Breaking News

ಮಂತ್ರಾಲಯದಲ್ಲಿ ಶಿವರಾತ್ರಿ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಮಹಾರುದ್ರಾಭಿಷೇಕ

Spread the love

ರಾಯಚೂರು: ಮಹಾಶಿವರಾತ್ರಿ ಹಿನ್ನೆಲೆ ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ  ಶಿವಲಿಂಗಕ್ಕೆ ವಿಶೇಷ ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ರುದ್ರದೇವರಿಗೆ ಅಭಿಷೇಕ ನೆರವೇರಿಸಿದರು.

ಮಠದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳು ಹಾಗೂ ಮಠದ ಪಂಡಿತರು ನಿರಂತರವಾಗಿ ಮಂತ್ರಗಳನ್ನ ಪಠಿಸಿದರು. ಮಠದ ಶ್ರೀಗಳು ಮಹಾರುದ್ರಾಭಿಷೇಕದ ಜೊತೆ ವಿವಿಧ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದರು.

ಇನ್ನೂ ರಾಯಚೂರು ನಗರದ ಎಲ್ಲಾ ಈಶ್ವರ ದೇವಾಲಯಗಳಲ್ಲೂ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಭಕ್ತರ ದಂಡು ದೇವಾಲಯಗಳಿಗೆ ಹರಿದು ಬರುತ್ತಿದೆ. ನಗರದ ನಂದೀಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ಕೊದಂಡರಾಮ ದೇವಾಲದ, ಈಶ್ವರ ದೇವಾಲಯಗಳಲ್ಲಿ ಮಹಾಶಿವರಾತ್ರಿ ಜಾಗರಣೆ ಹಿನ್ನೆಲೆ ಸಂಜೆಯಿಂದ ವಿಶೇಷ ಸಂಗೀತ, ಭಜನೆ ಕಾರ್ಯಕ್ರಮಗಳು ಜರುಗಲಿವೆ.


Spread the love

About Laxminews 24x7

Check Also

ತುಂಗಭದ್ರಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ದುರ್ಮರಣ

Spread the loveರಾಯಚೂರು: ತುಂಗಭದ್ರಾ ನದಿಗೆ  ಸ್ನಾನಕ್ಕೆ ತೆರಳಿದ್ದ ನಾಲ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ  ಕೊಸಗಿ ಮಂಡಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ