಿಣದ ಶಿಲುಬೆ ಇದೆ. ನೋಡೋಣ ಎಂದು ಪ್ರಭಾಕರ್ ಭಟ್ ಹೇಳಿದರು.