Breaking News

ಜಿಲ್ಲಾಸ್ಪತ್ರೆ ಆವರಣದಲ್ಲೆ ಹೆರಿಗೆ: ಜಿಲ್ಲಾಸ್ಪತ್ರೆ ಸಿಬ್ಬಂದಿಯಿಂದ ನಿರ್ಲಕ್ಷ್ಯ ಆರೋಪ

Spread the love

ಚಾಮರಾಜನಗರ: ಹೆರಿಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದ ಬಿಳಿಗಿರಿ ರಂಗನಬೆಟ್ಟದ ಸೋಲಿಗರ ಪೋಡಿನ ಮಹಿಳೆಯೊಬ್ಬರನ್ನು ಜಿಲ್ಲಾಸ್ಪತ್ರೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹೆರಿಗೆ ವಾರ್ಡ್ ಗೆ ಕರೆದುಕೊಂಡು ಹೋಗದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪ ಎದುರಾಗಿದೆ. ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದೆದುರೇ ಮಹಿಳೆಯರು ಸೀರೆಯನ್ನು ಮರೆಮಾಡಿ ಹೆರಿಗೆ ಮಾಡಿಸಿದ ಘಟನೆ ಜರುಗಿದೆ.

ಹೆರಿಗಾಗಿ ಸೋಲಿಗ ಮಹಿಳೆಯನ್ನು ಅರಣ್ಯ ಇಲಾಖೆಯ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಕರೆತಂದ ಗರ್ಭಿಣಿಯನ್ನು ಹೆರಿಗೆ ವಾರ್ಡ್ ಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡದ ಜಿಲ್ಲಾಸ್ಪತ್ರೆಯ ಸಿಬ್ಬಂದಿಯ ಬೇಜಾಬ್ದಾರಿಯಿಂದ ಅರಣ್ಯ ಇಲಾಖೆಯ ವಾಹನದಿಂದ ಕೆಳಗಿಳಿದ ಕೂಡಲೇ ಹೆರಿಗೆಯಾಯಿತು.

ಇದರಿಂದ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹೆರಿಗೆಯಾದ ಮಹಿಳೆಯನ್ನು ಹಾಗೂ ಮಗುವನ್ನು ಹೆರಿಗೆ ವಾರ್ಡ್ ಕರೆದೊಯ್ದದರು.

ಎರಡು ದಿನಗಳ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವರ ಭೇಟಿ ಸಂದರ್ಭದಲ್ಲಿ ಬೆಡ್ ವ್ಯವಸ್ಥೆಇಲ್ಲದೆ ಗರ್ಭಿಣಿಯರು ನೆಲದ ಮೇಲೆ ಮಲಗಿ ಪರದಾಡಿದ್ದರು. ಇಂದು ಸೋಲಿಗ ಗರ್ಭಿಣಿಯನ್ನು ಹೆರಿಗೆ ವಾರ್ಡ್ ಗೆ ಕರೆದುಕೊಂಡು ಹೋಗಲು ಆಸ್ಪತ್ರೆ ಸಿಬ್ಬಂದಿ ತೋರಿದ ಬೇಜವಾಬ್ದಾರಿಯಿಂದ ಮಣ್ಣಿನ ನೆಲದ ಮೇಲೆಯೇ ಇತರೆ ಊರುಗಳಿಂದ ಆಗಮಿಸಿದ್ದ ಮಹಿಳೆಯರು ಸೀರೆಯನ್ನು ಮರೆಮಾಡಿಕೊಂಡು ಹೆರಿಗೆ ಮಾಡಿಸಿರುವುದು ಉತ್ತಮ ಕೆಲಸವೇ ಆದರೂ ಈ ಘಟನೆ ಜಿಲ್ಲಾಸ್ಪತ್ರೆಯ ಸಿಬ್ಬಂದಿಯಿಂದ ನಡೆದ ಅಮಾನವೀಯ ಕೃತ್ಯವೇ ಆಗಿದೆ.


Spread the love

About Laxminews 24x7

Check Also

ರಾಜ್ಯ ಸರ್ಕಾರ ದಿವಾಳಿಯಾಗಿದೆ: ಪ್ರಹ್ಲಾದ ಜೋಶಿ‌

Spread the loveರಾಜ್ಯ ಸರ್ಕಾರ ದಿವಾಳಿಯಾಗಿದೆ: ಪ್ರಹ್ಲಾದ ಜೋಶಿ‌ ಹುಬ್ಬಳ್ಳಿ: ರೈತರ ಹೆಸರು ಹೇಳಿ ಹಾಲಿನ‌ ದರ ಹಚ್ಚಳಕ್ಕೆ ರಾಜ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ