ಕಾಂಗ್ರೆಸ್ ಮುಖಂಡ, ರಾಹುಲ್ ಗಾಂಧಿ ಅತ್ಯಾಪ್ತ ಜ್ಯೋತಿರಾದಿತ್ಯ ಸಿಂಧ್ಯಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾದ ಬೆನ್ನಲ್ಲೇ ಸಿಂಧ್ಯಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜ್ಯ ಹಾಗೂ ದೇಶದ ಜನರ ಸೇವೆ ಮಾಡಬೇಕೆಂಬ ನನ್ನ ಧ್ಯೇಯ ಇನ್ಮುಂದೆಯೂ ಹಾಗೇ ಮುಂದುವರೆಯಲಿದೆ. ಆದ್ರೆ ಈ ಪಕ್ಷದಲ್ಲಿ ಇದ್ದುಕೊಂಡು ಅದನ್ನು ಮಾಡಲು ಸಾಧ್ಯವಿಲ್ಲ ಅಂತ ನನಗೆ ಅನ್ನಿಸುತ್ತಿದೆ. ಸದ್ಯ ನನಗೆ ಹೊಸ ಆರಂಭಕ್ಕೆ ಇದು ಸೂಕ್ತ ಸಮಯ ಅಂತ ಅನ್ನಿಸುತ್ತಿದೆ ಎಂದು ಅವರು ರಾಜೀನಾಮೆಯಲ್ಲಿ ತಿಳಿಸಿದ್ದಾರೆ
ಸಿಂಧ್ಯಾ ಬಿಜೆಪಿಗೆ ಸೇರ್ಪಡೆಯಾಗ್ತಾರೆ ಅನ್ನೋ ಮಾತುಗಳು ಜೋರಾಗಿರುವ ಹೊತ್ತಲ್ಲೇ ರಾಜೀನಾಮೆ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.